Featured
Love U All : ನನ್ನ ಬರ್ತ್ ಡೇಗೆ ಇದಕ್ಕಿಂತೂ ದೊಡ್ಡ ಗಿಫ್ಟ್ ಏನ್ ಕೊಡಲು ಸಾಧ್ಯ : ಎಮೋಷನಲ್ ಆದ ರಾಕಿಭಾಯ್ ಯಶ್

ರೈಸಿಂಗ್ ಕನ್ನಡ :
ರಾಕಿಂಗ್ ಸ್ಟಾರ್, ನ್ಯಾಷನಲ್ ಸ್ಟಾರ್ ಆಗಿರೋ ನಮ್ಮ ಕನ್ನಡದ ಯಶ್, ತುಂಬಾ ಖುಷಿಯಲ್ಲಿದ್ದಾರೆ. ನಿನ್ನೆ ಬರ್ತ್ ಡೇ ಆಚರಿಸಿಕೊಂಡಿರೋ ಯಶ್, ಅಷ್ಟೇ ಎಮೋಷನಲ್ ಆಗಿದ್ದಾರೆ. ಅದಕ್ಕೆ ಕಾರಣ, ಕೆಜಿಎಫ್ ಚಾಪ್ಟರ್ 2 ಚಿತ್ರದ ಟೀಸರ್.
ಯೆಸ್, ಟೀಸರ್ ಬಿಡುಗಡೆಗೂ ಮುನ್ನವೇ ಲೀಕಾಸುರರು ಕೆಜಿಎಫ್ ಟೀಮ್ಗೆ ಶಾಕ್ ನೀಡಿದ್ರು. ಇದಕ್ಕಾಗಿಯೇ ಅವಸರದಲ್ಲಿ ಟೀಸರ್ ಬಿಡುಗಡೆ ಮಾಡಿದ್ರು. ಆದ್ರೂ, ಕೂಡ ಪ್ರೇಕ್ಷಕರು ಕೆಜಿಎಫ್ ಟೀಸರ್ಗೆ ಫುಲ್ ಫಿದಾ ಆಗಿದ್ದಾರೆ. ಕನ್ನಡ ಸಿನಿಮಾದ ಟೀಸರ್ ಈ ಮಟ್ಟದಲ್ಲಿ, ಇಷ್ಟೊಂದು ಅದ್ಧೂರಿಯಾಗಿ ಇರುತ್ತಾ ಅಂತ ನಿಬ್ಬೆರಗಾಗಿದ್ದಾರೆ. ಬರೀ ಕನ್ನಡದಲ್ಲೇ ಅಲ್ಲ, ಇಡೀ ಭಾರತೀಯ ಸಿನಿಮಾ ಇವತ್ತು ಯಶ್ ಹಾಗೂ ಕೆಜಿಎಫ್ ಟೀಸರ್ ಬಗ್ಗೆ ಮಾತ್ನಾಡ್ತಿದೆ.
ಅದಕ್ಕೆ ತಕ್ಕಂತೆ ಟೀಸರ್ ಬಿಡುಗಡೆಯಾದ 24 ಗಂಟೆಗಳಲ್ಲಿ ಬರೋಬ್ಬರಿ 78 ಮಿಲಿಯನ್ ವೀವ್ಸ್ ಆಗಿದೆ. ಅಂದ್ರೆ, 7 ಕೋಟಿ 80 ಲಕ್ಷಕ್ಕೂ ಹೆಚ್ಚು ಬಾರಿ ಟೀಸರ್ ವೀಕ್ಷಣೆಯಾಗಿದೆ. ಜೊತೆಗೆ 4 ಮಿಲಿಯನ್ ಲೈಕ್ಸ್ ಕೂಡ 24 ಗಂಟೆಗಳಲ್ಲೇ ಬಂದಿದೆ. ಇದು ಕೂಡ ವಿಶ್ವದಾಖಲೆ. ಯಾವುದೇ ಸಿನಿಮಾದ ಒಂದು ಟೀಸರ್, 24 ಗಂಟೆಗಳಲ್ಲಿ ಇಷ್ಟೊಂದು ವೀವ್ಸ್ ಹಾಗೂ ಲೈಕ್ಸ್ ಪಡೆದಿರೋದು ಇದೇ ಮೊದಲು. Your love for me has manifested as the best bday for me today. Thank you.. love you all ❤️ pic.twitter.com/DhCAAxj0Hu— Yash (@TheNameIsYash) January 8, 2021
ಇದಕ್ಕಾಗಿಯೇ ಎಮೋಷನಲ್ ಆಗಿರೋ ರಾಕಿಭಾಯ್ ಯಶ್, ಅಭಿಮಾನಿಗಳಿಗೆ ಥ್ಯಾಂಕ್ಸ್ ಹೇಳಿದ್ದಾರೆ. ಟ್ವೀಟ್ ಮಾಡಿರೋ ರಾಕಿಂಗ್ ಸ್ಟಾರ್ ಯಶ್, ನನ್ನ ಹುಟ್ಟುಹಬ್ಬಕ್ಕೆ ಇದಕ್ಕಿಂತ ದೊಡ್ಡ ಗಿಫ್ಟ್ ಏನ್ ಕೊಡಲು ಸಾಧ್ಯ. ನಿಮ್ಮ ಪ್ರೀತಿಗೆ, ಭರವಸೆಗೆ ಚಿರಋಣಿ ಎಂದು ಟ್ವೀಟಿ ಮಾಡಿದ್ದು, ಲವ್ ಯೂ ಆಲ್ ಅಂತ ಎಮೋಷನಲ್ ಆಗಿ ಧನ್ಯವಾದ ಹೇಳಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?