Connect with us

ಜ್ಯೋತಿಷ್ಯ

ಭಗವಾನ್ ರಾಮನಿಗೆ ಈ ವಸ್ತುಗಳನ್ನ ಅರ್ಪಿಸಿ, ಸಂತೋಷ-ಸಮೃದ್ಧಿ ಸಿಗುತ್ತೆ

festival : ಇಂದು ದೇಶದಲ್ಲಿ ರಾಮ ನವಮಿಯ ಸಂಭ್ರಮ ಮನೆ ಮಾಡಿದೆ. ಭಕ್ತರು ಈಗಾಗಲೇ ಹಬ್ಬವನ್ನ ಆಚರಿಸುತ್ತಿದ್ದಾರೆ. ಈ ದಿನ ರಾಮನಿಗೆ ವಿಶೇಷ ಪೂಜೆಗಳನ್ನ ಮಾಡಲಾಗುತ್ತದೆ. ಅದರ ಜೊತೆಗೆ ಈ ದಿನ ಕೆಲ ಮುಖ್ಯವಾದ ವಸ್ತುಗಳನ್ನ ರಾಮನಿಗೆ ಅರ್ಪಣೆ ಮಾಡಿದರೆ ಒಳ್ಳೆಯ ಫಲಗಳು ಸಿಗುತ್ತದೆ ಎನ್ನುವ ನಂಬಿಕೆ ಇದೆ. ಆ ವಸ್ತುಗಳು ಯಾವುವು ಎಂಬುದು ಇಲ್ಲಿದೆ.

ಶ್ರೀರಾಮ ನವಮಿಯ ಸಂದರ್ಭದಲ್ಲಿ, ದೇಶದಾದ್ಯಂತ ರಾಮ ಮಂದಿರಗಳಲ್ಲಿ ಭಗವಾನ್ ರಾಮನನ್ನು ಪೂಜಿಸಲಾಗುತ್ತದೆ ಮತ್ತು ರಾಮ ಜನ್ಮೋತ್ಸವವನ್ನು ಅದ್ಧುರಿಯಾಗಿ ಆಚರಿಸಲಾಗುತ್ತದೆ. ರಾಮ ನವಮಿಯ ಸಂದರ್ಭದಲ್ಲಿ, ನೀವು ಕೆಲವು ಸರಳ ಕೆಲಸಗಳನ್ನು ಮಾಡುವುದರೊಂದಿಗೆ ನಿಮ್ಮ ಜೀವನವನ್ನು ಸಂತೋಷದಿಂದ ತುಂಬಿರುತ್ತದೆ ಎನ್ನುವ ನಂಬಿಕೆ ಇದೆ. ಪುರಾಣಗಳ ಪ್ರಕಾರ, ಶ್ರೀರಾಮನು ಚೈತ್ರ ಶುದ್ಧ ನವಮಿ, ಪುನರ್ವಸು ನಕ್ಷತ್ರದ ಕರ್ಕ ಲಗ್ನದಲ್ಲಿ, ಅಭಿಜಿತ್ ಮುಹೂರ್ತದಲ್ಲಿ, ಅಂದರೆ ಮಧ್ಯಾಹ್ನ 12 ಗಂಟೆಗೆ ಜನಿಸಿದ. ಹಾಗಾಗಿ ಈ ದಿನಕ್ಕೆ ಹೆಚ್ಚಿನ ಮಹತ್ವವಿದೆ.

