Featured
ಜೀ ಕುಟುಂಬ ಅವಾರ್ಡ್ಸ್ 2019 : ದಿಗ್ಗಜರ ಸಮಾಗಮದಲ್ಲಿ ಜೀ ಕನ್ನಡ ಮಿಂಚು : EXCLUSIVE
ಬೆಂಗಳೂರು : ಜೀ ಕನ್ನಡ. ಕರ್ನಾಟಕದಲ್ಲಿ ಅಗ್ರಸ್ಥಾನದಲ್ಲಿ ನಿಂತಿರೋ ಕನ್ನಡಿಗರ ನಾಡಿಮಿಡಿತ. ರಾಜ್ಯದಲ್ಲಿ ಪ್ರತಿ ಮನೆಯ ಆತ್ಮೀಯ ಸದಸ್ಯನಾಗಿ ನೆಲೆ ನಿಂತಿರೋ ಸಂಪೂರ್ಣ ಮನರಂಜನಾ ವಾಹಿನಿ. ಭಿನ್ನ ವಿಭಿನ್ನ ಪ್ರಾಕಾರಗಳ ಕಾರ್ಯಕ್ರಮಗಳಿಗೆ, ಶ್ರೇಷ್ಠ ಗುಣಮಟ್ಟದ ಜನಮನ್ನಣೆಯ ಕಾರ್ಯಕ್ರಮಗಳಿಗೆ ಹೆಸರಾಗಿರುವ ವಾಹಿನಿ. 13ನೇ ವಸಂತದ ಸಂಭ್ರಮದಲ್ಲಿರೋ ಜೀ ಕನ್ನಡ ಕುಟುಂಬ, ಪ್ರತಿ ವರ್ಷದದಂತೆ ಈ ವರ್ಷವೂ ಕೂಡ ಜೀ ಕನ್ನಡ ವಾಹಿನಿ, ಜೀ ಕುಟುಂಬ ಅವಾರ್ಡ್ಸ್ 2019 ಕಾರ್ಯಕ್ರಮವನ್ನ ಇತ್ತೀಚೆಗಷ್ಟೇ ಆಯೋಜಿಸ್ತು. ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನೆರವೇರಿದೆ.
ಮಹಾಗುರು ಡಾ. ಹಂಸಲೇಖರಿಂದ ಕಾರ್ಯಕ್ರಮಕ್ಕೆ ಚಾಲನೆ
ಜೀ ಕುಟುಂಬ ಅವಾರ್ಡ್ಸ್ 2019ರ ಕಾರ್ಯಕ್ರಮವನ್ನ ಮಹಾಗುರುಗಳಾದ ನಾದ ಬ್ರಹ್ಮ ಡಾ. ಹಂಸಲೇಖರವರು ಆರಂಭಿಕ ನಿರೂಪಣೆಯ ಮೂಲಕ ಚಾಲನೆ ಕೊಟ್ಟಿದ್ದಾರೆ. ನಂತರ ಜೀ ಕುಟುಂಬದ ಜನಪ್ರಿಯ ನಿರೂಪಕರಾದ ಅನುಶ್ರೀ ಹಾಗೂ ಮಾಸ್ಚರ್ ಆನಂದ್ ಹಾಗೂ ವಿಜಯ ರಾಘವೇಂದ್ರ ಮುಂದುವರೆಸಿದ್ದಾರೆ.ವಿಶೇಷ ಅಂದ್ರೆ ಕಮಲಿ ಧಾರಾವಾಹಿಯ ಕಮಲಿ, ರಿಶಿ ಹಾಗೂ ಗಟ್ಟಿಮೇಳ ಧಾರಾವಾಹಿಯ ವೇದಾಂತ್ ಮತ್ತು ಅಮೂಲ್ಯ ಜೋಡಿಯೂ ಕೂಡ ಕಾರ್ಯಕ್ರಮವನ್ನ ನಿರೂಪಿಸಿದ್ದು ವಿಶೇಷವಾಗಿತ್ತು.
