Connect with us

ರಾಜ್ಯ

ಹೋಳಿ ಹಬ್ಬದ ಆಚರಣೆ ಹೇಗಿರಬೇಕು ಗೊತ್ತಾ?

ಧರ್ಮ : ಹಬ್ಬಗಳ ದೇಶ ನಮ್ಮದು. ವರ್ಷದ 365 ದಿನಗಳು ದೇಶದ ಒಂದಲ್ಲಾ ಒಂದು ಪ್ರಾಂತ್ಯದಲ್ಲಿ ಏನಾದರೊಂದು ಹಬ್ಬ-ಹರಿದಿನ ತಪ್ಪುವುದಿಲ್ಲ. ಕೆಲವು ಹಬ್ಬಗಳು ದೇಶದೆಲ್ಲೆಡೆ ಆಚರಿಸಲ್ಪಡುವಂಥವು. ಉದಾ: ಇನ್ನೇನು ಬರಲಿರುವ ಹೋಳಿ ಹಬ್ಬ. ಬಣ್ಣದೋಕುಳಿಯೊಂದಿಗೆ ಕಾಮದಹನವೂ ಈ ಹಬ್ಬದ ವೈಶಿಷ್ಟ್ಯ. ಪ್ರತಿ ವರ್ಷ ಫಾಲ್ಗುಣ ಮಾಸದ ಹುಣ್ಣಿಮೆಯಂದು ಹೋಲಿ ಆಚರಿಸಲಾಗುತ್ತದೆ, ಈ ಬಾರಿ ಮಾರ್ಚ್ 25ರಂದು ಹೋಳಿ ಹುಣ್ಣಿಮೆ.

ಪೌರಾಣಿಕ ಹಿನ್ನೆಲೆ : ತಾರಕಾಸುರನೆಂಬ ರಕ್ಕಸ ಲೋಕಪೀಡಕನಾದ ಸಂದರ್ಭ. ಶಿವನ ಸಂತಾನದಿಂದಲೇ ತನಗೆ ಮರಣ ಎಂಬ ವರವನ್ನು ಆತ ಪಡೆದು ಸೊಕ್ಕಿರುತ್ತಾನೆ. ಇತ್ತ, ದಾಕ್ಷಾಯಿಣಿಯನ್ನು ಕಳೆದುಕೊಂಡು ಉಗ್ರ ತಪದಲ್ಲಿ ನಿರತನಾದ ಶಿವನಿಗೆ ಲೋಕದ ಪರಿವೆಯೇ ಇರುವುದಿಲ್ಲ. ಆತನಿಗಾಗಿಯೇ ಪಾರ್ವತಿಯಾಗಿ ಮರುಜನ್ಮ ಪಡೆದ ಸತಿಯನ್ನು ಕಣ್ಣೆತ್ತಿಯೂ ನೋಡದಿದ್ದರೆ, ಶಿವನ ಸಂತಾನ ಜನಿಸುವುದೆಂದು, ತಾರಕನ ವಧೆ ಆಗುವುದೆಂದು? ಹಾಗಾಗಿ ದೇವತೆಗಳೆಲ್ಲ ಮನ್ಮಥ(ಕಾಮದೇವ)ನ ಮೊರೆ ಹೋಗುತ್ತಾರೆ.

A biggest festival holi celebration in India in the month of march

ವಿನಾಶದ ಅರಿವಿದ್ದರೂ, ಲೋಕ ಕಲ್ಯಾಣಕ್ಕಾಗಿ ಈ ಕಾರ್ಯಕ್ಕೆ ಮನ್ಮಥ ಒಪ್ಪಿಕೊಳ್ಳುತ್ತಾನೆ. ಹೂ ಬಾಣಗಳಿಂದ ಶಿವನನ್ನು ಎಬ್ಬಿಸುತ್ತಾನೆ. ತನ್ನ ತಪೋಭಂಗವಾಗಿದ್ದಕ್ಕೆ ಕ್ರೋಧಗೊಂಡ ಈಶ್ವರ, ಮೂರನೇ ಕಣ್ಣು ತೆರೆದು ಕಾಮನನ್ನು ದಹಿಸುತ್ತಾನೆ. ಹೋಳಿ ಹಬ್ಬದ ಕಾಮನ ದಹನದ ಪೌರಾಣಿಕ ಹಿನ್ನೆಲೆಯಿದು.

