Connect with us

ಸ್ಪೆಷಲ್

ಕಷ್ಟಪಟ್ಟು ಬೆಳೆ ಬೆಳೆಯೋ ರೈತರು ಮಿಸ್ ಮಾಡ್ದೆ ನೋಡಲೇಬೇಕಾದ ಸ್ಟೋರಿ ಇದು

ಕಷ್ಟಪಟ್ಟು ಬೆಳೆ ಬೆಳೆಯೋ ರೈತರು ಮಿಸ್ ಮಾಡ್ದೆ ನೋಡಲೇಬೇಕಾದ ಸ್ಟೋರಿ ಇದು..ಬೆಳೆ ಬೆಳೆಯೋದು ಒಂದು ರೀತಿಯ ಕಷ್ಟವಾದ್ರೆ ಅದನ್ನ ರಕ್ಷಣೆ ಮಾಡೋದು ಮತ್ತೊಂದು ರೀತಿಯ ಸಂಕಷ್ಟ..ಈ ಕ್ರಿಮಿ ಕೀಟಗಳಿಂದ ಪಶು ಪಕ್ಷಿಗಳಿಂದ ಹೊಲ ರಕ್ಷಣೆ ಮಾಡೋದು ಕಷ್ಟದ ಕೆಲಸವಲ್ಲ. ಆದ್ರೆ ಈ ಕಳ್ಳ ಕಿಡಿಗೇಡಿಗಳಿಂದ ಹೊಲವನ್ನ ರಕ್ಷಣೆ ಮಾಡೋದು ಇದೆಯಲ್ಲ, ಅದು ಜೀವ ಕೈಯಲ್ಲಿಡ್ಕೊಂಡು ಮಾಡಬೇಕಾದ ಡ್ಯೂಟಿ.,..ಇದೀಗ ಇದಕ್ಕೊಂದು ಮಾಸ್ಟರ್ ಪ್ಲಾನ್ ಮಾಡಿದ್ದಾನೆ ಆ ರೈತ ಕಳ್ಳರು ಆತನ ಹೊಲದತ್ತು ಮುಖ ಕೂಡ ಮಾಡದಂತೆ ಐಡಿಯಾ ಮಾಡಿದ್ದಾನೆ.

ಸಿಸಿಟಿವಿ…ಇತ್ತೀಚೆಗೆ ಕಳ್ಳರ ಹೆಡೆಮುರಿ ಕಟ್ಟುವಲ್ಲಿ ಸಿಸಿಟಿವಿ ತುಂಬಾನೇ ಬಹುಮುಖ್ಯ ಪಾತ್ರವಹಿಸುತ್ತಿದೆ.‌ ಜೊತೆಗೆ ಹಲವು ಕೊಲೆ ಸೇರಿದಂತೆ ಘೋರ ಅಪರಾಧ ಪ್ರಕರಣ ಪತ್ತೆ ಸೇರಿದಂತೆ ನಿಜವಾದ ಆರೋಪಿಗಳ ಬಂಧನಕ್ಕೆ ಪೊಲೀಸ್ ಇಲಾಖೆಗೆ ಬಹುದೊಡ್ಡ ಅಸ್ತ್ರವು ಕೂಡಾ ಹೌದು… ಇಷ್ಟು ದಿನ ನಗರ ಹಾಗೂ ಜನವಾಸಿ ಪ್ರದೇಶಗಳಲ್ಲಿ ಕಾಣುತ್ತಿದ್ದ ಸಿಸಿಟಿವಿ ಈಗ ಕೃಷಿ ಜಮೀನಿಗೂ ಲಗ್ಗೆ ಇಟ್ಟಿದೆ.

ಒಂದು ಕಡೆ ಹಚ್ಚ ಹಸಿರಿನ‌ ಮೆಣಸಿನ ಬೆಳೆ…. ನಡುವೆ ಕೆಂಪಾಗಿ ಕಾಣುತ್ತಿರುವ ಮೆಣಸಿನ ಹಣ್ಣು….ಮಗದೊಂದು ಕಡೆ ಈ ಕೆಂಪ್ಪು ಸುಂದರಿ‌ ಮೆಣಸಿನಕಾಯಿ ಕಾಯುತ್ತಿರುವ ಸಿಸಿಟಿವಿ…..ಎಸ್ ಈ ಎಲ್ಲ ದೃಶ್ಯಗಳಿಗೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹೀರೆನರ್ತಿ ಗ್ರಾಮದ ಶಿವಪುತ್ರಪ್ಪ ದ್ಯಾಮಣ್ಣನವರ ಜಮೀನು ಸಾಕ್ಷಿಯಾಗಿದೆ. ಮೊದಲೇ ಬರಗಾಲದಿಂದ ತತ್ತರಿಸಿರುವ ಅನ್ನದಾತರು. ಕಷ್ಟಪಟ್ಟು ಹಿಂಗಾರಿ ಬೆಳೆಯಾಗಿ ಶಿವಪುತ್ರಪ್ಪರವರು ಮೆಣಸಿನ ಬೆಳೆ ಬೆಳೆದಿದ್ದಾರೆ. ಜೊತೆಗೆ ಈ ಬಾರಿ ಮೆಣಸಿನಕಾಯಿಗೆ ಉತ್ತಮ ಬೆಲೆ ಇದ್ದು, ಪ್ರತಿ ಕ್ವಿಂಟಾಲಗೆ 80 ಸಾವಿರಕ್ಕೂ ಅಧಿಕ ಬೆಲೆ ಎಂದು ಹೇಳಲಾಗುತ್ತಿದೆ. ಅಲ್ಲಲ್ಲಿ ಬೆಳೆ ಕಳ್ಳತನ ಆರೋಪ ಕೇಳಿ ಬರುತ್ತಿವೆ.‌ ಅಲ್ಲದೆ ದಾರಿ ಹೋಗುವ ಜನರು ಸೇರಿದಂತೆ ಜಮೀನು ಬಳಿ ಓಡಾಟ ಮಾಡುವ ಜನರ ಹಾಗೂ ಕಳ್ಳರ ಕಾಟ ಹೆಚ್ಚಾಗಿದೆ. ಜೊತೆಗೆ ಇತ್ತಿಚ್ಚೆಗೆ ಧಾರವಾಡ ಹನಸಿ ಗ್ರಾಮದಲ್ಲಿ ರಾತ್ರೋ ರಾತ್ರಿ ಹತ್ತಿ ಬೆಳೆ ಕಳ್ಳತನವಾಗಿದ್ದು, ಈ ಎಲ್ಲ ಭೀತಿಯಿಂದ ರೈತ ತನ್ನ ಕಷ್ಟ ಪಟ್ಟ ಬೆಳೆದ ಮೆಣಸಿನ ಬೆಳೆ ರಕ್ಷಣೆಗೆ ಈಗ ಸಿಸಿಟಿವಿ ಮೊರೆ ಹೋಗಿದ್ದಾನೆ.‌



