ರಾಜ್ಯ
ಹೊಸ ಕಾರಿನಲ್ಲಿ ಇರಲೇಬೇಕು ಈ ಸೇಫ್ಟಿ: ಇಲ್ಲದಿದ್ದರೆ, ಕಾರು ಖರೀದಿಸಬೇಡಿ!
Autu expo : ಪ್ರಯಾಣಿಕರ ಕಾರು ಉತ್ಪಾದನೆಯಲ್ಲಿ ಜಪಾನ್ ಹಿಂದಿಕ್ಕುವ ಮೂಲಕ ಸದ್ಯ 3ನೇ ಅತಿದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಿರುವ ಭಾರತದಲ್ಲಿ ಗುಣಮಟ್ಟ ಮತ್ತು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಹೆಚ್ಚುತ್ತಿರುವ ಅಪಘಾತಗಳ ಸಂಖ್ಯೆಯನ್ನು ತಗ್ಗಿಸಲು ಮತ್ತು ಅಪಘಾತದ ತೀವ್ರತೆಯನ್ನು ತಡೆದು ಪ್ರಾಣಹಾನಿ ಕಡಿಮೆಗೊಳಿಸುವ ನಿಟ್ಟಿನಲ್ಲಿ ವಾಹನಗಳ ಸುರಕ್ಷತೆಯನ್ನು ಹಂತ-ಹಂತವಾಗಿ ಉನ್ನತೀಕರಿಸಲಾಗುತ್ತಿದೆ.
ಭಾರತದಲ್ಲಿ ಕಳೆದ ಐದಾರು ವರ್ಷಗಳಿಂದ ಹೊಸ ಕಾರುಗಳಲ್ಲಿನ ಸುರಕ್ಷಾ ಸೌಲಭ್ಯಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದ್ದು, ಹಿಂದೆಂದೂ ಕಾಣದ ಹಲವಾರು ಬದಲಾವಣೆಗಳಾಗಿವೆ. 2017ರಲ್ಲಿ ಪರಿಚಯಿಸಲಾದ ಬಿಎಸ್ 3 ಮಾಲಿನ್ಯ ನಿಯಂತ್ರಣ ಮಾನದಂಡಗಳ ಜಾರಿ ನಂತರ ಕಾರುಗಳ ಸುರಕ್ಷತೆಯಲ್ಲಿ ಹೊಸ ಪರ್ವವೇ ಆರಂಭವಾಗಿದ್ದು, ಇದೀಗ ಬಿಎಸ್ 6, 2ನೇ ಹಂತದವರೆಗೆ ಹೊಸ ಕಾರುಗಳಲ್ಲಿ ಹಲವಾರು ಕಡ್ಡಾಯ ಸುರಕ್ಷಾ ಫೀಚರ್ಸ್ ಗಳನ್ನು ನೀಡಲಾಗುತ್ತಿದೆ.
ರಸ್ತೆ ಅಪಘಾತಗಳಲ್ಲಿನ ಪ್ರಾಣಹಾನಿ ಸಂಖ್ಯೆ ಮತ್ತು ಕಾರಣಗಳನ್ನು ಆಧರಿಸಿ ಇದೀಗ ಮತ್ತೊಂದು ಕಡ್ಡಾಯ ಸುರಕ್ಷಾ ಸೌಲಭ್ಯವನ್ನು ಜಾರಿಗೆ ತರಲಾಗುತ್ತಿದ್ದು, ಮುಂಬರುವ 2025ರ ಏಪ್ರಿಲ್ 1ರಿಂದ ಪ್ರತಿಯೊಂದು ಕಾರಿನಲ್ಲೂ ಹಿಂಬದಿನ ಆಸನಗಳಲ್ಲಿ ಸೀಟ್ ಬೆಲ್ಟ್ ಅಲಾರಾಂ ಜೋಡಣೆಯಾಗಲಿದೆ. ಹಿಂಬದಿಯ ಆಸನದಲ್ಲಿನ ಸೀಟ್ ಬೆಲ್ಟ್ ಅಲಾರಂ ಸೌಲಭ್ಯವು ಈಗಾಗಲೇ ಹಲವಾರು ಹೈ ಎಂಡ್ ಕಾರುಗಳಲ್ಲಿ ಜೋಡಣೆ ಮಾಡಲಾಗುತ್ತಿದ್ದು, ಇನ್ಮುಂದೆ ಅದು ಎಲ್ಲಾ ಮಾದರಿಯ ಕಾರುಗಳಲ್ಲೂ ಕಡ್ಡಾಯವಾಗಿ ಹೊಂದಿರಬೇಕಾಗುತ್ತದೆ.
ಹಿಂಬದಿಯ ಸೀಟ್ ಬೆಲ್ಟ್ ಅಲಾರಂ ಸೌಲಭ್ಯವು ಪ್ರಯಾಣಿಕರಿಗೆ ಸೀಟ್ ಬೆಲ್ಟ್ ಧರಿಸಿರುವುದನ್ನು ಖಚಿತಪಡಿಸಲಿದ್ದು, ಸೀಟ್ ಬೆಲ್ಟ್ ಧರಿಸದೇ ಇದ್ದಲ್ಲಿ ಅಲಾರಂ ಮೂಲಕ ಎಚ್ಚರಿಸುತ್ತದೆ. ಹೀಗಾಗಿ ಹೊಸ ಸುರಕ್ಷಾ ಸೌಲಭ್ಯವು ಅಪಘಾತಗಳ ತೀವ್ರತೆಯನ್ನು ತಗ್ಗಿಸುವ ಮೂಲಕ ಸಾವು ನೋವಿನ ಪ್ರಮಾಣವನ್ನು ತಗ್ಗಿಸಲು ನೇರವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಹೊಸ ಸುರಕ್ಷಾ ಸೌಲಭ್ಯವನ್ನು ಜಾರಿಗೊಳಿಸಿದ ನಂತರ ಪ್ರಯಾಣಿಕರು ಕಡ್ಡಾಯವಾಗಿ ಪಾಲನೆ ಮಾಡಬೇಕಿದ್ದು, ಸೀಟ್ ಬೆಲ್ಟ್ ಧರಿಸದ ಪ್ರಯಾಣಿಕರಿಗೆ ರೂ. 1 ಸಾವಿರ ತನಕ ದಂಡ ವಿಧಿಸುವ ಬಗ್ಗೆ ಸುಳಿವು ನೀಡಲಾಗಿದೆ. ಇದಕ್ಕಾಗಿ ಮೋಟಾರ್ ವಾಹನ ಕಾಯ್ದೆಯಲ್ಲಿ ತಿದ್ದುಪಡಿ ಸಹ ತರಲಾಗಿದ್ದು, ಈ ಮೂಲಕ ಇದು ಅಪಘಾತಗಳ ತೀವ್ರತೆ ತಡೆಯವಲ್ಲಿ ಸಾಕಷ್ಟು ಸಹಕಾರಿಯಾಗಲಿದೆ ಎನ್ನಲಾಗಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?