Featured
ಕೊರೊನಾ ಹಾಟ್ಸ್ಪಾಟ್ ಗಂಗಾವತಿ – ಶ್ರೀರಾಮನಗರ 10 ದಿನ ಸಂಪೂರ್ಣ ಲಾಕ್ ಡೌನ್

ರೈಸಿಂಗ್ ಕನ್ನಡ:
ನಾಗರಾಜ್. Y. ಕೊಪ್ಪಳ:

ಕೊಪ್ಪಳ ಜಿಲ್ಲೆಯ ಗಂಗಾವತಿ ಮತ್ತು ಶ್ರೀರಾಮನಗರ ಕೋವಿಡ್19 ಹಾಟ್ ಸ್ಪಾಟ್ ಆಗಿದ್ದು, ಮಂಗಳವಾರ ರಾತ್ರಿ 8 ಗಂಟೆಯಿಂದ ಸಂಪೂರ್ಣ ಲಾಕ್ ಡೌನ್ ಆಗಲಿವೆ ಎಂದು ಜಿಲ್ಲಾ ಉಸ್ತುವಾರಿ ಮಂತ್ರಿ ಬಿ.ಸಿ.ಪಾಟೀಲ್ ಹೇಳಿದರು.

ಕೊಪ್ಪಳದ ಜಿಲ್ಲಾಡಳಿತ ಭವನದಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳೊಂದಿಗೆ ಕೋವಿಡ್ 19 ನಿಯಂತ್ರಣ ಕುರಿತ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಗಂಗಾವತಿ ಮತ್ತು ಗಂಗಾವತಿ ತಾಲೂಕಿನ ಶ್ರೀರಾಮನಗರ ಜುಲೈ 21ರ ರಾತ್ರಿ 8 ಗಂಟೆಯಿ10 ದಿನ ಬಂದ್ ಆಗಲಿವೆ. ಮದ್ಯದಂಗಡಿ ಸೇರಿ ಅನಗತ್ಯ ವಸ್ತುಗಳ ಮಾರಾಟ ಇರೋದಿಲ್ಲ. ಅಗತ್ಯ ಸೌಲಭ್ಯ ಹೊರತಾಗಿ ಎಲ್ಲವೂ ಬಂದ್ ಇರಲಿವೆ. ಏನಿರತ್ತೆ? ಏನಿರಲ್ಲ ಎಂಬುದರ ಬಗ್ಗೆ ಜಿಲ್ಲಾಧಿಕಾರಿಗಳು ಗೈಡ್ ಲೈನ್ ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿಸಿದರು. ಸಂಸದ ಸಂಗಣ್ಣ ಕರಡಿ, ಶಾಸಕ ಬಸವರಾಜ ದಡೆಸುಗೂರ, ಡಿಸಿ ವಿಕಾಸ ಕಿಶೋರ್, ಎಸ್ಪಿ ಜಿ.ಸಂಗೀತಾ ಸಭೆಯಲ್ಲಿ ಇದ್ದರು.
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