ರಾಮಾಯಣದ ಪ್ರಕಾರ, ರಾಮ ವಿಷ್ಣುವಿನ ಏಳನೇ ಅವತಾರ ಎನ್ನಲಾಗುತ್ತದೆ. ಈ ವರ್ಷ ರಾಮ ನವಮಿ 17 ಏಪ್ರಿಲ್ 2024 ರಂದು. ರಾಮನವಮಿಯಂದು ಭಗವಾನ್ ರಾಮನ ಮಗುವಿನ ರೂಪವನ್ನು ಪೂಜಿಸಲಾಗುತ್ತದೆ. ಈ ದಿನ ರಾಮನಿಗೆ ಕೆಲ ವಸ್ತುಗಳನ್ನ ನೈವೇದ್ಯ ಸಗ ಮಾಡಬೇಕು. ಹಾಗಾದ್ರೆ ಈ ದಿನ ಮಾಡಬೇಕಾದ ಪ್ರಮುಖ ಕೆಲಸ ಹಾಗೂ ನೈವೇದ್ಯಗಳು ಯಾವುವು ಎಂಬುದು ಇಲ್ಲಿದೆ.

ಪಂಜಿರಿ – ಈ ಪಂಜಿರಿ ಎನ್ನುವ ಪದಾರ್ಥವು ಬಹಳ ವಿಶೇಷವಾಗಿದ್ದು, ಇದನ್ನ ಸಾಮಾನ್ಯವಾಗಿ ಉತ್ತರ ಭಾರತದ ಭಾಗಗಳಲ್ಲಿ ಸೇವನೆ ಮಾಡುತ್ತಾರೆ. ಈ ಪಂಜಿರಿ ಎಂದರೆ ರಾಮನಿಗೆ ಬಹಳ ಇಷ್ಟವಂತೆ. ಅದರಲ್ಲೂ ಶ್ರೀರಾಮನಿಗೆ ಕೊತ್ತಂಬರಿ ಸೊಪ್ಪು, ತುಪ್ಪ ಮತ್ತು ಸಕ್ಕರೆಯಿಂದ ಮಾಡಿದ ಪಂಜಿರಿ ಎಂದರೆ ತುಸು ಜಾಸ್ತಿಯೇ ಪ್ರೀತಿ ಎನ್ನಲಾಗುತ್ತದೆ. ಹಾಗಾಗಿ ರಾಮ ನವಮಿ ದಿನ ಇದನ್ನ ಅರ್ಪಣೆ ಮಾಡಿದರೆ ರಾಮನಿಗೆ ಸಂತೋಷವಾಗುತ್ತಾನೆ ಮತ್ತು ದಾಂಪತ್ಯ ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.

ಪಾನಕ-ಕೋಸಂಬರಿ: ರಾಮ ನವಮಿಯಂದು ನಾವು ರಾಮನಿಗೆ ತಪ್ಪದೇ ಅರ್ಪಿಸಬೇಕಾದ ನೈವೇದ್ಯಗಳು ಎಂದರೆ ಪಾನಕ ಹಾಗೂ ಕೋಸಂಬರಿ. ದಕ್ಷಿಣ ಭಾರತದಲ್ಲಿ ಪಾನಕ ಹಾಗೂ ಕೋಸಂಬರಿಯನ್ನ ದೇವಸ್ಥಾನಗಳಲ್ಲಿ ಸಹ ಅರ್ಪಿಸಲಾಗುತ್ತದೆ. ಇದನ್ನ ರಾಮನಿಗೆ ಅರ್ಪಣೆ ಮಾಡುವುದರಿಂದ ಹಾಗೂ ಇತರ ಭಕ್ತರಿಗೆ ಸಹ ಹಂಚುವುದರಿಂದ ಜೀವನದಲ್ಲಿನ ಕಷ್ಟಗಳಿಗೆ ಪರಿಹಾರ ಸಿಗುತ್ತದೆ.

