Connect with us

Featured

ರಾಶಿ ಭವಿಷ್ಯ ಮಂಗಳವಾರ| ಆಗಸ್ಟ್​ 25, 2020

Advertisement

BIDAR EDUCATION

ಫಲ 25/08/2020, ಮಂಗಳವಾರ

Advertisement

ಮೇಷ:

ಉದ್ಯೋಗದಲ್ಲಿ ಸ್ವಲ್ಪಮಟ್ಟಿನ ಕಿರಿಕಿರಿ ಎನಿಸಿದರೂ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಕಳೆದು ಹೋದ ಅಮೂಲ್ಯ ವಸ್ತುವೊಂದು ಈಗ ಸಿಗುತ್ತದೆ. ಯಂತ್ರೋಪಕರಣಗಳ ಮೇಲೆ ಹಣ ಹೂಡಿಕೆ ಸಾಧ್ಯತೆ ಇದೆ. ಬಿಡುವಿಲ್ಲದ ಕೆಲಸಗಳಲ್ಲಿ ದೇಹಾಯಾಸ ಆಗಬಹುದು. ಯಾವುದೇ ಕೆಲಸ ಮಾಡುವಾಗ ಆತುರದ ನಿರ್ಧಾರ ಬೇಡ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಶ್ರದ್ಧೆ ಒಳಿತು. ವ್ಯವಹಾರಕ್ಕಾಗಿ ತಂದೆಯಿಂದ ಧನಸಹಾಯ ಒದಗಿ ಬಂದು ವ್ಯವಹಾರ ಮುಂದುವರಿಯುತ್ತದೆ.

ವೃಷಭ:

ಹಣದ ಹರಿವು ನಿಧಾನ ವೃದ್ಧಿ. ಹೆಚ್ಚು ಲವಲವಿಕೆಯಿಂದ ಇರುವಿರಿ. ಹೊಸ ಆದಾಯದ ಮೂಲಗಳನ್ನು ಹುಡುಕುವಿರಿ. ಈ ಬಗ್ಗೆ ಸಂಬಂಧಿಕರ ಬಳಿ ಚರ್ಚಿಸುವಿರಿ. ಹೊಸ ಯೋಜನೆಗಳಿಗೆ ಕಾಲಮಿತಿ ಅತ್ಯಗತ್ಯ. ವಿದ್ಯಾರ್ಥಿಗಳಿಗೆ ಓದಿನ ಮೇಲೆ ಆಸಕ್ತಿ ಹೆಚ್ಚುತ್ತದೆ. ಹಲ್ಲಿನ ತೊಂದರೆ ಕಾಣಿಸಬಹುದು. ಶುಭ ಕಾರ್ಯಗಳಲ್ಲಿ ಭಾಗವಹಿಸುವ ಯೋಗವಿದೆ. ಎಲೆಕ್ಟ್ರಾನಿಕ್ ವಸ್ತುಗಳ ರಿಪೇರಿಯವರಿಗೆ ಕೈತುಂಬಾ ಕೆಲಸ. ವೃತ್ತಿಯಲ್ಲಿ ಹಿತಶತ್ರುಗಳ ಕಾಟ ಇದ್ದರೂ ಅಂತಹ ತೊಂದರೆ ಇರುವುದಿಲ್ಲ.

Advertisement

ಮಿಥುನ: 

ಸರ್ಕಾರಿ ಅಧಿಕಾರಿಗಳಿಗೆ ಕೈತುಂಬಾ ಕೆಲಸ. ನಿತ್ಯದ ಕೆಲಸಗಳಲ್ಲದೆ ಹೊಸ ಜವಾಬ್ದಾರಿಗಳು ಹೆಗಲೇರುತ್ತವೆ. ಮನೆಯವರೊಂದಿಗೆ ಆತುರದ ವ್ಯವಹಾರಗಳು ಸರಿಯಲ್ಲ. ನಿಮ್ಮ ಅನಿರೀಕ್ಷಿತ ನಡವಳಿಕೆಯು ಮನೆಯವರಿಗೆ ಅಸಹನೆ ತರುತ್ತದೆ. ಸಂಗಾತಿಯ ಆದಾಯದಲ್ಲಿ ಸ್ವಲ್ಪ ಹೆಚ್ಚಳ. ವ್ಯವಹಾರದಲ್ಲಿ ಲಾಭ ಕಾಣುವ ದಿನಗಳು ಹತ್ತಿರದಲ್ಲಿವೆ. ವಿದ್ಯಾರ್ಥಿಗಳಿಗೆ ಸ್ವಲ್ಪ ಅನುಕೂಲಕರ ಕಾಲ. ವೈದ್ಯರಿಗೆ ಕೆಲಸದ ಒತ್ತಡಗಳು ಹೆಚ್ಚಬಹುದು. ತಂದೆಯ ಜೊತೆ ಸ್ವಲ್ಪ ಕಾವೇರಿದ ಮಾತಾಗಬಹುದು.