ಶಿವಪುತ್ರಪ್ಪ ದ್ಯಾಮಣ್ಣನವರ ತನ್ನ ಜಮೀನಿನ 5 ಎಕರೆ ಹೊಲದಲ್ಲಿ ರಾಸಾಯನಿಕ ಬಳಸದೆ ಸಾವಯವ ಮೆಣಸಿನಕಾಯಿ ಬೆಳೆ ಬೆಳೆದಿದ್ದು, ಆ ಬೆಳೆ ರಕ್ಷಣೆಗಾಗಿ 350° ಡಿಗ್ರಿಯಲ್ಲಿ ಹೊಲದಲ್ಲೇ ಸೋಲಾ‌ರ್ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದಾರೆ. ಈ ಮೂಲಕ ನಿತ್ಯ ಹಗಲು 12 ಗಂಟೆ ಬೆಳೆಯನ್ನು ಕಾಯಲು ಹದ್ದಿನ ಕಣ್ಣಿಟ್ಟಿದ್ದಾನೆ. ಜೊತೆಗೆ ಇದ್ದು ಕುಂದಗೋಳ ತಾಲೂಕಿನಲ್ಲಿ ರೈತರೊಬ್ಬರ ಪ್ರಥಮ ಪ್ರಯತ್ನವಾಗಿದೆ. ಹಗಲಿನಲ್ಲಿ 12 ಗಂಟೆ ಸಿಸಿಟಿವಿ ಕ್ಯಾಮೆರದಲ್ಲಿ ತನ್ನ ಬೆಳೆ ವೀಕ್ಷಣೆ ಮಾಡುವ ಶಿವಪುತ್ರಪ್ಪಾರವರು, ರಾತ್ರಿ ಹೊಲದಲ್ಲೇ ವಾಸ ಮಾಡುತ್ತಾ ತಮ್ಮ ಕಷ್ಟಪಟ್ಟು ಬೆಳೆದ ಮೆಣಸಿನ ಬೆಳೆಗೆ ಟೊಂಕಟ್ಟಿ ನಿಂತಿದ್ದಾರೆ. ಇನ್ನೂ ಶಿವಪುತ್ರಪ್ಪರವರ ಈ ವಿನೂತನ ಪ್ರಯತ್ನಕ್ಕೆ ಉಳಿದ ರೈತರು ಇದು ಒಳ್ಳೆಯ ಪ್ರಯತ್ನ ಎನ್ನುತ್ತಿದ್ದಾರೆ.

ಸಿಸಿಟಿವಿ ಅಳವಡಿಕೆಯಿಂದ ರೈತ ಹಗಲೊತ್ತಿನಲ್ಲಿ ಜಮೀನಿಗೆ ತೆರಳದೇ, ತಮ್ಮ ಹಾಗೂ ತಮ್ಮ ಪುತ್ರನ ಮೊಬೈಲನಲ್ಲಿ ಬೆಳೆ ಕೃಷಿ ಹೊಲ ನೋಡುತ್ತಿದ್ದು, ಹೊಲ ಕಾಯುವ ಸಮಯವನ್ನು ರೈತ ಈಗ ತನ್ನ ಇತರೆ ಕೃಷಿ ಸೇರಿದಂತೆ ಬೇರೆ ಬೇರೆ ಕೆಲಸಗಳನ್ನು ಮಾಡಿಕೊಳ್ಳಲು ಅನ್ನದಾತ ಶಿವಪುತ್ರಪ್ಪನಿಗೆ ತುಂಬಾ ಅನುಕೂಲವಾಗಿದೆ. ಉಳಿದ ರೈತರು ಕೂಡಾ ತಮ್ಮ ಬೆಳೆ ರಕ್ಷಣೆಗೆ ಸಿಸಿಡಿವಿ ಅಳವಡಿಕೊಳ್ಳುವುದರಿಂದ ತಮ್ಮ ಕಷ್ಟಪಟ್ಟು ಬೆಳೆದ ಬೆಳೆ ರಕ್ಷಣೆ ಮಾಡಿಕೊಳ್ಳಬಹುದಾಗಿದೆ..

Advertisement
ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