ಇನ್ನೂ ಒಂದು ಕಥೆಯಿದೆ : ಇದಕ್ಕೆ ಇನ್ನೂ ಒಂದು ಕಥೆಯಿದೆ. ಹರಿಪಾರಮ್ಯವನ್ನು ಧಿಕ್ಕರಿಸಿ ಹಿರಣ್ಯಕಶಿಪು ಮೆರೆಯುತ್ತಿದ್ದ ದಿನಗಳವು. ಹರಿಭಕ್ತನಾದ ತನ್ನದೇ ಮಗ ಪ್ರಹ್ಲಾದನನ್ನು ಕೊಲ್ಲುವುದಕ್ಕೆಂದು ಸೋದರಿ ಹೋಳಿಕಾ ಎನ್ನುವವಳ ನೆರವನ್ನು ಹಿರಣ್ಯಕಶಿಪು ಕೇಳುತ್ತಾನೆ. ಬೆಂಕಿಯಲ್ಲಿ ಸುಡದಿರುವಂಥ ವಸ್ತ್ರ ಹೋಳಿಕಾಗಿರುತ್ತದೆ. ಬಾಲ ಪ್ರಹ್ಲಾದನನ್ನು ಹೊತ್ತುಕೊಂಡು ಆಕೆ ಅಗ್ನಿಕುಂಡ ಪ್ರವೇಶಿಸುತ್ತಾಳೆ. ಆ ಹೊತ್ತಿಗೆ ಆಕೆಯ ವಸ್ತ್ರವು ಹಾರಿಹೋಗುತ್ತದೆ. ಹೋಳಿಕಾ ದಹನವಾಗಿ, ಪ್ರಹ್ಲಾದ ಕೂದಲೂ ಕೊಂಕದಂತೆ ಉಳಿಯುತ್ತಾನೆ ಎನ್ನುತ್ತದೆ ಕಥೆ.

ಏನಿದರ ಮಹತ್ವ : ಪೌರಾಣಿಕ ಕಥೆಗಳು ಏನೇ ಆದರೂ, ಕೆಟ್ಟದ್ದೆಲ್ಲ ಸುಟ್ಟು ಒಳಿತಷ್ಟೇ ಉಳಿಯಲಿ ಎನ್ನುವುದು ಕಾಮದಹನ ಆಶಯ. ನಮ್ಮೊಳಗೂ ಇರುವಂಥ ವಿಕಾರಗಳನ್ನೆಲ್ಲ ಸುಟ್ಟುರುಹಿ, ಬದುಕಿಗೆ ಹೊಸದಾಗಿ ರಂಗು ತುಂಬಿಸಿಕೊಳ್ಳಬೇಕು ಎನ್ನುವುದು ಈ ಹಬ್ಬದ ಸಂದೇಶ. ಇದಲ್ಲದೆ, ಕೃಷ್ಣ-ಗೋಪಿಕೆಯರ ಲೋಕೋತ್ತರ ಪ್ರೀತಿಯ ಸಂದೇಶವನ್ನೂ ಜಗತ್ತಿಗೆ ನೀಡುತ್ತದೆ ಈ ರಂಗಿನಾಟದ ಹಬ್ಬ.

Advertisement

ನೈಸರ್ಗಿಕ ಬಣ್ಣಗಳು : ಈ ಬಣ್ಣದಾಟಕ್ಕೆ ನಿಸರ್ಗದತ್ತವಾದ ಬಣ್ಣಗಳನ್ನು ಬಳಸುವ ವಾಡಿಕೆಯಿತ್ತು. ಅರಿಶಿನ, ಅಕ್ಕಿಹಿಟ್ಟು, ಹೂವಿನ ರಸಗಳು, ಕಹಿಬೇವಿನ ರಸ ಮುಂತಾದ ವಸ್ತುಗಳನ್ನು ರಂಗಿನ ತಯಾರಿಕೆಯಲ್ಲಿ ಬಳಸಲಾಗುತ್ತಿತ್ತು. ಇದರಿಂದ ಹೋಳಿ ಆಡುವವರಿಗೂ, ಆಡಿದ ಪರಿಸರಕ್ಕೂ ಹಾನಿಯಾಗುತ್ತಿರಲಿಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಎಲ್ಲವೂ ರಾಸಾಯನಿಕಮಯವಾಗಿದ್ದು, ಹಾನಿಕಾರಕ ಬಣ್ಣಗಳು ಪರಿಸರಕ್ಕೂ ತೊಂದರೆ ತಂದೊಡ್ಡುತ್ತಿವೆ.