ದಿಗ್ಗಜ ತಾರೆಯರ ಸಮಾಗಮ
ಜೀ ಕುಂಟುಂಬ ಅವಾರ್ಡ್ಸ್ 2019ರ ವೇದಿಕೆಯಲ್ಲಿ ಜೀ ಕನ್ನಡದ ಪರಿಪೂರ್ಣ ಕಲಾವಿದರ ಬಳಗ, ತಂತ್ರಜ್ಞರ ಬಳಗ ಭಾಗಿಯಾಗಿತ್ತು. ಕನ್ನಡ ಚಿತ್ರರಂಗದ ಹಲವಾರು ತಾರೆಯರು ಸಂಭ್ರಮದಲ್ಲಿ ಭಾಗಿಯಾಗಿದ್ದರು. ಈ ಪೈಕಿ, ಚಿತ್ರರಂಗದ ಜೊತೆಗೆ ಜೀ ಕುಟುಂಬದ ತೀರ್ಪುಗಾರರೂ ಆಗಿರುವಂತಹ, ನವರಸ ನಾಯಕ ಜಗ್ಗೇಶ್, ರಮೇಶ್ ಅರವಿಂದ್, ರಕ್ಷಿತಾ ಪ್ರೇಮ್, ರಾಜೇಶ್ ಕೃಷ್ಣನ್ ಸೇರಿ, ರೋರಿಂಗ್ ಸ್ಟಾರ್ ಶ್ರೀ ಮುರಳಿ, ಡಾಲಿ ಧನಂಜಯ, ವಸಿಷ್ಠ ಸಿಂಹ, ನೀನಾಸಂ ಸತೀಶ್ ಜೊತೆಗೆ ಪ್ರಣಯ ರಾಜ ಶ್ರೀನಾಥ್, ಶ್ರೀನಿವಾಸ ಮೂರ್ತಿ ಸೇರಿದಂತೆ, ಕನ್ನಡ ಚಿತ್ರರಂಗದ ಅಂದಿನ ಇಂದಿನ ಹಲವಾರು ಕಲಾವಿದರು, ಜೀ ಕುಟುಂಬ ಅವಾರ್ಡ್ಸ್ 2019ರ ಸಂಭ್ರಮದಲ್ಲಿ ಮಿಂದೇಳಿದ್ದಾರೆ.
ಜೀ ಕುಟುಂಬ ರೆಡ್ ಕಾರ್ಪೆಟ್ನಲ್ಲಿ ತಾರೆಗಳ ಕಲರವ
ಜೀ ಕುಟುಂಬ ರೆಡ್ ಕಾರ್ಪೆಟ್ನಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ತಾರೆಯರು ಮನಸಾರೆ ಮಾತನಾಡಿದ್ದಾರೆ.. ಜೀ ಕಲಾವಿದ್ರು ತಂತ್ರಜ್ಞರು, ಪ್ರಶಸ್ತಿ ಪ್ರಧಾನ ಮಾಡಲು ಬಂದಿದ್ದ ಚಿತ್ರರಂಗ ಗಣ್ಯರು ರಾಜಕೀಯ ಗಣ್ಯರು ಜೀ ಕನ್ನಡ ಜೊತೆಗಿನ ನಂಟಿನ ಬಗ್ಗೆ ವಿಶೇಷವಾಗಿ ಮಾತನಾಡಿದ್ದಾರೆ.
