Featured
ಸಂಚಾರಿ ನಿಯಮ ಸರಳೀಕರಿಸಿ ಕೇಂದ್ರಕ್ಕೆ ಮುಜುಗರ ತಂದ ಗುಜರಾತ್: ತಿರುಚಿದ್ರೆ ರಾಜ್ಯಗಳೇ ಹೊಣೆ ಅಂದ್ರು ಗಡ್ಕರಿ
ನವದೆಹಲಿ : ಕೇಂದ್ರ ಸರ್ಕಾರ ತಂದ ಮೋಟಾರ್ ವಾಹನ ಕಾಯ್ದೆ ಸರಳ ಮಾಡಿದ್ರೆ ಆಯಾ ರಾಜ್ಯಗಳೇ ಹೊಣೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ದುಬಾರಿ ದಂಡವನ್ನ ಸರಳೀಕರಿಸಿಸಿ ಆದೇಶ ನೀಡಿರುವ ಗುಜರಾತ್ ಸರ್ಕಾರ , ಕೇಂದ್ರ ಸರ್ಕಾರಕ್ಕೆ ಮುಜುಗರ ತಂದಿರುವ ಬೆನ್ನಲ್ಲೆ ಹಲವು ರಾಜ್ಯಗಳೂ ಈ ನಿಟ್ಟಿನಲ್ಲಿ ಚಿಂತನೆ ನಡೆಸಿವೆ ಇದಕ್ಕೆ ಕರ್ನಾಟಕವೂ ಹೊರತಾಗಿಲ್ಲ.
ರಾಷ್ಟ್ರೀಯ ಸುದ್ದಿವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿರುವ ಗಡ್ಕರಿ, ಮನುಷ್ಯರ ಪ್ರಾಣಕ್ಕೆ ಬೆಲೆ ಇಲ್ಲವೇ..? ಕಾನೂನು, ಕಾಯ್ದೆಗಳ ಮೇಲೆ ಭಯವಿಲ್ಲದೇ ಹೋದರೆ ಇನ್ನಷ್ಟು ಪ್ರಕರಣಗಳು ಹೆಚ್ಚಾಗುತ್ತವೆ. ಸುಮಾರು ಒಂದೂವರೆ ಲಕ್ಷ ಜನ ರಸ್ತೆ ಅಪಘಾತದಲ್ಲಿ ಮೃತರಾದರೆ ಅದರಲ್ಲಿ ೬೫ ಪ್ರತಿಶತರು ಹದಿನೆಂಟು ವಯಸ್ಸಿನ ಆಸುಪಾಸಿನವರು. ನಿರ್ಭಯಾ ಪ್ರಕರಣವನ್ನೊಮ್ಮೆ ನೆನಪು ಮಾಡಿಕೊಳ್ಳಿ ಕಾನೂನು ಬಿಗಿಯಾಗಿದ್ರಿಂದ ಪ್ರಕರಣಗಳು ಕಡಿಮೆಯಾಗಿವೆ ಎಂದು ರಾಜ್ಯಗಳ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
You may like
ಮಾಸ್ಕ್, ಹ್ಯಾಂಡ್ ಸ್ಯಾನಿಟೈಸರ್ಗಳು ಅಗತ್ಯ ವಸ್ತುಗಳಲ್ಲ: ಕೇಂದ್ರ ಸರ್ಕಾರ..!
ಚೀನಾ ಜೊತೆ ಯಾವುದೇ ರಾಜಿಯಿಲ್ಲ- ಮನೆ ಮತ್ತು ಮನೆತನದ ರಾಜಕೀಯಕ್ಕೆ ಮಾತ್ರ ಕಾಂಗ್ರೆಸ್ ಸೀಮಿತ: ಸಚಿವ ಪ್ರಹ್ಲಾದ್ ಜೋಷಿ
ಸಿದ್ದರಾಮಯ್ಯಗೆ ಕಾಮನ್ ಸೆನ್ಸ್ ಇಲ್ಲ, ಹುಚ್ಚುತನದ ಪರಮಾವಧಿ : ಸಿದ್ದು ವಿರುದ್ಧ ಯಡಿಯೂರಪ್ಪ ಕೆಂಡಾಮಂಡಲ..!
ಕರ್ನಾಟಕ, ಕನ್ನಡಿಗರು ಅಂದ್ರೆ ಪ್ರಧಾನಿ ಮೋದಿಗೆ ಅಸಡ್ಡೆಯಾಕೆ..? : ಸಿದ್ದರಾಮಯ್ಯ ಪ್ರಶ್ನೆ
ಕನ್ನಡಿಗರು ವಿಶಾಲ ಹೃದಯದವರು, ಸೌಂದರ್ಯದ ನಾಡು ಕರುನಾಡು : ರಾಜ್ಯೋತ್ಸವಕ್ಕೆ ಪ್ರಧಾನಿ ಮೋದಿ ಸಂದೇಶ
ಸಿದ್ದರಾಮಯ್ಯ ಕನ್ನಡ ಪ್ರೇಮ ನೋಡಿ : ಕನ್ನಡಿಗರಿಗೆ ಸಿದ್ದು ಸಂದೇಶ ಇಲ್ಲಿದೆ ನೋಡಿ..