Featured
ಬೆಂಗಳೂರು ಗಲಭೆ ಪ್ರಕರಣ :ಎಸ್ಡಿಪಿಐ ಬ್ಯಾನ್ಗೆ ಒತ್ತಾಯ ಮಾಡುತ್ತೇನೆ : ಡಿಸಿಎಂ ಅಶ್ವತ್ಥ್ ಅಶ್ವತ್ಥ ನಾರಾಯಣ
ರೈಸಿಂಗ್ ಕನ್ನಡ:
ತುಮಕೂರು :
ಬೆಂಗಳೂರಿನ ಡಿಜೆ ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಎಸ್ಡಿಪಿಐ ಬ್ಯಾನ್ಗೆ ಒತ್ತಾಯ ಮಾಡುತ್ತೇನೆಎಂದು ಡಿಸಿಎಂ ಅಶ್ವತ್ಥನಾರಾಯಣ ಹೇಳಿದ್ದಾರೆ.
ತುಮಕೂರಿನ ಪಂಡಿತನಹಳ್ಳಿಯಲ್ಲಿ ಮಾತನಾಡಿದ ಡಿಸಿಎಂ ಅಶ್ವತ್ಥ್ ನಾರಾಯಣ, ವಿವಾದಾತ್ಮಕ ಹೇಳಿಕೆಯನ್ನ ಪೋಸ್ಟ್ ಮಾಡಿದವರನ್ನ ಪತ್ತೆ ಹಚ್ಚಲಾಗುತ್ತಿದೆ. ಇಂಥ ಘಟನೆಗಳು ನಡೆಯುವಾಗ ಸಾರ್ವಜನಿಕರು ಕಾನೂನನ್ನ ಕೈಗೆತ್ತಿಕೊಳ್ಳಬಾರದ.ತಾಳ್ಮೆ ಶಾಂತಿಯನ್ನ ಸೌಹಾರ್ದತೆಯನ್ನ ಕಾಪಾಡಬೇಕೆಂದರು.
ಗಲಭೆ ಕುರಿತು ಮಾತನಾಡಿದ ಡಿಸಿಎಂ, ಒಮ್ಮೆಲೆ ಇಷ್ಟು ಜನ ಸಂಘಟಿತರಾಗಿ ಬರೋದು ಸಾಧ್ಯವಿಲ್ಲ.ಇದರ ಹಿನ್ನೆಲೆಯನ್ನು ಪರಿಶೀಲಿಸಬೇಕಿದೆ ಎಂದರು.ವ್ಯವಸ್ಥಿತವಾಗಿ ಗಲಭೆ ಮಾಡಲು ಹೊರಟಿರುವವರನ್ನ ಪೊಲೀಸ್ ಇಲಾಖೆ ಪತ್ತೆ ಹಚ್ಚುತ್ತಿದೆ.
ಇನ್ನು ಗಲಭೆ ಸಂಭವಿಸಿದಾಗಲೆಲ್ಲಾ ಎಸ್ಡಿಪಿಐ ಸಂಘಟನೆ ಹೆಸರು ಕೇಳಿ ಬರುತ್ತಿದೆ. ಹೀಗಾಗಿ ಎಸ್ಡಿಪಿಐ ಸಂಘಟನೆಯನ್ನ ನಿಷೇಧಿಸಬೇಕೆಂಬ ಕೂಗು ಕೇಳಿ ಬರುತ್ತಿದೆ.ಈ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ,ಎಸ್ಡಿಪಿಐ ಸಂಘಟನೆಯನ್ನು ಬೆಳೆಸಿದವರು ಯಾರು? ರಕ್ಷಣೆ ಕೊಟ್ಟವರು ಯಾವ ಪಕ್ಷ ಅಂತಾ ಗೊತ್ತಿದೆ.ಹಿಂದಿನ ಹಲವು ಘಟನೆಯಲ್ಲಿ ಎಸ್ಡಿಪಿಐ ಪಾತ್ರ ಎಲ್ಲರಿಗೂ ಗೊತ್ತಿದೆ ಎಂದರು.
ಪಿಎಫ್ಐ, ಎಸ್ಡಿಪಿಐ ಯಾವ ರೀತಿ ನಾಡಿನಲ್ಲಿ ತೀವ್ರವಾದಿಗಳನ್ನ ಬೆಳೆಸುವಂತದ್ದು, ಸೌಹಾರ್ದತೆಯನ್ನ ಕದಡುತ್ತಿದೆ.ಟಾರ್ಗೆಟಿಂಗ್ ಕಿಲ್ಲಿಂಗ್ ಮಾಡುವಂತಹದ್ದು ಮಾಡಿಕೊಂಡು ಬಂದಿದೆ.ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಕೆಲಸ ಸರ್ಕಾರ ಮಾಡುತಿದೆ.ಯಾವ ಸಂಘಟನೆಯನ್ನ ಇದರಿಂದ ತಪ್ಪಿಸಿಕೊಳ್ಳಲು ಬಿಡಲ್ಲ.ಎಸ್ಡಿಪಿಐಯನ್ನು ಬ್ಯಾನ್ ಮಾಡಲು ನಾನೂ ಒತ್ತಾಯ ಮಾಡುತ್ತೇನೆ ಎಂದರು.
ಇನ್ನು ಮೃತರು ಅಮಾಯಕರು ಎಂದು ಹೇಳಿಕೆ ಕೊಟ್ಟ ಮಾಜಿ ಸಿಎಂ ಸಿದ್ದರಾಮಯ್ಯರ ಹೇಳಿಕೆಯನ್ನ ಡಿಸಿಎಂ ಅಶ್ವತ್ಥನಾರಾಯಣ ಖಂಡಿಸಿದರು.
ಇಂಥಹ ಹೇಳಿಕೆ ಕೊಡುವಲ್ಲಿ ಪ್ರತಿಪಕ್ಷಗಳು ಮುಂಚೂಣಿಯಲ್ಲಿರುತ್ತವೆ. ಪ್ರತಿಪಕ್ಷದ ನಾಯಕರು ಜಾಗೃತ ವಹಿಸಿ ಹೇಳಿಕೆ ಕೊಡೋದು ಒಳ್ಳೆಯದು.ಸಮಾಜದ ಹಿತದೃಷ್ಟಿಯನ್ನು ಗಮನದಲ್ಲಿ ಇಟ್ಟುಕೊಂಡು ಹೇಳಿಕೆ ಕೊಡಬೇಕು.ಇಂಥಹ ಸಮಾಜ ಘಾತುಕ ಕೃತ್ಯದಲ್ಲಿ ತೊಡಗಿರುವ ಯಾವುದೇ ಸಂಘಟನೆಯಾಗಿರಲಿ ಸರ್ಕಾರ ಬಿಡಲ್ಲ.ಅವರು ಕೈ ತಪ್ಪಿಸಿಕೊಳ್ಳಲು ಆಗಲ್ಲ.ಸಂಘಟನೆ ವಿರುದ್ಧ ಬ್ಯಾನ್ ಮಾಡುವುದೋ ಅಥವಾ ಬೇರೆ ಕ್ರಮನೋ ಎಲ್ಲವನೂ ಮಾಡುತ್ತೇವೆ ಎಂದರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?