Featured
7 ಭಾಷೆಗಳಲ್ಲಿ ಉಪ್ಪಿ ಅಂಡರ್ವರ್ಲ್ಡ್ ಕಬ್ಜ..!
![](https://risingkannada.com/wp-content/uploads/2019/09/ಉಪ್ಪಿ.jpg)
ಬೆಂಗಳೂರು : ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಆರ್. ಚಂದ್ರು ನಿರ್ದೇಶನದ ಮತ್ತೊಂದು ಸಿನಿಮಾ ಘೋಷಣೆಯಾಗಿದೆ. ಕಬ್ಜ ಹೆಸರಿನ ಈ ಸಿನಿಮಾ, ಬರೋಬ್ಬರಿ ಏಳು ಭಾಷೆಗಳಲ್ಲಿ ಬರಲಿದೆ ಎಂದು ನಿರ್ದೇಶಕ ಆರ್.ಚಂದ್ರು ಘೋಷಣೆ ಮಾಡಿದ್ದಾರೆ. ವಿಶೇಷ ಅಂದ್ರೆ, ಇದೇ ಮೊದಲ ಬಾರಿಗೆ ಆರ್.ಚಂದ್ರು ಅಂಡರ್ವರ್ಲ್ಡ್ ಕಥೆಯ ಸಿನಿಮಾ ಮಾಡ್ತಿದ್ದಾರೆ.
ಉಪೇಂದ್ರ ನಾಯಕನಾಗಿ ನಟಿಸ್ತಿರೋ ಈ ಸಿನಿಮಾದಲ್ಲಿ ಬಹುತಾರಾಗರಣ ಇರಲಿದೆ. ಬಹುಭಾಷೆಯಲ್ಲಿ ಮಾಡ್ತಿರೋದ್ರಿಂದ, ಬಹುಭಾಷಾ ತಾರೆಯರನ್ನೇ ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳುವ ಪ್ಲಾನ್ ನಿರ್ದೇಶಕರದ್ದು. ನಾಯಕಿ, ಖಳನಾಯಕ, ಪೋಷಕರ ಪಾತ್ರಗಳು ಸೇರಿದಂತೆ ಬಹುತೇಕರು, ಬಹುಭಾಷಾ ನಟರೇ ಇರಲಿದ್ದಾರೆ.
ಉಪ್ಪೇಂದ್ರ ನಿರ್ದೇಶನ ಮಾಡಿ, ಕನ್ನಡ ಸಿನಿಮಾದಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದ ಶಿವಣ್ಣ ಅಭಿನಯದ ಓಂ ಸಿನಿಮಾ ರೀತಿಯಲ್ಲಿ ಕಬ್ಜ ಮಾಡೋ ಪ್ಲಾನ್ ನಿರ್ದೇಶಕ ಹಾಗೂ ಉಪ್ಪಿಗೆ ಇದೆಯಂತೆ. ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ, ಮರಾಠಿ ಹಾಗೂ ಬೆಂಗಾಲಿಯಲ್ಲಿ ಸಿನಿಮಾ ತಯಾರಿ ನಡೆಯಲಿದೆ.
ಒಟ್ಟಿನಲ್ಲಿ ಯಶ್, ದರ್ಶನ್, ಸುದೀಪ್ ಬಳಿಕ ಈಗ ಉಪ್ಪಿ ಕೂಡ ಪ್ಯಾನ್ ಇಂಡಿಯಾ ಸಿನಿಮಾ ಮಾಡ್ತಿರೋದು ಖುಷಿಯ ವಿಚಾರ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?