Featured
ಯಡಿಯೂರಪ್ಪ ಪಾಲಿಟಿಕ್ಸ್ ತಗೊಂಡು ನಾನೇನ್ ಮಾಡಲಿ : ಅಧಿಕಾರ ಶಾಶ್ವತ ಅಲ್ಲ ಎಂದ ಡಿಕೆಶಿ..!
ಬೆಂಗಳೂರು : ಕನಕಪುರದಿಂದ ಮೇಡಿಕಲ್ ಕಾಲೇಜ್ಅನ್ನ ಚಿಕ್ಕಬಳ್ಳಾಪುರಕ್ಕೆ ಶಿಫ್ಟ್ ಮಾಡ್ತಿರೋದಕ್ಕೆ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾತ್ನಾಡಿದ ಡಿಕೆ ಶಿವಕುಮಾರ್, ಕನಕಪುರಕ್ಕೆ ಮೆಡಿಕಲ್ ಕಾಲೇಜ್ ಇಲ್ಲ. ಕೇವಲ ಜಿಲ್ಲಾ ಕೇಂದ್ರ ಗಳಿಗೆ ಮಾತ್ರ ಮೆಡಿಕಲ್ ಕಾಲೇಜು ಎಂಬ ಯಡಿಯೂರಪ್ಪ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ರು.
ಯಡಿಯೂರಪ್ಪ ಅವರ ಪಾಲಿಟಿಕ್ಸ್ ತಗೊಂಡು ನಾನೇನ್ ಮಾಡಲಿ. ಇದು ನಮ್ಮ ಹಿಂದಿನ ಸರ್ಕಾರ ತೆಗೆದುಕೊಂಡ ನಿರ್ಧಾರ. ಅಧಿಕಾರ ಶಾಶ್ವತ ಅಲ್ಲ. ರಾಜಕೀಯ ದ್ವೇಷ ಮಾಡೋದಾದ್ರೆ ಮಾಡಲಿ. ಯಡಿಯೂರಪ್ಪ, ಈ ಮೂಲಕ ನಾನು ದ್ವೇಷದ ರಾಜಕಾರಣ ಮಾಡ್ತೀನಿ ಅನ್ನೋ ಸಂದೇಶವನ್ನ ರವಾನೆ ಮಾಡಿದ್ದಾರೆಂದು ಡಿಕೆಶಿ ಹೇಳಿದ್ರು.
ಸುಧಾಕರ ಅವರದ್ದು ತಪ್ಪು ಅಂತಾ ನಾನು ಹೇಳಲ್ಲ. ಎಲ್ಲಿಗಾದ್ರೂ ಕೊಡಲಿ. ಆದ್ರೆ ನಮ್ಮ ಸರ್ಕಾರ ಕನಕಪುರಕ್ಕೆ ಮೆಡಿಕಲ್ ಕಾಲೇಜ್ ಅಪ್ರೂವ್ ಮಾಡಿತ್ತು. ಬೇಕಿದ್ರೆ, ಅಲ್ಲಿಗೆ ಕಾಲೇಜು ಕೊಡಲಿ. ಅವರು ನನ್ನ ಜೊತೆ ಮಾತಾಡಲಿ. ನಾನು ಕೂಡ ಅವ್ರಿಗೆ ಪತ್ರ ಬರೆಯುತ್ತೇನೆ. ಕನಕಪುರಕ್ಕೆ ಕಾಲೇಜು ನೀಡೋ ವಿಚಾರದಿಂದ ಅವರು ಹಿಂದೆ ಹೋಗೋದು ಬೇಡ. ಯಾರನ್ನೋ ಹೊಸದಾಗಿ ಪಕ್ಷಕ್ಕೆ ಸೇರಿಸಿಕೊಂಡೇ ಅನ್ನೋ ಕಾರಣಕ್ಕೆ ಇಲ್ಲಿನ ಕಾಲೇಜು ತೆಗೆದು ಇಲ್ಲಿಗೆ ಕೊಟ್ಟೆ ಅನ್ನೋದು ಮುಖ್ಯ ಅಲ್ಲ ಎಂದು ಚೇಡಿಸಿದ್ರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?