Advertisement

ಕಟಕ ಕಟಕ:

ಬಂಧುಗಳಲ್ಲಿ ಗೌರವಾದರಗಳು ದೊರೆಯುವ ಸಾಧ್ಯತೆ ಇದೆ. ಆರ್ಥಿಕ ಸಬಲತೆ ನಿಧಾನವಾಗಿ ಆಗುತ್ತದೆ. ಉತ್ತಮ ಗೆಳೆಯರು ದೊರೆತು ಸರಿಯಾದ ಮಾರ್ಗದರ್ಶನ ನೀಡುವರು. ಸಹೋದ್ಯೋಗಿಗಳೊಂದಿಗೆ ಮಿತ ಮಾತು ಒಳ್ಳೆಯದು. ವಾಹನ ಮಾರಾಟಗಾರರಿಗೆ ನಿಧಾನ ವ್ಯವಹಾರ ವೃದ್ಧಿ. ಕಾನೂನಿನ ಹೋರಾಟಗಳಲ್ಲಿ ತಜ್ಞರ ಸಲಹೆ ಪಡೆದು ಮುಂದುವರೆಯುವುದು ಉತ್ತಮ. ಸರ್ಕಾರಿ ಸಾಲಗಳು ಸರಾಗವಾಗಿ ಸಿಗುತ್ತವೆ. ಸಂಗಾತಿ ಕಾವೇರಿದ ಮಾತಾದರೂ ನಂತರ ಸರಿಯಾಗುವುದು.

Advertisement

ಸಿಂಹ:

ಆತ್ಮಸ್ಥೈರ್ಯ ಸ್ವಲ್ಪ ಕಡಿಮೆಯಾದಂತೆ ಅನಿಸುವುದು. ಆದಾಯಕ್ಕಿಂತ ಖರ್ಚು ಹೆಚ್ಚು ಆಗಬಹುದು. ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಒತ್ತಡ ಹೆಚ್ಚು ಇರಲಿದೆ. ಭೂಮಿಯ ವಿವಾದಗಳು ಪರಿಹಾರಗೊಂಡು ನಿಮಗೆ ಅನುಕೂಲ ಹೆಚ್ಚುವುದು. ಮಿತ್ರರಿಗೆ ಸಹಾಯ ಮಾಡುವಾಗ ನಿಮಗೆ ತೊಂದರೆ ಆಗದಂತೆ ಎಚ್ಚರ ಇರಲಿ. ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕಂತೆ ಉದ್ಯೋಗದಲ್ಲಿ ಬದಲಾವಣೆ ಕಾಣಬಹುದು. ಆರೋಗ್ಯದ ಬಗ್ಗೆ ನಿಗಾ ವಹಿಸಿ. ವಾಹನ ಚಾಲನೆಯಲ್ಲಿ ಜಾಗರೂಕತೆ ಅತೀ ಅಗತ್ಯ.

ಕನ್ಯಾ :

Advertisement

ಲೇವಾದೇವಿ ನಡೆಸುತ್ತಿದ್ದವರಿಗೆ ನಿಂತಿದ್ದ ಹಣಗಳು ಈಗ ಹಂತಹಂತವಾಗಿ ವಾಪಸ್ಸು ಬರಲಾರಂಭಿಸುತ್ತದೆ. ಭೂ ವ್ಯವಹಾರ ಮಾಡುವವರಿಗೆ ಸ್ವಲ್ಪ ಹಣಗಳಿಕೆ ಇದೆ. ಸಂಗಾತಿಯ ಗಳಿಕೆಯಲ್ಲಿ ಸ್ವಲ್ಪ ಏರಿಕೆ. ಸಂಗಾತಿಯ ಹಾಗೂ ನಿಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ಅಗತ್ಯ. ವಿದ್ಯಾರ್ಥಿಗಳು ಹೆಚ್ಚಿನ ಶ್ರಮ ಹಾಕಿ ಓದುವುದು ಒಳ್ಳೆಯದು. ಕ್ರೀಡಾಪಟುಗಳಿಗೆ ಸೂಕ್ತ ಮಾರ್ಗದರ್ಶನ ಒದಗಿ ಅವರ ಅಭ್ಯಾಸಕ್ಕೆ ಅನುಕೂಲವಾಗುತ್ತದೆ. ಹಳೆಯ ವಾಹನ ವ್ಯವಹಾರ ಮಾಡುವವರಿಗೆ ವ್ಯವಹಾರ ವೃದ್ಧಿ.

