Featured
ಈ ಫೋಟೋಕ್ಕೊಂದು ಶೀರ್ಷಿಕೆ ನೀಡಿ : ಈ ಬಸ್ ದೆಹಲಿಯಲ್ಲಿನ ಸಮ-ಬೆಸ ನಿಯಮಕ್ಕೆ ಸರಿಯಾಗಿದೆ.

ಟ್ವಿಟ್ಟರ್ ಡೆಸ್ಕ್: ಮಹಿಂದ್ರಾ ಗ್ರೂಪ್ ಚೇರ್ಮನ್ ಆನಂದ್ ಮಹಿಂದ್ರಾ ಯಾರಿಗೆ ಗೊತ್ತಿಲ್ಲ ಹೇಳಿ, ಸದಾ ಟ್ವಿಟ್ಟರ್‌ನಲ್ಲಿ ಆಕ್ಟೀವ್ ಇರುವ ಇವರು ಸದಾ ಕ್ರೀಯಾಶೀಲ ಪೋಸ್ಟ್‌ಗಳನ್ನ ಮಾಡುತ್ತಾ ಇರ್ತಾರೆ. ಸದ್ಯ ಆನಂದ್ ಮಹಿಂದ್ರಾ ಡಬ್ಬಲ್ ಡೆಕ್ಕರ್ ಬಸ್‌ನ ಫೋಟೋ ಹಾಕಿ ಟ್ವೀಟ್ ಮಾಡಿ ಕ್ಯಾಪ್ಷನ್ ನೀಡಿ ಎಂದದ್ದೇ ತಡ, ಅಬ್ಬಾ..! ಎಂತೆಂಥಾ ಪ್ರತಿಭೆಗಳು ಹಾಕಿರೋ ಪೋಟೋ ಕ್ಯಾಪ್ಷನ್‌ಗೆ ಆನಂದ್ ಮಹಿಂದ್ರಾ ಬೆಸ್ತು ಬಿದ್ದಿದ್ದರೂ ಬಿದ್ದಿರಬಹುದು.
ಒಬ್ಬನಿಗೆ ಈ ಬಸ್ ಹ್ಯಾಂಗೋವರ್, ಇನ್ನೊಬ್ಬನಿಗೆ ವಿಕ್ರಮ್ ಬೇತಾಳ ಹೀಗೆ ನೂರಾರು ರಿಪ್ಲೇಗಳು, ಅದರಲ್ಲಿ ಒಬ್ಬ ಮಾತ್ರ ಸಂದರ್ಭಕ್ಕನುಗುಣವಾಗಿ ಸಖತ್ ಕಮೆಂಟ್ ಹಾಕಿದ್ದಾನೆ. ಆತ ಈ ಬಸ್ ನೋಡಿ, ʻಫಾರ್ ಆಡ್ ಇವನ್ʼ ಡೆಲ್ಲಿ ರೋಡ್ಸ್ ಅಂತ ಹಾಕಿದ್ದಾನೆ ಅಂದರೆ ದೆಹಲಿಯ ಸಮ ಬೆಸ ನಿಯಮಕ್ಕೆ ಇದು ಅನುಗುಣವಾಗಿದೆ, ಉಲ್ಟಾ ಮಲಗಿಸಿದರೆ ಇನ್ನೊಂದು ನಂಬರ್ ಪ್ಲೇಟ್ ಎಂಬರ್ಥ ಆತನದು.
Post Views: 4
Continue Reading
Advertisement
You may like
Click to comment
















