Featured
ನಾರಂಜ ಸಹಕಾರಿ ಸಕ್ಕರೆ ಕಾರ್ಖಾನೆಯ ನೂತನ ಅಧ್ಯಕ್ಷರಾಗಿ ಸಿದ್ರಾಮ್ ಅವಿರೋಧ ಆಯ್ಕೆ
ಬೀದರ್:
ರೈಸಿಂಗ್ ಕನ್ನಡ:
ನಾರಂಜ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾಗಿ ರೈತ ಸಮುದಾಯದ ಯುವನಾಯಕ ಡಿಕೆ ಸಿದ್ರಾಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕಳೆದ 20 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ರೈತಮುಖಂಡರ ಕೈಗೆ ಚುಕ್ಕಾಣಿ ಹಿಡಿದಿದ್ದಾರೆ. ಬೀದರ್ನ ಜನವಾಡ ಬಳಿಯ ನಾರಂಜ ಸಹಕಾರಿ ಸಕ್ಕರೆ ಕಾರ್ಖಾನೆ 2,000 ದಿಂದ 2015ರ ವರೆಗೆ ದಿವಂಗತ ಗುರುಪಾದಪ್ಪ ನಾಗಮಾರಪಳ್ಳಿ ಅಧ್ಯಕ್ಷರಾಗಿದ್ದರು.
ಇದೀಗ ಭಾಲ್ಕಿಯ ರೈತ ಮುಖಂಡ ಹಾಗೂ ಬಿಜೆಪಿಯ ಪರಾಜಿತ ಅಭ್ಯರ್ಥಿ ಡಿಕೆ ಸಿದ್ದರಾಮ ಎನ್ ಎಸ್ ಎಸ್ ಕೆ ಯ ಅದ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಆಡಳಿತ ಮಂಡಳಿಯ 13 ನಿರ್ದೇಶಕ ಸ್ಥಾನಕ್ಕೆ ಇತ್ತಿಚಿಗೆ ನಡೆದ ಚುನಾವಣೆಯಲ್ಲಿ ದಿ.ಗುರುಪಾದಪ್ಪ ನಾಗಮಾರಪಳ್ಳಿಯ ಪುತ್ರ ಉಮಾಕಾಂತ್ ನಾಗಮಾರಪಳ್ಳಿ ಡಿಕೆ ಸಿದ್ದರಾಮ್ ಅವರನ್ನ ಅವಿರೋಧ ವಾಗಿ ಆಯ್ಕೆ ಮಾಡಿದ್ದಾರೆ.
ಸ್ವತ ಉಮಾಕಾಂತ್ ನಾಗಮಾರಪಳ್ಳಿ ಅವರೆ ಡಿ.ಕೆ. ಸಿದ್ರಾಮ್ ಅವರನ್ನ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿರೋದು ಸಹಕಾರಿ ವಲಯ ಹಾಗೂ ರಾಜಕೀಯ ವಲಯದಲ್ಲಿ ಈಗ ಭಾರಿ ಚರ್ಚೆಯಾಗುತ್ತಿದೆ. ಇದೇ ಮೊದಲ ಬಾರಿ ನಾಗಮಾರಪಳ್ಳಿ ಅವರ ಕುಟುಂಬ ಎನ್. ಎಸ್. ಎಸ್. ಕೆ ಕಾರ್ಖಾಕಾನೆಯ ಅಧ್ಯಕ್ಷ ಸ್ಥಾನದಿಂದ ಬೆರೆಯವರ ಪಾಲಾಗಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ.
ಭಾಲ್ಕಿ ತಾಲೂಕಿನ ಕೆಸರಜೋಳಗಾದವರಾಗಿದ್ದು, 2013ರಲ್ಲಿ ನಡೆದ ಚುನಾವಣೆಯಲ್ಲಿ ಭಾಲ್ಕಿ ಕ್ಷೆತ್ರದಿಂದ ಕೆಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಬಳಿಕ ಕಳೆದ ಬಾರಿಯೂ ಬಿಜೆಪಿ ಯಿಂದ ಸ್ಪರ್ಧಿಸಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ವಿರುದ್ಧ ಸೋಲು ಕಂಡಿದ್ದರು. ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವ ಡಿ.ಕೆ ಸಿದ್ರಾಮ, ಈಗ ಎನ್.ಎಸ್.ಎಸ್.ಕೆ ಅಧ್ಯಕ್ಷ ಪಟ್ಟ ಏರಿದ್ದು ಜಿಲ್ಲೆಯಾದ್ಯಂತ ರಾಜಕೀಯದಲ್ಲಿ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ಕೂತುಹಲಕ್ಕೆ ಎಡೆಮಾಡಿಕೊಟ್ಟಿದೆ.
You may like
ನೀಟ್ ಪರೀಕ್ಷೆಯಲ್ಲಿ 9ನೇ ಸ್ಥಾನ : ಉಸ್ತುವಾರಿ ಸಚಿವ ಪ್ರಭುಚೌಹಾಣ್ರಿಂದ ಅಭಿನಂದನೆ
ಬೀದರ್ನ ಕಾರಂಜ ಜಲಾಶಯಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಭೇಟಿ:ನೀರಿನ ಮಟ್ಟ ಪರಿಶೀಲಿಸಿದ ಕೈ ನಾಯಕ
ವರುಣಾಘಾತಕ್ಕೆ ಬೀದರ್ ಜನತೆ ತತ್ತರ: ರಾಜ್ಯ ಹೆದ್ದಾರಿಗೆ ಜಲ ದಿಗ್ಬಂಧನ
ಗಡಿನಾಡಿನ ನಿಸ್ವಾರ್ಥ ಸೇವಕ- ಸಮಾಜಸೇವೆಯಲ್ಲೇ ಖುಷಿ ಕಾಣುವ ಮಹಾನುಭಾವ
ಯಾದಗಿರಿಯಲ್ಲಿ ದಿಢೀರ್ರಾಗಿ ಜಿಲ್ಲಾಧಿಕಾರಿ ವರ್ಗಾವಣೆ: ನೂತನ ಜಿಲ್ಲಾಧಿಕಾರಿ ಡಾ. ರಾಗಾಪ್ರಿಯಾ ಅಧಿಕಾರ ಸ್ವೀಕಾರ
ಬೀದರ್ನಲ್ಲಿ ಅತಿಕ್ರಮ ಅಂಗಡಿಗಳ ತೆರವು: ಪಾದಚಾರಿ ರಸ್ತೆಗಾಗಿ ನಗರಸಭೆ ಕ್ರಮ