ಪಂಚಾಮೃತ – ಎಲ್ಲರಿಗೂ ಗೊತ್ತಿರುವಂತೆ ವಿಷ್ಣುವಿನ ಆರಾಧನೆಯಲ್ಲಿ ಪಂಚಾಮೃತವು ಬಹಳ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಅಲ್ಲದೇ, ವಿಷ್ಣುವಿನ ಪ್ರತಿಯೊಂದು ಅವತಾರಗಳ ಪೂಜೆ ಮಾಡುವಾಗ ಪಂಚಾಮೃತವನ್ನ ತಪ್ಪದೇ ನೈವೇದ್ಯ ಮಾಡಬೇಕು. ಹಾಲು, ಮೊಸರು, ತುಪ್ಪ ಮತ್ತು ಸಕ್ಕರೆಯ ಪಂಚಾಮೃತವನ್ನು ನೈವೇದ್ಯ ಮಾಡಿದರೆ ಹಣಕಾಸಿನ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತದೆ ಎನ್ನುವ ನಂಬಿಕೆ ಇದೆ.

Advertisement

ಅಕ್ಕಿ ಪಾಯಸ – ಭಗವಾನ್ ರಾಮನಿಗೆ ಪಾಯಸ ಎಂದರೆ ತುಂಬಾ ಇಷ್ಟ. ಅನ್ನವನ್ನು ದೇವರ ಆಹಾರ ಎನ್ನುತ್ತಾರೆ. ರಾಮ ನವಮಿಯಂದು ಅಕ್ಕಿಯ ಪಾಯಸ ಅರ್ಪಿಸುವುದರಿಂದ ಲಕ್ಷ್ಮಿ ದೇವಿಯ ಆಶೀರ್ವಾದ ಸಿಗುತ್ತದೆ ಎನ್ನುವ ನಂಬಿಕೆ ಇದೆ. ಅಲ್ಲದೇ, ರಾಮನ ಜನ ಅಕ್ಕಿ ಪಾಯಸ ಶಕ್ತಿಯಿಂದಲೇ ಆಗಿದ್ದು ಎನ್ನಲಾಗುತ್ತದೆ, ಹಾಗಾಗಿ ಇದನ್ನ ಅರ್ಪಣೆ ಮಾಡುವುದರಿಂದ ನಿಮಗೆ ಸಂತಾನ ಭಾಗ್ಯ ಸಹ ಲಭಿಸುತ್ತದೆ ಎನ್ನುವ ನಂಬಿಕೆ ಇದೆ.

ರಾಮ ನವಮಿಯಂದು ಶ್ರೀರಾಮನ ಮೂರ್ತಿಯನ್ನು ತೊಟ್ಟಿಲಲ್ಲಿ ಇಟ್ಟು ರಾಮ ನವಮಿಯನ್ನು ಅನೇಕರು ಆಚರಿಸುತ್ತಾರೆ. ಈ ದಿನ ಮಾಡುವಂತಹ ಉಪವಾಸವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದಲ್ಲದೆ, ಇದು ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಎಲ್ಲಾ ಪಾಪಗಳು ದೂರವಾಗುತ್ತವೆ.

ಈ ದಿನ ಪೂಜೆ ಮಾಡುವಾಗ ಶ್ರೀಗಂಧ ಮತ್ತು ಬೊಟ್ಟನ್ನು ಇಟ್ಟು ರಾಮನ ಚಿತ್ರಕ್ಕೆ ಪುಷ್ಪಗಳನ್ನು ಅರ್ಪಿಸಬೇಕು. ರಾಮರಕ್ಷಾಸ್ತೋತ್ರ ಓದಬೇಕು. ಈ ದಿನ ಶ್ರೀರಾಮನಿಗೆ ನೈವೇದ್ಯ ಮಾಡಬೇಕು. ಜೊತೆಗೆ ರಾಮ ನಾಮವನ್ನು ಜಪಿಸಬೇಕು. ರಾಮನಿಗೆ ರಾಮ ನವಮಿಯ ದಿನದಂದು ತುಳಸಿದಳ, ಸೀತೆ ಮತ್ತು ಹನುಮಂತನನ್ನು ವೀಳ್ಯದೆಲೆಯಿಂದ ಪೂಜಿಸಬೇಕು.