ತುಲಾ :

ಹೊಸ ಬರಹಗಾರರಿಗೆ ಅನುವಾದ ಮಾಡುವುದಕ್ಕೆ ಆಹ್ವಾನ ಮತ್ತು ಉತ್ತೇಜನ ದೊರೆಯುತ್ತದೆ. ಮನೆಯ ಜವಾಬ್ದಾರಿಗಳನ್ನು ಸಂಗಾತಿ ಮತ್ತು ಮಕ್ಕಳು ತೆಗೆದುಕೊಂಡು ನಿಮ್ಮ ಭಾರ ಸ್ವಲ್ಪ ಕಡಿಮೆ ಮಾಡುವರು. ನಿಮ್ಮ ಕೆಲವು ಆಸೆಗಳು ಈಡೇರುವ ಸಾಧ್ಯತೆ ಇದೆ. ಪ್ರೇಮಿಗಳ ಪಾಲಿಗೆ ಉತ್ತಮ ದಿನ ಅವರ ಪ್ರೇಮಕ್ಕೆ ಹಿರಿಯರ ಒಪ್ಪಿಗೆ ದೊರೆಯುತ್ತದೆ. ನೆರೆಹೊರೆಯವರಲ್ಲಿ ಉತ್ತಮ ಬಾಂಧವ್ಯ ಬೆಳೆಸುವಿರಿ. ಜನಪ್ರತಿನಿಧಿಗಳಿಗೆ ಮುಖಭಂಗ ಸಾಧ್ಯತೆ ಇದೆ. ಕೃಷಿಕರಿಗೆ ಹೆಚ್ಚಿನ ಲಾಭವಿದೆ.

Advertisement

ವೃಶ್ಚಿಕ :

ಕೃಷಿ ಉತ್ಪನ್ನಗಳಿಂದ ಹಣ ಗಳಿಸುವಿರಿ. ಉದ್ಯೋಗದಲ್ಲಿ ಕೆಲವರ ಅಸಹಕಾರದಿಂದ ಎದುರಿಸುತ್ತಿದ್ದ ತೊಂದರೆಗಳು ನಿವಾರಣೆಯಾಗಿ ನೆಮ್ಮದಿ ಮೂಡುತ್ತದೆ. ನಿರೀಕ್ಷಿತ ಮೂಲದಿಂದ ಸರಿಯಾಗಿ ಹಣ ಬರದಿದ್ದರೂ ಅನಿರೀಕ್ಷಿತ ಮೂಲದಿಂದ ಅಗತ್ಯಕ್ಕೆ ತಕ್ಕಷ್ಟು ಹಣ ಬರುತ್ತದೆ. ದೂರದಲ್ಲಿರುವ ಮಕ್ಕಳಿಂದ ಶುಭ ವಾರ್ತೆಗಳು ಕೇಳಿ ಬರುವವು. ಗೃಹಾಲಂಕಾರ ವಸ್ತುಗಳನ್ನು ತಯಾರಿಸಿ ಮಾರುವವರಿಗೆ ವ್ಯಾಪಾರವಾಗುವುದು. ಕಾರ್ಯ ಸಾಧಿಸಲು ನೀವು ಹೂಡುವ ತಂತ್ರಗಳು ಫಲ ಕೊಡುತ್ತವೆ. ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಕಾಣಬಹುದು.

ಧನಸ್ಸು:

Advertisement

ಉತ್ತಮ ಕಾರ್ಯಗಳಿಂದ ಗಣ್ಯವ್ಯಕ್ತಿಗಳಿಂದ ಪ್ರಶಂಸೆ ದೊರೆಯಲಿದೆ. ಸಾಮರ್ಥ್ಯ ಅರಿತು ಕೆಲಸ ಮಾಡುವುದು ಮತ್ತು ಕೆಲಸವನ್ನು ಬೇರೆಯವರಿಗೆ ವಹಿಸುವುದು ಬಹಳ ಉತ್ತಮ. ಸಂಗೀತ ಕ್ಷೇತ್ರದವರಿಗೆ ಆ ಕ್ಷೇತ್ರದ ದಿಗ್ಗಜರ ಪರಿಚಯದ ಸಾಧ್ಯತೆ ಇದೆ. ಹಿರಿಯರು ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ನಿಮ್ಮ ಕೈಕೆಳಗಿನ ಕೆಲಸಗಾರರನ್ನು ವಿಶ್ವಾಸದಿಂದ ಕಾಣಿ. ಈ ಹಿಂದೆ ಶ್ರಮ ಪಟ್ಟಿದ್ದ ಕೆಲಸಗಳಿಗೆ ಈಗ ಸಂಭಾವನೆ ದೊರೆಯುತ್ತದೆ. ಹರಿತ ಆಯುಧಗಳನ್ನು ಉಪಯೋಗಿಸುವಾಗ ಎಚ್ಚರ ಇರಲಿ.

