Connect with us

ಟ್ರೆಂಡಿಂಗ್

‘ಬ್ಲಿಂಕ್’ಗೆ ಬಹುಪರಾಕ್ ಎಂದ ಪ್ರೇಕ್ಷಕರು ಮತ್ತು ಸಿನಿ ತಾರೆಯರು.!

cinema : ಸ್ಯಾಂಡಲ್ವುಡ್ ಸಿನಿಮಾ ರಂಗ ಹೊಸಬರನ್ನ ಪರಿಚಯಿಸುತ್ತಿದ್ದು, ‘ಬ್ಲಿಂಕ್’ ಎಂಬ ಸಿನಿಮಾ ಸ್ಯಾಂಡಲ್ವುಡ್ಗೆ ಕಾಲಿಟ್ಟಿದೆ. ‘ಬ್ಲಿಂಕ್’ ಹೊಸಬರ ಚಿತ್ರವಾಗಿದೆ. ಹಾಗೆಂದ ಮಾತ್ರಕ್ಕೆ ಇದು ಮಾಮೂಲಿ ಚಿತ್ರವಲ್ಲ. ಬದಲಿಗೆ ಹೊಸಬರ ವಿಭಿನ್ನ ಪ್ರಯತ್ನದ ಸಿನಿಮಾವಾಗಿದೆ. ಇಂತಹ ತಂಡಗಳನ್ನು ಪ್ರೇಕ್ಷಕ ಬೆನ್ನು ತಟ್ಟುಬೇಕು ಎಂದಿದ್ದಾರೆ ಶಿವಣ್ಣ.

ಬ್ಲಿಂಕ್ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಕೇಳುತ್ತಿರುವ ಹಿನ್ನೆಲೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿರುವ ಶಿವಣ್ಣ, ಬ್ಲಿಂಕ್ ಚಿತ್ರದ ಬಗ್ಗೆ ತುಂಬಾ ಕೇಳ್ತಾ ಇದೀನಿ. ಆದಷ್ಟು ಬೇಗ ನೋಡ್ತೀನಿ. ಹೀಗೆ ಹೊಸ ಪ್ರಯತ್ನಕ್ಕೆ ಪ್ರೇಕ್ಷಕರು ಬೆನ್ನು ತಟ್ಟಿದಾಗ ರಂಗಿತರಂಗ, ಉಳಿದವರು ಕಂಡಂತೆ, ಗೋಧಿ ಬಣ್ಣ ಸಾಧಾರಣ ಮೈ ಕಟ್ಟು, ಹೀಗೆ ಎಷ್ಟೋ ಚಿತ್ರಗಳು ಗೆಲ್ಲೋದಕ್ಕೆ ಸಾಧ್ಯವಾಯಿತು. ಈ ಹೊಸ ತಂಡ ತಮ್ಮ ಶಕ್ತಿ ಮೀರಿ ಪ್ರಯತ್ನಪಟ್ಟಿದೆ. ಥಿಯೇಟರ್ ಗೆ ಬಂದು ಬ್ಲಿಂಕ್ ಚಿತ್ರವನ್ನು ನೋಡಿ ಎಂದು ಬರೆದುಕೊಂಡಿದ್ದಾರೆ.

ಬ್ಲಿಂಕ್ ಸಿನಿಮಾ ಮಲಯಾಳಂನಲ್ಲಿ ಬಂದಿದ್ರೆ ಕನ್ನಡಿಗರೆಲ್ಲಾ ಈ ಚಿತ್ರ ನೋಡ್ತಾ ಇದ್ರು… ಆದ್ರೆ ಇದು ಕನ್ನಡ ಸಿನಿಮಾ ಅದಕ್ಕೆ ಯಾರೂ ನೋಡುತ್ತಿಲ್ಲ ಅಂತಾ ನಿರ್ದೇಶಕ ಸಿಂಪಲ್ ಸುನಿ ಖಾರವಾಗಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಹೊಸಬರು ಚಿತ್ರರಂಗಕ್ಕೆ ಬಂದಾಗ ಹೊಸತನವನ್ನು ಹೊತ್ತು ಬರುತ್ತಾರೆ ಎಂಬುದಕ್ಕೆ ‘ಬ್ಲಿಂಕ್’ಸಿನಿಮಾ ಉತ್ತಮ ಉದಾಹರಣೆ. ಟೈಮ್ ಟ್ರಾವೆಲಿಂಗ್ನ ಕಹಾನಿಯನ್ನು ತೆರೆದಿಡುವ ಈ ಚಿತ್ರದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಯಾಗುತ್ತಿದೆ.