ಆರೋಗ್ಯ4 days ago

ಕಾಫಿ ಜೊತೆ 1 ಸ್ಪೂನ್‌ ತುಪ್ಪ ಸೇರಿಸಿ ಕುಡಿರಿ, ಸೊಂಟ ಸುತ್ತ ಇರೋ ಬೊಜ್ಜು ಅದ್ರಂತೆ ಕರಗಿಹೋಗುತ್ತೆ!

ರಾಜಕೀಯ2 weeks ago

ಶ್ರೀರಾಮನ 500 ವರ್ಷಗಳ ವನವಾಸಕ್ಕೆ ಮುಕ್ತಿ, ಪ್ರಧಾನಿ ನರೇಂದ್ರ ಮೋದಿಯಿಂದ ರಾಮರಾಜ್ಯ ನಿರ್ಮಾಣ

ಆರೋಗ್ಯ2 weeks ago

ಹೆಂಡತಿ ಗರ್ಭಿಣಿಯಾಗಿದ್ದಾಗ ಪ್ರತಿಯೊಬ್ಬ ಗಂಡಂದಿರು ಮಾಡಲೇಬೇಕಾದ ಕೆಲಸಗಳಿವು!

ಸಿನಿಮಾ2 weeks ago

ಚಾಮರಾಜಪೇಟೆ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ, ಪಂಚಭೂತಗಳಲ್ಲಿ ಪ್ರಚಂಡ ಕುಳ್ಳ ಲೀನ

ಸಿನಿಮಾ2 weeks ago

ದ್ವಾರಕೀಶ್ ಅಂತಿಮ ದರ್ಶನಕ್ಕೆ ಬಂದ ಯಶ್ ದಂಪತಿ

ಸಿನಿಮಾ2 weeks ago

ಮಂತ್ರಾಲಯ ಭಕ್ತರಿಗೆ ಒಂದೊಳ್ಳೆ ಗಿಫ್ಟ್ ಕೊಟ್ಟಿದ್ರು ಈ ಹಾಸ್ಯನಟ!

ಜ್ಯೋತಿಷ್ಯ2 weeks ago

ಭಗವಾನ್ ರಾಮನಿಗೆ ಈ ವಸ್ತುಗಳನ್ನ ಅರ್ಪಿಸಿ, ಸಂತೋಷ-ಸಮೃದ್ಧಿ ಸಿಗುತ್ತೆ

ಬೆಂಗಳೂರು2 weeks ago

ದ್ವಾರಕೀಶ್ ನಿಧನಕ್ಕೆ ಪ್ರಧಾನಿ ಮೋದಿ, ರಜನಿಕಾಂತ್ ಸಂತಾಪ..!

ಕ್ರೀಡೆ3 weeks ago

ಟಾಸ್​​ ಗೆದ್ದ ಬೆಂಗಳೂರು ಟೀಂ, ಆರ್​​ಸಿಬಿ ಪ್ಲೇಯಿಂಗ್​ 11ನಿಂದ ಸಿರಾಜ್-ಮ್ಯಾಕ್ಸಿ​ ಔಟ್!

ಬೆಂಗಳೂರು3 weeks ago

ಶಿವರಾಜ್​ಕುಮಾರ್ ಬ್ಯಾಂಕ್ ಬ್ಯಾಲೆನ್ಸ್ ಎಷ್ಟು ಕೋಟಿ ಸಾಲ ಗೊತ್ತಾ..?

Featured3 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured5 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured3 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured10 months ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

Ayurveda
Featured4 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

ಜ್ಯೋತಿಷ್ಯ5 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Featured5 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured10 months ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ

Featured5 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

ಆರೋಗ್ಯ2 years ago

ಕರ್ನಾಟಕದಲ್ಲಿ ಒಂದೇ ದಿನ 21,390 ಕೊರೋನಾ.! ಲಾಕ್​ಡೌನ್​ ಫಿಕ್ಸಾ.?