ಬೆಂಗಳೂರು
ಬೆಂಗಳೂರಿನ ಈ ಮಾಲ್ ನಲ್ಲಿ ಪಾರ್ಕಿಂಗ್ ದರ ಕೇಳಿದ್ರೆ ಶಾಕ್ ಆಗ್ತೀರಾ..!

ಬೆಂಗಳೂರಿನಲ್ಲಿ ಕೇವಲ ವಾಹನ ದಟ್ಟಣೆ ಸಮಸ್ಯೆ ಮಾತ್ರವೇ ಇಲ್ಲ. ಜೊತೆಗೆ ವಾಹನ ನಿಲುಗಡೆ ಸಮಸ್ಯೆಯೂ ಇದೆ. ವಾಹನಗಳನ್ನು ನಿಲ್ಲಿಸಲು ಸರಿಯಾದ ಜಾಗ ಸಿಗದೇ ಎಲ್ಲೆಂದರಲ್ಲಿ ವಾಹನ ನಿಲ್ಲಿಸುವುದು ಸಹ ಬೆಂಗಳೂರಿನ ವಾಹನ ದಟ್ಟಣೆಗೆ ಕಾರಣವಾಗಿದೆ. ಇನ್ನು ಶಾಪಿಂಗ್ ಗೆ ಹೋದರಂತು ವಾಹನ ಎಲ್ಲಿ ನಿಲ್ಲಿಸಬೇಕು ಅನ್ನೋದೇ ಗೊತ್ತಾಗಲ್ಲ. ಯಾಕಂದ್ರೆ, ಮಾಲ್ ಗಳಲ್ಲಿ ಪಾರ್ಕಿಂಗ್ ಕೂಡ ಕೆಲವೊಮ್ಮೆ ಫುಲ್ ಆಗಿರುತ್ತೆ. ಹೀಗಾಗಿ ಮಾಲ್ ಗಳು ಸಹ ಪಾರ್ಕಿಂಗ್ ಶುಲ್ಕ ವಿಧಿಸುತ್ತವೆ.
ಸಾಮಾನ್ಯವಾಗಿ ಮಾಲ್ ಗಳಲ್ಲಿ ದ್ವಿಚಕ್ರ ವಾಹನಗಳಿಗೆ ಪ್ರತಿ ಗಂಟೆಗೆ 20 ರಿಂದ 30 ರೂಪಾಯಿ, ಕಾರುಗಳಿಗೆ 40 ರಿಂದ 50 ರೂಪಾಯಿ ಶುಲ್ಕ ವಿಧಿಸುತ್ತಾರೆ. ಆದರೆ ಬೆಂಗಳೂರಿನ ಅತ್ಯಂತ ಪ್ರತಿಷ್ಠಿತ ಮಾಲ್ ಯುಬಿ ಸಿಟಿ ಟವರ್ ನಲ್ಲಿ ಶುಲ್ಕ ಕೇಳಿದರೆ ತಲೆ ತಿರುಗಿ ಬೀಳುತ್ತೀರಿ. ಯಾಕಂದ್ರೆ ಯುಬಿ ಸಿಟಿ ಮಾಲ್ ನಲ್ಲಿ ಪ್ರೀಮಿಯಂ ಪಾರ್ಕಿಂಗ್ ದರ ಪ್ರತಿ ಗಂಟೆಗೆ 1 ಸಾವಿರ ರೂಪಾಯಿ. ಯೆಸ್.
ನೀವು ಓದುತ್ತಿರುವುದು ನಿಜ. ಯುಬಿ ಸಿಟಿ ಮಾಲ್ ನಲ್ಲಿ ಪ್ರತಿ ಗಂಟೆಗೆ 1 ಸಾವಿರ ರೂಪಾಯಿ ಶುಲ್ಕ ವಿಧಿಸಲಾಗುತ್ತಿದೆ. ಹೀಗೆ ಪ್ರತಿ ಗಂಟೆಗೆ ಪಾರ್ಕಿಂಗ್ ಶುಲ್ಕ 1 ಸಾವಿರ ರೂಪಾಯಿ ಫೋಟೋ ಈಗ ಇಂಟರ್ ನೆಟ್ ನಲ್ಲಿ ಫುಲ್ ವೈರಲ್ ಆಗಿದೆ. 2008ರಲ್ಲಿ ಆರಂಭವಾದ ಯುಬಿ ಸಿಟಿ ಮಾಲ್ ಭಾರತದ ಮೊಟ್ಟ ಮೊದಲ ಐಷಾರಾಮಿ ಮಾಲ್ ಎಂಬ ಖ್ಯಾತಿ ಗಳಿಸಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?