ಮಾರ್ಚ್ 8ರಂದು ಕರಟಕ ದಮನಕ ಹಾಗೂ ರಂಗನಾಯಕದಂತಹ ದೊಡ್ಡ ಸ್ಟಾರ್ಸ್ ಸಿನಿಮಾಗಳ ಜೊತೆಯಲ್ಲಿ ತೆರೆಗೆ ಬಂದ ಸಿನಿಮಾ ಬ್ಲಿಂಕ್. ಈ ಚಿತ್ರದ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬ್ಲಿಂಕ್ ಸಿನಿಮಾ ನೋಡಿದ ಪ್ರತಿಯೊಬ್ಬರು ಮನಸಾರೆ ಕೊಂಡಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಸಿನಿಮಾ ನೋಡಿ ಇಷ್ಟವಾಗುತ್ತದೆ ಎಂದು ಹೇಳುತ್ತಿದ್ದಾರೆ. ಆದರೂ ಚಿತ್ರಕ್ಕೆ ನಿರೀಕ್ಷಿತ ಮಟ್ಟದಲ್ಲಿ ಪ್ರೇಕ್ಷಕರ ಬೆಂಬಲ ಸಿಗುತ್ತಿಲ್ಲ.

ಬ್ಲಿಂಕ್ ಸಿನಿಮಾಗೆ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿರುವ ಹಿನ್ನೆಲೆ ನಿರ್ದೇಶಕ ಸುನಿ ಥಿಯೇಟರ್ ಗೆ ಹಾಜರಿ ಹಾಕಿ ಚಿತ್ರ ವೀಕ್ಷಿಸಿದ್ದಾರೆ. ‌ಬ್ಲಿಂಕ್ ಸಿನಿಮಾ ನೋಡ್ದೆ. ಚಿತ್ರತಂಡ ನನ್ನನ್ನು ಆಹ್ವಾನಿಸಲಿಲ್ಲ. ನಾನು ಸಾಮಾನ್ಯ ಪ್ರೇಕ್ಷಕನಾಗಿಯೇ ಬಂದು ಸಿನಿಮಾ ವೀಕ್ಷಿಸಿದೆ. ಅಷ್ಟರ ಮಟ್ಟಿಗೆ ಸಿನಿಮಾ ಬಗ್ಗೆ ಒಳ್ಳೆಯ ರಿಪೋರ್ಟ್ ಇತ್ತು. ಸಿನಿಮಾ ನೋಡಿದ ಮೇಲೆ ಇಷ್ಟವಾಯಿತು. ಮಲ್ಟಿಪ್ಲೆಕ್ಸ್‌ಗಳಲ್ಲಿ ಇರುವ 10, 20 ‘ಬ್ಲಿಂಕ್’ ಚಿತ್ರದ ಶೋಗಳು 100, 200 ಶೋಗಳು ಆಗಬೇಕು. ನೀವೆಲ್ಲಾ ಹೋಗಿ ಸಿನಿಮಾ ನೋಡಲೇಬೇಕು. ‘ಒಂದು ಸರಳ ಪ್ರೇಮಕಥೆ’ ನೋಡದೇ ಇದ್ದರೂ ಪರವಾಗಿಲ್ಲ ಈ ಸಿನಿಮಾ ನೋಡಿ” ಎಂದು ನಿರ್ದೇಶಕ ಸುನಿ ಮನವಿ ಮಾಡಿದ್ದಾರೆ.

ಸಿಂಪಲ್ ಸುನಿ ಮಾತ್ರವಲ್ಲ ನಟ ನವೀನ್ ಶಂಕರ್ ಹಾಗೂ‌ ನಟಿ ಬೃಂದಾ ಆಚಾರ್ ಸೇರಿದಂತೆ ಹಲವಾರು ಕನ್ನಡ ತಾರೆಯರು ಬ್ಲಿಂಕ್ ಗೆ ಬಹುಪರಾಕ್ ಎನ್ನುತ್ತಿದ್ದಾರೆ. ಶ್ರೀನಿಧಿ ಬೆಂಗಳೂರು ನಿರ್ದೇಶನದ ‘ಬ್ಲಿಂಕ್’ ಚಿತ್ರಕ್ಕೆ ರವಿಚಂದ್ರ ಎ. ಜೆ ಬಂಡವಾಳ ಹೂಡಿದ್ದಾರೆ. ದೀಕ್ಷಿತ್ ಶೆಟ್ಟಿ, ಚೈತ್ರಾ ಆಚಾರ್, ಗೋಪಾಲ ದೇಶಪಾಂಡೆ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ.

