Featured
ಮುಂಬೈ ಮಳೆ ನೀರಲ್ಲಿ ಜಾಗ್ವಾರ್ ವರ್ಸಸ್ ಬೊಲೆರೋ, ದುಬಾರಿ ಕಾರು ಭಾರತಕ್ಕಲ್ಲ ಅಂದರು ಟ್ವಿಟ್ಟರಿಗರು..!

RK AUTO Jaguar vs Bolero in #MumbaiRains@anandmahindra you must be proud of this! pic.twitter.com/A87t0ebfi6— Mohan Chandnani (@MohanSChandnani) September 4, 2019
ಮಹಾರಾಷ್ಟ್ರ(ಮುಂಬೈ): ಕಡಿಮೆ ಗ್ರೌಂಡ್ ಕ್ಲಿಯರೆನ್ಸ್, ಲಕ್ಸುರಿ ಸೆಡಾನ್ ವಾಹನಗಳು ನಮ್ಮ ದೇಶದ ರಸ್ತೆಗಳಿಗೆ ಎಂದಿಗೂ ಆಗಿಬರಲ್ಲ ಎಂಬುದಕ್ಕೆ ಇಲ್ಲೊಂದು ಉದಾಹರಣೆ ಇದೆ.
ನವೀಮುಂಬೈನ ಆಯ್‌ರೊಲಿ ಅಂಡರ್‌ಪಾಸ್ ಮಳೆ ನೀರಿನಿಂದ ಸೊಂಟದ ವರೆಗೆ ನೀರು ತುಂಬಿಕೊಂಡಿತ್ತು. ಇದರಲ್ಲಿ ಜಾಗ್ವಾರ್ ಕಾರ್ ದಾಟಲು ಪ್ರಯತ್ನಪಟ್ಟು ತುದಿಯಲ್ಲೇ ಸಿಲುಕಿಕೊಂಡು ಕೊಸರಾಡುತ್ತಿದ್ದರೆ ಎಲ್ಲಿಂದಲೋ ನುಗ್ಗಿದ ಬೊಲೆರೋ ಪಿಕ್‌ಅಪ್ ( 4 ಸೀಟರ್ ) ನೀರನ್ನ ಸೀಳಿ ಸೆಕೆಂಡ್‌ಗಳಲ್ಲಿ ದಡ ಮುಟ್ಟಿತು. Unfair contest indeed…
But such incidents will motivate some car buyers to lean towards mini SUVs, SUVs in India.
Ground clearance is especially important, given some of our roads! https://t.co/QJdLDjmjAw— Amit Paranjape (@aparanjape) September 5, 2019
ಈ ವಿಡಿಯೋ ಶೂಟ್ ಮಾಡಿದ್ದಾತ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದ, ಇಂತಹ ಘಟನೆಗಳೇ ಭಾರತದಂತಹ ರಾಷ್ಟ್ರಗಳಿಗೆ ಮಿನಿ ಎಸ್‌ಯುವಿ ಹಾಗೂ ಎಸ್‌ಯುವಿಗಳನ್ನ ಖರೀದಿ ಮಾಡಲು ಪ್ರೇರೇಪಿಸುತ್ತವೆ ಎಂದು ಬರೆದುಕೊಂಡಿದ್ದ. We won’t brag over this. It’s an unfair contest.The Bolero’s meant to negotiate such landscapes (seascapes?)But now you know why the Bolero’s my favourite vehicle to drive. “Jaguar gets stuck in Mumbai floods: Mahindra Bolero drives through like a BOSS “ https://t.co/c2jXg92uWY— anand mahindra (@anandmahindra) September 4, 2019
ಈ ವಿಷಯವನ್ನ ವೆಬ್‌ಲಿಂಕ್‌ನೊಂದಿಗೆ ಮಹಿಂದ್ರಾ ಕಂಪನಿ ಮಾಲೀಕ ಆನಂದ್ ಮಹಿಂದ್ರಾ ಟ್ವೀಟ್ ಮಾಡಿ ಬೊಲೆರೋ ವಾಹನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈಗ ಗೊತ್ತಾಯ್ತ ನನಗೇಕೆ ಇಂದಿಗೂ ಬೊಲೆರೋ ಫೇವರಿಟ್ ಎಂದು ಹೇಳಿಕೊಂಡಿದ್ದಾರೆ.
















