Featured
ವಿಜಯಪುರದಲ್ಲಿ ಬೈಕ್ ಸಮೇತ ಕೊಚ್ಚಿ ಹೋದ ಯುವಕ: ಭೀಮಾ ನದಿಯಲ್ಲಿ ಅವಘಡ
![](https://risingkannada.com/wp-content/uploads/2020/09/viajyapura-death-2.jpg)
ವಿಜಯಪುರ:
ರೈಸಿಂಗ್ ಕನ್ನಡ:
ಜಲಾವೃತವಾದ ಬ್ಯಾರೇಜನ್ನು ಬೈಕ್ ಸಮೇತ ದಾಟಲು ಹೋದ ಯುವಕ ಭೀಮಾನದಿ ಪಾಲಾದ ಘಟನೆ ವಿಜಯಪುರದಲ್ಲಿ ನಡೆದಿದೆ.
ಜಿಲ್ಲೆಯ ಚಡಚಣ ತಾಲೂಕಿನ ಉಮರಾಣಿ ಬಳಿ ಭೀಮಾನದಿಯಲ್ಲಿ ಅವಘಡ ಸಂಭವಿಸಿದೆ. ಭೀಮಾನದಿಗೆ ಅಡ್ಡಲಾಗಿ ಕಟ್ಟಿದ ಉಮರಾಣಿ – ಲವಗಿ ಬ್ಯಾರೇಜ್ ತುಂಬಿ ಹರಿಯುತ್ತಿದೆ. ಭೀಮಾನದಿ ನೀರು ಬ್ಯಾರೇಜ್ ಮೇಲೆ ಹರಿಯುತ್ತಿದೆ. ಚಡಚಣ ತಾಲೂಕಿನ ಹತ್ತಳ್ಳಿ ಗ್ರಾಮದ ಯುವಕ ರಮೇಶ ದುಂಡಪ್ಪ ಬಸರಗಿ (25) ನದಿ ಪಾಲಾದ ಯುವಕ.
![](https://risingkannada.com/wp-content/uploads/2020/08/BIDAR-EDUCATION-1-1024x460.jpg)
ನೆರೆಯ ಮಹಾರಾಷ್ಟ್ರದಿಂದ ವಾಪಸ್ ಹತ್ತಳ್ಳಿಗೆ ಬೈಕ್ನಲ್ಲಿ ವಾಪಸ್ ಬರುತ್ತಿದ್ದ. ಜಲಾವೃತವಾದ ಉಮರಾಣಿ – ಲವಗಿ ಬ್ಯಾರೇಜ್ ಬೈಕ್ ಸಮೇತ ದಾಟಲು ಯುವಕ ಯತ್ನಸಿದ್ಧಾನೆ. ರಭಸವಾಗಿ ನೀರು ಹರಿಯುತ್ತಿದ್ದ ಕಾರಣ ಯುವಕ ರಮೇಶ ಕೊಚ್ಚಿಕೊಂಡು ಹೋಗಿದ್ದಾನೆ.
ಯುವಕ ಕೊಚ್ಚಿ ಹೋಗುತ್ತಿರುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ಯುವಕನ ಶವಕ್ಕಾಗಿ ಶೋಧ ಮಾಡಲಾಗುತ್ತಿದೆ. ಚಡಚಣ ಪೊಲೀಸ್ ಠಾಣಾ ವ್ಯಾಪ್ತಿ ಪ್ರಕರಣ ದಾಖಲಾಗಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?