ಮುಂಬೈ : ಇದು ವಿಚಿತ್ರ ಆದರೂ ಸತ್ಯ. ಐಐಟಿ ಬಾಂಬೆ ಕ್ಯಾಪಸ್ಗೆ ಹಸು ನುಗ್ಗಿರೋ ದೃಶ್ಯ ಈಗ ಇಂಟರ್ನೆಟ್ನಲ್ಲಿ ಸಖತ್ ವೈರಲ್ ಆಗಿದೆ. ಹಸುವೊಂದು ಕ್ಲಾಸ್ ರೂಮಿಗೆ ಎಂಟ್ರಿ ಕೊಟ್ಟಿದ್ದು, ವಿದ್ಯಾರ್ಥಿಗಳು ತಮ್ಮ ಪಾಡಿಗೆ ತಾವು ಕ್ಲಾಸ್ ರೂಮಿನಲ್ಲೇ ಇದ್ರು. ಕೆಲವು ವಿದ್ಯಾರ್ಥಿಗಳು ಹಸುವನ್ನ ಓಡಿಸಲು ಪ್ರಯತ್ನ ಪಟ್ಟಿದ್ದಾರೆ. ಅದ್ರೆ, ಆ ಹಸು ಇಡೀ ಕ್ಲಾಸ್ ರೂಮಿನಲ್ಲಿ ರೌಂಡ್ ಹಾಕಿರೋ ದೃಶ್ಯವನ್ನ ಸೋಶಿಯಲ್ ಮೀಡಿಯಾದಲ್ಲಿ ಹಾಕಲಾಗಿದೆ. ಸದ್ಯಕ್ಕೆ ಎಲ್ಲೆಡೆ ಇದು ವೈರಲ್ ಆಗಿದೆ.
ಈ ಹಸುವಿನ ವಿಡಿಯೋ ಕುರಿತು ಮಾತ್ನಾಡಿರೋ ಐಐಟಿ ಬಾಂಬೆ ಸಿಬ್ಬಂದಿ, ವಿಡಿಯೋ ಅಸ್ಪಷ್ಟವಾಗಿದೆ. ಅಲ್ಲದೆ, ಎಲ್ಲಿ, ಯಾವಾಗ ಆಗಿರೋದು ಅನ್ನೋದ್ರ ಬಗ್ಗೆ ಸ್ಪಷ್ಟವಾಗಿ ತಿಳಿದಿಲ್ಲ. ಈ ಕುರಿತು ಕುಲಂಕುಶವಾಗಿ ಪರಿಶೀಲನೆ ನಡೆಸೋದಾಗಿ ಹೇಳಿದ್ದಾರೆ.
ಆದ್ರೆ, ವಿದ್ಯಾರ್ಥಿಗಳು ಮಾತ್ರ ಇದು ಐಐಟಿ ಬಾಂಬೆಯಲ್ಲಿ ಆಗಿರೋ ಘಟನೆ. ಕಳೆದ ಶನಿವಾರ ಮುಂಬೈನಲ್ಲಿ ಭಾರೀ ಮಳೆಯಾಗಿತ್ತು. ಈ ವೇಳೆ, ಕ್ಯಾಂಪಸ್ ಪ್ರವೇಶಿಸಿದ ಹಸು, ಆಶ್ರಯಕ್ಕಾಗಿ ಕ್ಲಾಸ್ ರೂಮಿಗೆ ಎಂಟ್ರಿ ಕೊಟ್ಟಿದೆ ಎಂದು ಸುದ್ದಿ ಸಂಸ್ಥೆಗೆ ಹೇಳಿಕೆ ನೀಡಿದ್ದಾರೆ.
ಒಟ್ನಲ್ಲಿ, ಐಐಟಿ ಬಾಂಬೆಯಂತಹ ಪ್ರತಿಷ್ಠಿತ ಸಂಸ್ಥೆಯೊಳಗೆ ಹಸು ನುಗ್ಗಿರೋದು ಭಾರೀ ಚರ್ಚೆಗೆ ಕಾರಣವಾಗಿದೆ.
ನೀವು ಐಪಿಎಲ್ ಅನ್ನು ನಿಯಮಿತವಾಗಿ ನೋಡಬೇಕು. ಹಾಗಾದರೆ ಐಪಿಎಲ್ ಟ್ರೋಫಿಯಲ್ಲಿ ಏನು ಬರೆದಿದೆ ಎಂದು ಹೇಳಬಹುದಾ?
ಹಾರ್ದಿಕ್ ಪಾಂಡ್ಯಗೆ ಬ್ಯಾಟ್ ಹಿಡಿಯಲು ಪಾಠ ಹೇಳಿದ ಅನಿಲ್ ಕುಂಬ್ಳೆ!
ಪೊಲೀಸ್ ಅಧಿಕಾರಿಗೆ ಜೀವಾವಧಿ ಶಿಕ್ಷೆ: 112 ಎನ್ ಕೌಂಟರ್ ಮಾಡಿದ್ದ ಪಿ ಶರ್ಮಾಗೆ ಜೈಲೇ ಗತಿ!
ಬಾಲಿವುಯಡ್ನ ಎಲ್ಲಾ ನಟ-ನಟಿಯರ ಜೊತೆ ಈತ ಕ್ಲೋಸ್: ದಿನದ ಗಳಿಕೆ ಎಷ್ಟು ಗೊತ್ತಾ?
ಸಚಿನ್ ಮುಂದೆಯೇ ಅವರ 29 ವರ್ಷದ ದಾಖಲೆಯನ್ನ ಬ್ರೇಕ್ ಮಾಡಿದ ಮುಶೀರ್ ಖಾನ್!
2050ಕ್ಕೆ ಮಂಗಳೂರು, ಮುಂಬೈ, ಕೋಲ್ಕತ್ತಾಗೆ ಮುಳುಗಡೆ ಭೀತಿ..! ಜಾಗತಿಕ ಗಂಡಾಂತರ..!