44 ವಿಭಾಗಗಳಿಗೆ ಪ್ರಶಸ್ತಿ ಪ್ರದಾನ
ಜೀ ಕುಟುಂಬದ ಫಿಕ್ಷನ್ ಮತ್ತು ನಾನ್ ಫಿಕ್ಷನ್ ವಿಭಾಗ ಸೇರಿ, ಒಟ್ಟು 44 ವಿಭಾಗಗಳಿಗೆ ಪ್ರಶಸ್ತಿಯನ್ನ ಕೊಡಲಾಗಿದೆ. ಈ ಬಾರಿ ಕೆಲವರಿಗೆ ಎಡೆರಡು ಬಾರಿ ಪ್ರಶಸ್ತಿ ಸಿಕ್ಕರೆ, ಮತ್ತೆ ಕೆಲವರಿಗೆ ಚೊಚ್ಚಲ ಪ್ರಶಸ್ತಿಯನ್ನ ಪಡೆದ ಸಂಭ್ರಮ.
ಸಿನಿಮಾ ಸ್ಟಾರ್ ಗಳಿಂದ ಸೂಪರ್ ಡ್ಯಾನ್ಸ್ ಧಮಾಕ
ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಮೇಘನಾ ರಾಜ್ , ಮೇಘನಾ ಗಾಂವ್ಕರ್, ಕಿಸ್ ಖ್ಯಾತಿಯ ವಿರಾಟ್, ಶ್ರೀಲೀಲಾ ಸೇರಿದಂತೆ, ಚಿತ್ರರಂಗದ ಹಲವಾರು ಕಲಾವಿದ್ರು ಬೊಂಬಾಟ್ ಡ್ಯಾನ್ಸ್ ಪರ್ಫಾರ್ಮೆನ್ಸ್ ಕೊಟ್ಟಿರೋದು ಜೀ ಕುಚುಂಬ ಅವಾರ್ಡ್ಸ್ 2109ರ ಸ್ಪೆಷಲ್ ಹೈಲೈಟ್.
ಮಿಂಚು ಹರಿಸಿದ ಜೀ ಕುಟುಂಬದ ತಾರೆಯರು
ಜೀ ಕುಟುಂಬ ಅವಾರ್ಡ್ಸ್ ನಲ್ಲಿ ಜೀ ಕನ್ನಡದ ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳ ತಾರಾಮಣಿಗಳು ತಮ್ಮ ಅದ್ಭುತ ಪರ್ಫಾರ್ಮೆನ್ಸ್ ಮೂಲಕ ರಂಗೇರಿಸಿದ್ದಾರೆ. ನಗಿಸಿದ್ದಾರೆ. ಕುಣಿಸಿದ್ದಾರೆ. ಅಳಿಸಿದ್ದಾರೆ. ಮೈನವಿರೇಳಿಸಿದ್ದಾರೆ.
ಅಕ್ಟೋಬರ್ 19 ಮತ್ತು 20 ರಂದು ಸಂಜೆ 7ರಿಂದ ಪ್ರಸಾರ
ಅಕ್ಟೋಬರ್ 19 ಮತ್ತು 20ರಂದು ಅಂದ್ರೆ, ಶನಿವಾರ ಮತ್ತು ಭಾನುವಾರ ಸಂಜೆ 7ಗಂಟೆಯಿಂದ ಜೀ ಕುಟುಂಬ ಅವಾರ್ಡ್ಸ್ 2019ರ ಪ್ರಸಾರವಾಗ್ತಿದ್ದು, ನಾಡಿನ ಜನತೆ ಎರಡು ದಿನ ಭರಪೂರ ಮನರಂಜನೆ ಸಿಗಲಿದೆ. ಜೊತೆಗೆ ಈ ಕಾರ್ಯಕ್ರಮದಲ್ಲಿ ಕುಟುಂಬ ಸದಸ್ಯರ ನೋವು -ನಲಿವು ಸೋಲು -ಗೆಲುವುಗಳ ಸಮ್ಮಿಲನವಾಗಿದೆ.. ರಂಜನೆಯ ಜೊತೆಗೆ ಮನಮಿಡಿಯುವಂತಹ ಅನೇಕ ಸನ್ನಿವೇಷಗಳಿಗೆ ಜೀ ಕುಟುಂಬ ಅವಾರ್ಡ್ಸ್ 2019 ಸಾಕ್ಷಿಯಾಗಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?