Featured
ಬೀದರ್ನಲ್ಲಿ ಅತಿಕ್ರಮ ಅಂಗಡಿಗಳ ತೆರವು: ಪಾದಚಾರಿ ರಸ್ತೆಗಾಗಿ ನಗರಸಭೆ ಕ್ರಮ

ರೈಸಿಂಗ್ ಕನ್ನಡ :
ಬೀದರ್:
ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮುಖ್ಯರಸ್ತೆಯ ಮೇಲೆ ಅತಿಕ್ರಮವಾಗಿ ಆಕ್ರಮಿಸಿಕೊಂಡಿದ್ದ ಅಂಗಡಿಗಳನ್ನು ಇಂದು ನಗರಸಭೆ ಅಧಿಕಾರಿಗಳ ತಂಡದ ನೇತೃತ್ವದಲ್ಲಿ ತೆರವುಗೊಳಿಸಲಾಯಿತು.
ನಗರದ ತ್ರಿಪುರಾಂತ ಪ್ರವಾಸಿ ಮಂದಿರದಿಂದ ಅಂಬೇಡ್ಕರ್ ವೃತ್ತದವರೆಗೆ ಅತಿಕ್ರಮವಾಗಿ ಹಲವು ಅಂಗಡಿಗಳನ್ನು ತೆರೆಯಲಾಗಿತ್ತು. ಇಲ್ಲಿ ಚರಂಡಿ ಹಾಗೂ ಪಾದಚಾರಿ ರಸ್ತೆ ಮಾರ್ಗದ ಕಾಮಗಾರಿ ನಡೆಯಲಿರುವುದರಿಂದ ಈ ಅಕ್ರಮ ಅಂಗಡಿಗಳನ್ನು ತೆರವುಗೊಳಿಸಲಾಯಿತು.
ಎರಡು ದಿನಗಳ ಹಿಂದೆ ಅಂಗಡಿ, ಮುಂಗಟ್ಟುಗಳನ್ನು ತೆರವುಗೊಳಿಸುವ ಕುರಿತು ಸೂಚನೆ ನೀಡಲಾಗಿತ್ತು. ಪೌರಾಯುಕ್ತ ಗೌತಮ ಕಾಂಬಳೆ, ಸಿಪಿಐ ಜೆ.ಎಸ್, ನ್ಯಾಮಗೌಡರ, ಪಿಎಸ್ಐ ಸುನಿಲಕುಮಾರ ತೆರವು ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು. ನಗರಸಭೆ ಸಿಬ್ಬಂದಿ ಮತ್ತು ಪೌರ ಕಾರ್ಮಿಕರು ಹಾಗೂ ಪೊಲೀಸ್ ಸಹಕಾರದೊಂದಿದೆ ಜೆಸಿಬಿ ಸಮೇತ ಕಾರ್ಯಾಚರಣೆ ನಡೆಸಲಾಯಿತು.
ನಗರಸಭೆ ಪರಿಸರ ಅಭಿಯಂತರ ಮನೋಜಕುಮಾರ, ನೈರ್ಮಲ್ಯ ನಿರೀಕ್ಷಕರಾದ ಅಶ್ವಿನ ಕಾಂಬಳೆ, ಬಾಬು ಗಾಯಕವಾಡ, ಗಫೂರಸಾಬ ಹಾಗೂ ಪೌರ ಕಾರ್ಮಿಕರು ಕಾರ್ಯಾಚರಣೆ ವೇಳೆ ಹಾಜರಿದ್ದರು.
ಸುಂದರ ನಗರಕ್ಕಾಗಿ ಕ್ರಮ:
ಬಸವಕಲ್ಯಾಣ ಐತಿಹಾಸಿಕ ಪ್ರವಾಸಿ ಸ್ಥಳವಾಗಿದ್ದು, ಸ್ವಚ್ಛತೆ ಕಾಪಾಡಿಕೊಳ್ಳುವ ಜತೆಗೆ ನಗರದ ಸೌಂದರ್ಯ ಹೆಚ್ಚಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ರಸ್ತೆಯ ಎರಡೂ ಬದಿ ಚರಂಡಿ, ಪಾದಚಾರಿ ರಸ್ತೆ ಮತ್ತು ರೈಲಿಂಗ್ ಕೆಲಸಕ್ಕೆ ಮಂಜೂರಿ ಸಿಕ್ಕಿದೆ. ತಕ್ಷಣ ಕೆಲಸ ಆರಂಭವಾಗಲಿದೆ. ಹೀಗಾಗಿ ರಸ್ತೆ ಆಕ್ರಮಿಸಿದ ಕಟ್ಟೆ, ಶೆಡ್ಗಳನ್ನು ತೆರವುಗೊಳಿಸಲಾಗುತ್ತಿದೆ ಎಂದು ಗೌತಮ ಕಾಂಬಳೆ ತಿಳಿಸಿದರು.
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















