Featured
ಮೋದಿ ಬಾಲ್ಯ ಕುರಿತಾದ ಸಿನಿಮಾ ಮನ್ ಬೈರಾಗಿ ಪೋಸ್ಟರ್ ರಿಲೀಸ್:
ಮುಂಬೈ: ಖ್ಯಾತ ಬಾಲಿವುಡ್ ನಿರ್ದೇಶಕ ಹಾಗೂ ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ ಹೊಸ ಸಿನಿಮಾ ಪ್ರಧಾನಿ ನರೇಂದ್ರ ಮೋದಿ ಬಾಲ್ಯದ ದಿನಗಳನ್ನಾಧರಿಸಿ ಇರಲಿದೆ. ಪ್ರಧಾನಿ ಮೋದಿ ಹುಟ್ಟುಹಬ್ಬವಾದ ನಿನ್ನೆ ಈ ಸಿನಿಮಾದ ಪೋಸ್ಟರ್‌ನ್ನ ನಟ ಅಕ್ಷಯ್ ಕುಮಾರ್ ಅನಾವರಣಗೊಳಿಸಿದರು.
ಈ ಸಿನಿಮಾದ ಹೆಸರು ʻಮನ್ ಬೈರಾಗಿʼ ಪ್ರಧಾನಿ ಮೋದಿ ಬಾಲ್ಯದ ದಿನಗಳು ಹಾಗೂ ರಾಷ್ಟ್ರರಕ್ಷಣೆಗೆ ಪಣತೊಡಲು ಕಾರಣಗಳನ್ನ ಆಳ ಅಧ್ಯಯನ ನಡೆಸಿ ಸಿನಿಮಾ ಕಥೆ ಮಾಡಲಾಗಿದೆ ಎಂದು ಚಿತ್ರದ ನಿರ್ದೇಶಕರೂ ಆಗಿರುವ ಸಂಜಯ್ ತ್ರಿಪಾಠಿ ಹೇಳುತ್ತಾರೆ. ಈ ಸಿನಿಮಾಕ್ಕೆ ಸಂಜಯ್ ಲೀಲಾ ಬನ್ಸಾಲಿ ಜೊತೆ ಮಹಾವೀರ್ ಜೈನ್ ಕೂಡ ಹಣ ಹಾಕುತ್ತಿದ್ದಾರೆ. ಸಿನಿಮಾ ಕಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಜೈನ್, ಈ ಸಿನಿಮಾ ಯುವಕರಿಗೆ ಖಂಡಿತಾ ನಾಟುತ್ತೆ ಎಂದು ಹೇಳುತ್ತಾರೆ.
Continue Reading
Advertisement
You may like
Click to comment