Featured
ಮೀ ಟೂ ಪ್ರಕರಣ: ಶೃತಿ ಹರಿಹರನ್ ಅರ್ಜಿ ವಜಾ

ಬೆಂಗಳೂರು: ವಿಸ್ಮಯ ಸಿನಿಮಾ ಶೂಟಿಂಗ್ ವೇಳೆ ಅನುಚಿತ ವರ್ತನೆ ನಡೆದಿದೆ ಎಂದು ಮೀಟೂ ಅಭಿಯಾನದಲ್ಲಿ ಪಾಲ್ಗೊಂಡು ನಟ ಅರ್ಜುನ್ ಸರ್ಜಾ ವಿರುದ್ಧ ಗಂಭೀರ ಆರೋಪ ಮಾಡಿದ್ದ ನಟಿ ಶೃತಿ ಹರಿಹರನ್‌ಗೆ ಹಿನ್ನಡೆಯಾಗಿದೆ. ತಮ್ಮ ಮೇಲಿನ ಮಾನನಷ್ಟ ಮೊಕದ್ದಮೆ ರದ್ದು ಮಾಡಬೇಕು ಎಂದು ೨೩ನೇ ಹೆಚ್ಚುವರಿ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿಯನ್ನ ನ್ಯಾಯಾಧೀಶರು ವಜಾಗೊಳಿಸಿ ವಿಚಾರಣೆ ಮುಂದುವರಿಸುವಂತೆ ಆದೇಶಿಸಿದ್ದಾರೆ.
ಮೀಟೂ ಅಭಿಯಾನ ಉತ್ತುಂಗದಲ್ಲಿದ್ದಾಗ ನಟಿ ಶೃತಿ ಹರಿಹರನ್ ತನಗೂ ಈ ತರಹದ ಅನುಭವ ವಿಸ್ಮಯ ಸಿನಿಮಾ ಶೂಟಿಂಗ್ ವೇಳೆ ಅರ್ಜುನ್ ಸರ್ಜಾರಿಂದ ಆಗಿತ್ತು ಎಂದು ಆರೋಪಿಸಿದ್ದರು. ಸರ್ಜಾ ಕುಟುಂಬ ಈ ಆರೋಪವನ್ನ ಗಂಭೀರವಾಗಿ ಪರಿಗಣಿಸಿತ್ತು, ದೃವಾ ಸರ್ಜಾ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಶೃತಿ ಹರಿಹರನ್ ಮೂರನೆಯವರು ಹೂಡಿರುವ ದಾವೆಯನ್ನ ರದ್ದುಮಾಡಬೇಕು ಎಂದು ಕೇಳಿಕೊಂಡಿದ್ದರು.
Post Views: 5
Continue Reading
Advertisement
You may like
Click to comment
