ಪ್ರಾದೇಶಿಕ ವೈವಿಧ್ಯತೆಗಳು : ಭಾರತದ ಈಶಾನ್ಯ ರಾಜ್ಯಗಳಲ್ಲಿ ಇದು ವಸಂತೋತ್ಸವದ ಹೊತ್ತು. ಕೆಲವು ಕಡೆಗಳಲ್ಲಿ ರಂಗಿನಾಟ ಹೆಚ್ಚು ಜನಪ್ರಿಯವಾಗಿದ್ದರೆ, ಹಲವೆಡೆಗಳಲ್ಲಿ ಕಾಮದಹನಕ್ಕೆ ಪ್ರಾಮುಖ್ಯತೆ ನೀಡಲಾಗುತ್ತದೆ. ಉತ್ತರ ಪ್ರದೇಶದ ಕೆಲವೆಡೆಗಳಲ್ಲಿ ಕೃಷ್ಣ-ಗೋಪಿಕೆಯನ್ನು ಸಾಂಕೇತಿಸುವ ʻಲಾತ್-ಮಾರ್ ಹೋಲಿʼ ರಂಜನೀಯ ಎನಿಸುತ್ತದೆ. ಇದರಲ್ಲಿ ಮಹಿಳೆಯರು ಕೋಲಿನಿಂದ ತಮಾಷೆಗಾಗಿ ಪುರುಷರಿಗೆ.

ಹೊಡೆಯುವುದು ಕ್ರಮ! : ಬಣ್ಣದ ಹಬ್ಬ ಭಾರತದಲ್ಲಿ ಮಾತ್ರವಲ್ಲ, ಇನ್ನೂ ಕೆಲವು ದೇಶಗಳಲ್ಲಿ ಜನಪ್ರಿಯತೆ ಗಳಿಸಿದೆ. ಭಾರತೀಯರು ಇರುವಲ್ಲೆಲ್ಲ ಹೋಳಿ ಆಡುವುದು ಇದಕ್ಕೆ ಕಾರಣವಿರಬಹುದು. ಇದಲ್ಲದೆ, ನೆರೆ ದೇಶಗಳಾದ ನೇಪಾಳ, ಭೂತಾನ್, ಬಾಂಗ್ಲಾದೇಶಗಳಲ್ಲೂ ಹೋಳಿ ಆಡುವವರಿದ್ದಾರೆ. ಪಶ್ಚಿಮ ದೇಶಗಳಲ್ಲಿ ಭಾರತೀಯ ಸಮುದಾಯದ ಜೊತೆಗೆ ಸ್ಥಳೀಯ ಸಮುದಾಯಗಳೂ ಸೇರಿ ರಂಗಿನಾಟ ಆಡುವುದು ವಿಶೇಷ.

ವಿವಿಧ ಬಣ್ಣಗಳ ಅರ್ಥ ಬಣ್ಣದ ಓಕುಳಿ : ಪಾರಂಪರಿಕವಾಗಿ ಹೋಳಿಯಲ್ಲಿ ಬಳಸಲಾಗುವ ಬಣ್ಣಗಳು ಹಲವಾರು ಅರ್ಥಗಳನ್ನು ಪ್ರತಿನಿಧಿಸುತ್ತಿದ್ದವು. ಉದಾ: ಕೆಂಪು ಬಣ್ಣವೆಂದರೆ ಪ್ರೀತಿ ಮತ್ತು ಸಮೃದ್ಧಿ, ನೀಲಿಯೆಂದರೆ ಶಾಂತಿ ಮತ್ತು ಭಕ್ತಿ, ಹಸಿರು ಬಣ್ಣಕ್ಕೆ ಸುಗ್ಗಿ ಮತ್ತು ಹೊಸತನವೆಂಬ ಅರ್ಥ, ಹಳದಿಯೆಂದರೆ ಜ್ಞಾನ ಹೀಗೆ. ಹೋಳಿಯೆಂದರೆ ಬಣ್ಣಗಳು ಮಾತ್ರವೇ ಅಲ್ಲ, ಈ ಬಣ್ಣಗಳಿಗೂ ಅರ್ಥವಿದೆ; ಅವುಗಳದ್ದೇ ಆದ ಮಹತ್ವವಿದೆ.