Advertisement

ವಿದೇಶದಲ್ಲಿ ಬ್ಲಿಂಕ್ ದರ್ಶನ
ಬ್ಲಿಂಕ್ ಸಿನಿಮಾವನ್ನು ವಿದೇಶದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಹೊರಟಿದೆ. ಯುಕೆ, ಯೂರೋಪ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಯುಎಸ್, ಸಿಂಗಾಪುರ್, ಮಲೇಷಿಯಾ, ಜರ್ಮನ್, ಐರ್ಲೆಂಡ್‌‌, ಕೆನಡಾ, ಫ್ರಾನ್ಸ್ ಸೇರಿದಂತೆ ಹಲವು ದೇಶಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಡ್ರೀಮ್ ಸ್ಕ್ರೀನ್ ಇಂಟರ್ ನ್ಯಾಷನಲ್ ಹೊರದೇಶಗಳಿಗೆ ಬ್ಲಿಂಕ್ ಚಿತ್ರ ರಿಲೀಸ್ ಮಾಡುತ್ತಿದೆ.

ಆರೋಗ್ಯ4 days ago

ಕಾಫಿ ಜೊತೆ 1 ಸ್ಪೂನ್‌ ತುಪ್ಪ ಸೇರಿಸಿ ಕುಡಿರಿ, ಸೊಂಟ ಸುತ್ತ ಇರೋ ಬೊಜ್ಜು ಅದ್ರಂತೆ ಕರಗಿಹೋಗುತ್ತೆ!

ರಾಜಕೀಯ2 weeks ago

ಶ್ರೀರಾಮನ 500 ವರ್ಷಗಳ ವನವಾಸಕ್ಕೆ ಮುಕ್ತಿ, ಪ್ರಧಾನಿ ನರೇಂದ್ರ ಮೋದಿಯಿಂದ ರಾಮರಾಜ್ಯ ನಿರ್ಮಾಣ

ಆರೋಗ್ಯ2 weeks ago

ಹೆಂಡತಿ ಗರ್ಭಿಣಿಯಾಗಿದ್ದಾಗ ಪ್ರತಿಯೊಬ್ಬ ಗಂಡಂದಿರು ಮಾಡಲೇಬೇಕಾದ ಕೆಲಸಗಳಿವು!

ಸಿನಿಮಾ2 weeks ago

ಚಾಮರಾಜಪೇಟೆ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ, ಪಂಚಭೂತಗಳಲ್ಲಿ ಪ್ರಚಂಡ ಕುಳ್ಳ ಲೀನ

ಸಿನಿಮಾ2 weeks ago

ದ್ವಾರಕೀಶ್ ಅಂತಿಮ ದರ್ಶನಕ್ಕೆ ಬಂದ ಯಶ್ ದಂಪತಿ

ಸಿನಿಮಾ2 weeks ago

ಮಂತ್ರಾಲಯ ಭಕ್ತರಿಗೆ ಒಂದೊಳ್ಳೆ ಗಿಫ್ಟ್ ಕೊಟ್ಟಿದ್ರು ಈ ಹಾಸ್ಯನಟ!

ಜ್ಯೋತಿಷ್ಯ2 weeks ago

ಭಗವಾನ್ ರಾಮನಿಗೆ ಈ ವಸ್ತುಗಳನ್ನ ಅರ್ಪಿಸಿ, ಸಂತೋಷ-ಸಮೃದ್ಧಿ ಸಿಗುತ್ತೆ

ಬೆಂಗಳೂರು2 weeks ago

ದ್ವಾರಕೀಶ್ ನಿಧನಕ್ಕೆ ಪ್ರಧಾನಿ ಮೋದಿ, ರಜನಿಕಾಂತ್ ಸಂತಾಪ..!

ಕ್ರೀಡೆ3 weeks ago

ಟಾಸ್​​ ಗೆದ್ದ ಬೆಂಗಳೂರು ಟೀಂ, ಆರ್​​ಸಿಬಿ ಪ್ಲೇಯಿಂಗ್​ 11ನಿಂದ ಸಿರಾಜ್-ಮ್ಯಾಕ್ಸಿ​ ಔಟ್!

ಬೆಂಗಳೂರು3 weeks ago

ಶಿವರಾಜ್​ಕುಮಾರ್ ಬ್ಯಾಂಕ್ ಬ್ಯಾಲೆನ್ಸ್ ಎಷ್ಟು ಕೋಟಿ ಸಾಲ ಗೊತ್ತಾ..?

Featured3 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured5 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured3 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured10 months ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

Ayurveda
Featured4 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

ಜ್ಯೋತಿಷ್ಯ5 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Featured5 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured10 months ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ

Featured5 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

ಆರೋಗ್ಯ2 years ago

ಕರ್ನಾಟಕದಲ್ಲಿ ಒಂದೇ ದಿನ 21,390 ಕೊರೋನಾ.! ಲಾಕ್​ಡೌನ್​ ಫಿಕ್ಸಾ.?