Featured
#ಜೊತೆಜೊತೆಯಲಿ : ನಂಬರ್ ಒನ್ ಸೀರಿಯಲ್ ಜೊತೆ ಜೊತೆಯಲಿ ಕೂಡ ಕದ್ದಿದ್ದೇನಾ..? ಏನಿದರ ರಹಸ್ಯ..?
![](https://risingkannada.com/wp-content/uploads/2019/10/IMG-20191014-WA0001.jpg)
ರೈಸಿಂಗ್ ಕನ್ನಡ : ಸದ್ಯ ಕನ್ನಡ ಕಿರುತೆರೆಯಲ್ಲಿ ನಂಬರ್ ಒನ್ ಕಾರ್ಯಕ್ರಮ ಅಂದ್ರೆ ಅದು ಜೀ ಕನ್ನಡದಲ್ಲಿ ಪ್ರಸಾರವಾಗ್ತಿರೋ ಜೊತೆ ಜೊತೆಯಲಿ ಧಾರಾವಾಹಿ. ಕಳೆದ ಒಂದು ತಿಂಗಳಿನಿಂದ ನಂಬರ್ ಒನ್ ಸ್ಥಾನವನ್ನ ಉಳಿಸಿಕೊಂಡಿರೋದು ಜೊತೆ ಜೊತೆಯಲಿ ಧಾರಾವಾಹಿಯ ವಿಶೇಷತೆ. ವಿಷ್ಣುವರ್ಧನ್ ಅಳಿಯ ಅನಿರುದ್ಧ್-ಅನು ನಟಿಸಿರೋ ಜೊತೆ ಜೊತೆಯಲಿ ನಾಲ್ಕು ವಾರಗಳಿಂದ ನಂಬರ್ ಒನ್ ಸ್ಥಾನವನ್ನ ಉಳಿಸಿಕೊಂಡಿದೆ.
ಆದ್ರೆ, ಜೊತೆ ಜೊತೆಯಲಿ ಧಾರಾವಾಹಿ ಕೂಡ ರಿಮೇಕ್ ಅನ್ನೋ ಮಾತು ಕೇಳಿ ಬರ್ತಿದೆ. ಯೆಸ್, ಇದು ಮರಾಠಿಯಲ್ಲಿ ಪ್ರಸಾರವಾಗ್ತಿರೋ ತು ಪಹತೆ ರೆ, ಎಂಬ ಧಾರಾವಾಹಿಯ ರಿಮೇಕ್ ಅಂತೆ. ಈಗಾಗಲೇ ಮರಾಠಿಯಲ್ಲಿ ಒಂದು ವರ್ಷ ಪೂರೈಸಿದ್ದು, ಇದನ್ನೇ ಕನ್ನಡಕ್ಕೆ ರಿಮೇಕ್ ಮಾಡಲಾಗಿದೆಯಂತೆ. ಮೂಲ ಕಥೆ ಮರಾಠಿಯದ್ದೇ ಆಗಿದ್ದು, ಕನ್ನಡದ ನೇಟಿವಿಟಿಗೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳಲಾಗಿದೆ.
ಅನಿರುದ್ಧ್ ಮತ್ತು ಅನು ತುಂಬಾ ಅದ್ಭುತವಾಗಿ ನಟಿಸಿದ್ದು, ಮನೆ ಮನೆ ಮಾತಾಗಿದ್ದಾರೆ. ಹೊಸ ರೀತಿಯ ನಿರೂಪಣೆ ಜೊತೆ ಮಧ್ಯಮ ವರ್ಗ ಕುಟುಂಬದಲ್ಲಿ ನಡೆಯೋ ಕಥೆ ಸಾಕಷ್ಟು ಜನರಿಗೆ ಇಷ್ಟವಾಗಿದೆ. ಸಿನಿಮಾಗಿಂತಲೂ ಅನಿರುದ್ಧ್ಗೆ ಈ ಧಾರಾವಾಹಿಯೇ ಹೆಚ್ಚು ಖ್ಯಾತಿ ತಂದು ಕೊಟ್ಟಿದೆ ಎಂದ್ರೆ ತಪ್ಪಲ್ಲ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?