Advertisement
ಆರೋಗ್ಯ4 days ago

ಕಾಫಿ ಜೊತೆ 1 ಸ್ಪೂನ್‌ ತುಪ್ಪ ಸೇರಿಸಿ ಕುಡಿರಿ, ಸೊಂಟ ಸುತ್ತ ಇರೋ ಬೊಜ್ಜು ಅದ್ರಂತೆ ಕರಗಿಹೋಗುತ್ತೆ!

ರಾಜಕೀಯ2 weeks ago

ಶ್ರೀರಾಮನ 500 ವರ್ಷಗಳ ವನವಾಸಕ್ಕೆ ಮುಕ್ತಿ, ಪ್ರಧಾನಿ ನರೇಂದ್ರ ಮೋದಿಯಿಂದ ರಾಮರಾಜ್ಯ ನಿರ್ಮಾಣ

ಆರೋಗ್ಯ2 weeks ago

ಹೆಂಡತಿ ಗರ್ಭಿಣಿಯಾಗಿದ್ದಾಗ ಪ್ರತಿಯೊಬ್ಬ ಗಂಡಂದಿರು ಮಾಡಲೇಬೇಕಾದ ಕೆಲಸಗಳಿವು!

ಸಿನಿಮಾ2 weeks ago

ಚಾಮರಾಜಪೇಟೆ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ, ಪಂಚಭೂತಗಳಲ್ಲಿ ಪ್ರಚಂಡ ಕುಳ್ಳ ಲೀನ

ಸಿನಿಮಾ2 weeks ago

ದ್ವಾರಕೀಶ್ ಅಂತಿಮ ದರ್ಶನಕ್ಕೆ ಬಂದ ಯಶ್ ದಂಪತಿ

ಸಿನಿಮಾ2 weeks ago

ಮಂತ್ರಾಲಯ ಭಕ್ತರಿಗೆ ಒಂದೊಳ್ಳೆ ಗಿಫ್ಟ್ ಕೊಟ್ಟಿದ್ರು ಈ ಹಾಸ್ಯನಟ!

ಜ್ಯೋತಿಷ್ಯ2 weeks ago

ಭಗವಾನ್ ರಾಮನಿಗೆ ಈ ವಸ್ತುಗಳನ್ನ ಅರ್ಪಿಸಿ, ಸಂತೋಷ-ಸಮೃದ್ಧಿ ಸಿಗುತ್ತೆ

ಬೆಂಗಳೂರು2 weeks ago

ದ್ವಾರಕೀಶ್ ನಿಧನಕ್ಕೆ ಪ್ರಧಾನಿ ಮೋದಿ, ರಜನಿಕಾಂತ್ ಸಂತಾಪ..!

ಕ್ರೀಡೆ3 weeks ago

ಟಾಸ್​​ ಗೆದ್ದ ಬೆಂಗಳೂರು ಟೀಂ, ಆರ್​​ಸಿಬಿ ಪ್ಲೇಯಿಂಗ್​ 11ನಿಂದ ಸಿರಾಜ್-ಮ್ಯಾಕ್ಸಿ​ ಔಟ್!

ಬೆಂಗಳೂರು3 weeks ago

ಶಿವರಾಜ್​ಕುಮಾರ್ ಬ್ಯಾಂಕ್ ಬ್ಯಾಲೆನ್ಸ್ ಎಷ್ಟು ಕೋಟಿ ಸಾಲ ಗೊತ್ತಾ..?

Featured3 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured5 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured3 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured10 months ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

Ayurveda
Featured4 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

ಜ್ಯೋತಿಷ್ಯ5 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Featured5 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured10 months ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ

Featured5 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

ಆರೋಗ್ಯ2 years ago

ಕರ್ನಾಟಕದಲ್ಲಿ ಒಂದೇ ದಿನ 21,390 ಕೊರೋನಾ.! ಲಾಕ್​ಡೌನ್​ ಫಿಕ್ಸಾ.?