Featured
ಬಿಜೆಪಿ ಮುಖಂಡನ ಅನೈತಿಕ ದೃಶ್ಯಗಳು ಪೆನ್ಡ್ರೈವ್ಲ್ಲಿ ಪೊಲೀಸರಿಗೆ ತಲುಪಿದ್ರೂ ಆದಿತ್ಯಾನಾಥ್ ಸರ್ಕಾರದಿಂದ ತನಿಖೆ ಇಲ್ಲ

ಉತ್ತರ ಪ್ರದೇಶ: ಮಾಜಿ ಕೇಂದ್ರ ಸಚಿವ ಸ್ವಾಮಿ ಚಿನ್ಮಯಾನಂದನ ಮೇಲೆ ಸಾಲು ಸಾಲು ಅತ್ಯಾಚಾರ ಆರೋಪಗಳ ಬೆನ್ನಲ್ಲೇ ಕಾನೂನು ಪದವಿ ಓದುತ್ತಿರುವ ವಿದ್ಯಾರ್ಥಿನಿ ವಿಡಿಯೋ ಮೂಲಕ ನೇರವಾಗಿ ಅತ್ಯಾಚಾರ ಆರೋಪ ಮಾಡಿ ಉತ್ತರ ಪ್ರದೇಶ ಸರ್ಕಾರವನ್ನ ಸಾಕಷ್ಟು ಮುಜುಗರಕ್ಕೆ ಒಳಪಡಿಸಿದ್ದಳು. ಈಗ ಆಕೆ ಆ ದೃಶ್ಯಗಳನ್ನ ಪೆನ್ಡ್ರೈವ್ನಲ್ಲಿ ತನ್ನ ಗೆಳೆಯರ ಮೂಲಕ ಸುಪ್ರೀಕೋರ್ಟ್ ನೇಮಿಸಿರುವ ವಿಶೇಷ ತನಿಖಾ ತಂಡಕ್ಕೆ ರವಾನೆ ಮಾಡಿದ್ದಾಳೆ.
೨೩ವರ್ಷದ ಈ ಯುವತಿ ಚಿನ್ಮಯಾನಂದನ ಮೇಲೆ ನೇರವಾಗಿ ಆರೋಪ ಮಾಡಿ ಸತತ ಒಂದು ವರ್ಷಗಳ ಕಾಲ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ, ವಿಡಿಯೋ ಮಾಡಿ ಬ್ಲಾಕ್ಮೇಲ್ ಮಾಡಿದ್ದಾನೆ ಎಂದು ವಿಶೇಷ ತನಿಖಾ ತಂಡದ ಎದುರು ಹೇಳಿದ್ದಳು. ಆಕೆ ತನ್ನ ಕನ್ನಡಕದಲ್ಲಿ ಸೂಕ್ಷ್ಮ ಕ್ಯಾಮೆರಾ ಫಿಕ್ಸ್ ಮಾಡಿಕೊಂಡು ಶೂಟ್ ಮಾಡಿರುವುದಾಗಿಯೂ ಹೇಳಿದ್ದಾಳೆ, ಇಷ್ಟಾದರೂ ಉತ್ತರಪ್ರದೇಶದ ಯೋಗಿ ಆದಿತ್ಯಾನಾಥ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸ.
Post Views: 8
Continue Reading
Advertisement
You may like
Click to comment
















