Featured
ಗೋದಾವರಿ ದೋಣಿ ದುರಂತ, ಸಾವಿನ ಸಂಖ್ಯೆ ೧೨ಕ್ಕೇರಿಕೆ

ಆಂಧ್ರಪ್ರದೇಶ: ಪ್ರವಾಸಿಗರ ದೋಣಿ ದುರಂತಕ್ಕೆ ೨೧ ಮಂದಿ ನೀರಪಾಲಾದ ಘಟನೆ ಆಂಧ್ರ ಪ್ರದೇಶದ ಪೂರ್ವಗೋದಾವರಿ ಜಿಲ್ಲೆಯಲ್ಲಿ ಸಂಭವಿಸಿದೆ. ೬೩ ಜನರಿದ್ದ ಬೋಟ್ನಲ್ಲಿ ೨೧ ಜನರನ್ನ ಮಾತ್ರ ರಕ್ಷಣೆ ಮಾಡಲಾಗಿದ್ದು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಂಭವ ಇದೆ.
ಆಂಧ್ರಪ್ರದೇಶದ ಪ್ರವಾಸೋದ್ಯಮ ಇಲಾಖೆಗೆ ಸೇರಿದ ದೋಣಿಯಲ್ಲಿ ಗಂಡಿ ಪೋಚಮ್ಮ ದೇವಾಲಯದ ಬಳಿಗೆ ಸಾಗುವಾಗ ಕಚ್ಚಲೂರು ಎಂಬಲ್ಲಿ ದುರಂತಕ್ಕೀಡಾಗಿದೆ, ಘಟನಾ ಸ್ಳಳದಲ್ಲಿ ಎನ್ಡಿಆರ್ಎಫ್ ತಂಡ ಸಮರೋಪಾದಿಯಲ್ಲಿ ರಕ್ಷಣಾಕಾರ್ಯ ಮಾಡುತ್ತಿವೆ, ಆಂಧ್ರಪ್ರದೇಶ ಸರ್ಕಾರ ಭಾರತೀಯ ಸೇನೆಯಿಂದ ಹೆಲಿಕಾಪ್ಟರ್ಗಳನ್ನ ಒದಗಿಸಲು ಮನವಿ ಮಾಡಿದೆ. ಆಂಧ್ರ ಸಿಎಂ ಜಗನ್ಮೋಹನ್ ರೆಡ್ಡಿ ಹತ್ತು ಲಕ್ಷ ಪರಿಹಾರ ಘೋಷಿಸಿ ರಾಜ್ಯದ ಎಲ್ಲಾ ದೋಣಿ ಪ್ರವಾಸವನ್ನ ತಕ್ಷಣದಿಂದಲೇ ರದ್ದು ಮಾಡುವಂತೆ ಆದೇಶಿಸಿದ್ದು, ಘಟನೆ ಸಂಬಂಧ ವರದಿ ನೀಡಲು ತಜ್ಞರ ಸಮಿತಿ ರಚಿಸಿದ್ದಾರೆ.
Post Views: 5
Continue Reading
Advertisement
You may like
Click to comment
















