Featured
ರಾಮಮಂದಿರ ನಿರ್ಮಾಣ ಆಗುತ್ತೆ, ಏಕೆಂದರೆ ಸುಪ್ರೀಂಕೋರ್ಟ್ ನಮ್ಮದೇ..! ಬಿಜೆಪಿ ಮುಖಂಡ

ಉತ್ತರ ಪ್ರದೇಶ: ಬಿಜೆಪಿ ಶಾಸಕ ಹಾಗೂ ಸಚಿವ ಮುಕುತ್ ಬಿಹಾರಿ ವರ್ಮಾ ರಾಮಮಂದಿರ ಕಟ್ಟುವ ಬಗ್ಗೆ ಆಘಾತಕಾರಿ ಹೇಳಿಕೆ ನೀಡಿ ನಂತರ ಉಲ್ಟಾ ಹೊಡೆದಿದ್ದಾರೆ. ಅಯೋಧ್ಯೆಯಲ್ಲೇ ರಾಮಮಂದಿರ ನಿರ್ಮಾಣ ಮಾಡಲಾಗುತ್ತೆ, ಏಕೆಂದರೆ ಸುಪ್ರೀಂಕೊರ್ಟ್ ನಮ್ಮದೇ, ದೇವಸ್ಥಾನ, ನ್ಯಾಯಾಂಗ ಕೂಡ ನಮ್ಮದೇ ಎಂದಿದ್ದಾನೆ.
ಹೇಳಿಕೆ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಶಾಸಕ ಉಲ್ಟಾ ಹೊಡೆದಿದ್ದಾನೆ, ನಾನು ಹಾಗೆ ಹೇಳಿಯೇ ಇಲ್ಲ, ನನ್ನ ಹೇಳಿಕೆ ತಪ್ಪಾಗಿ ಅರ್ಥೈಸಲಾಗಿದೆ, ಸುಪ್ರೀಂಕೋರ್ಟ್ ನಮ್ಮದೇ ಅಂದರೆ ನಾವು ಕೋರ್ಟ್‌ನ್ನ ಅಪಾರವಾಗಿ ನಂಬಿದ್ದೇವೆ ಎಂದರ್ಥ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಈ ತರಹದ ಹೇಳಿಕೆಗಳು ಸಾಮಾನ್ಯವಾಗಿಬಿಟ್ಟಿವೆ. ಆಗಸ್ಟ್ ತಿಂಗಳಲ್ಲಿ ಇಲ್ಲಿನ ಡಿಸಿಎಂ ಕೇಶವ್ ಪ್ರಸಾದ್ ಕೂಡ ಅಯೋಧ್ಯೆ ಬಗ್ಗೆ ಹೇಳಿಕೆ ನೀಡಿ, ಒಂದು ವೇಳೆ ಎಲ್ಲಾ ವಿಧಾನಗಳೂ ಕೈ ತಪ್ಪಿದರೆ ಕೇಂದ್ರ ಸರ್ಕಾರ ಸಂಸತ್‌ನಲ್ಲಿ ಮಸೂದೆಯನ್ನ ಮಂಡಿಸಲಿದೆ, ಇದು ನಮಗೆ ಉಳಿದಿರುವ ಕೊನೆಯ ಅವಕಾಶ ಎಂದು ಹೇಳಿಕೆ ನೀಡಿದ್ದರು.
Advertisement
Post Views: 13
Continue Reading
Advertisement
You may like
Click to comment
