ಮಕರ:

ಸೋದರಿಯರ ವಿಚಾರದಲ್ಲಿ ಧಾರಾಳತನ ತೋರಿಸುವಿರಿ. ಸಂಪನ್ಮೂಲಗಳ ಅಭಿವೃದ್ಧಿಗಾಗಿ ಹೊಸ ಯೋಜನೆಗಳನ್ನು ರೂಪಿಸುವಿರಿ. ಸಣ್ಣಪುಟ್ಟ ವ್ಯಾಪಾರಿಗಳಿಗೆ ವ್ಯವಹಾರ ವೃದ್ಧಿ. ಕುಟುಂಬ ಸದಸ್ಯರಲ್ಲಿ ಭಿನ್ನಾಭಿಪ್ರಾಯ ಮೂಡಬಹುದು. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ತೊಡಕಾದರೂ ಗುರಿ ಸಾಧಿಸಲು ತೊಂದರೆ ಇಲ್ಲ. ಕೃಷಿ ಕಾರ್ಮಿಕರಿಗೆ ಉದ್ಯೋಗ ದೊರೆತು ಧನ ಸಂಪಾದನೆಯಾಗುತ್ತದೆ. ಸಂಬಂಧಿಕರಿಂದ ಸಂತಸದ ವಾರ್ತೆಗಳನ್ನು ಕೇಳುವಿರಿ. ವೃತ್ತಿಯಲ್ಲಿ ಅಭಿವೃದ್ಧಿ ಕಾಣಬಹುದು.

Advertisement

ಕುಂಭ:

ಕೆಲಸ ಕಾರ್ಯಗಳಲ್ಲಿ ಅಡ್ಡಿಗಳು ಉಂಟಾದರೂ ಎದೆಗುಂದದೆ ಯಶಸ್ಸು ಸಾಧಿಸುವಿರಿ. ದೂರದ ಸಂಬಂಧಿಗಳು ಮನೆಗೆ ಆಗಮಿಸುವ ನಿರೀಕ್ಷೆಯಿದೆ. ಮಿತ್ರರ ಸಹಕಾರದಿಂದ ಕೆಲವು ತೊಂದರೆಗಳು ನಿವಾರಣೆ ಆಗುತ್ತದೆ. ಉದ್ಯೋಗ ಅರಸುತ್ತಿರುವವರಿಗೆ ಉದ್ಯೋಗ ದೊರೆಯುತ್ತದೆ. ಅನಿರೀಕ್ಷಿತವಾಗಿ ಧನಸಹಾಯ ಸಿಗಲಿದೆ. ಸ್ತ್ರೀಯರು ನಡೆಸುವ ವ್ಯವಹಾರಗಳು ಅಭಿವೃದ್ಧಿ ಕಾಣುತ್ತವೆ. ಸರ್ಕಾರಿ ಮಟ್ಟದ ಕೆಲಸಗಳಲ್ಲಿ ಯಶಸ್ಸು. ವಯಸ್ಕರಿಗೆ ತಾಯಿಯಿಂದ ಧನಸಹಾಯ ದೊರೆಯುತ್ತದೆ.

Advertisement

ಮೀನ:

ನ್ಯಾಯಾಲಯದ ಕೆಲಸಗಳಲ್ಲಿ ಪ್ರಗತಿ. ಬಡ್ಡಿ ವ್ಯವಹಾರದವರಿಗೆ ಮಾನಹಾನಿಯ ಸಾಧ್ಯತೆ ಇದೆ. ಆದಾಯದಷ್ಟೇ ಖರ್ಚು. ಮನೆಯಲ್ಲಿ ಸಂತೋಷಕೂಟ ಏರ್ಪಡಿಸಲು ಮುಂದಾಗುವಿರಿ. ದಾಂಪತ್ಯ ಜೀವನದಲ್ಲಿ ಸಂತೋಷ. ನಿವೇಶನ ಖರೀದಿಗಾಗಿ ತಯಾರಿ ನಡೆಸುವಿರಿ. ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವವರಿಗೆ ಧನ ಗಳಿಕೆ ಹೆಚ್ಚಲಿದೆ. ಹಾಲಿನ ಉತ್ಪನ್ನಗಳನ್ನು ಉತ್ಪಾದಿಸುವವರಿಗೆ ಬೇಡಿಕೆ ಹೆಚ್ಚಲಿದೆ. ಜನ ನಾಯಕರಿಗೆ ಬಾಕಿ ಹಣ ಈಗ ಬರುತ್ತದೆ. ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ಅಗತ್ಯ.

BIDAR EDUCATION

Advertisement

ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