ಕ್ರೀಡೆ
ಯಪ್ಪಾ,, ಜಿದ್ದಿಗೆ ಬಿದ್ದ ಕುದುರೆ ಎತ್ತಿನಾಟ
ಎತ್ತುಗಳ ಶರವೇಗಕ್ಕೆ ಕುದುರೆ ಕಂಗಾಲು
ಬೆಳಗಾವಿ : ಹಳ್ಳಿಗಳಲ್ಲಿ ಜಾತ್ರೆಗಳ ಸಂದರ್ಭದಲ್ಲಿ ನಡೆಯುವ ಎತ್ತು ಮತ್ತು ಕುದುರೆ ಗಾಡಿಗಳ ಓಟ ನೋಡಲು ಎರಡು ಕಣ್ಣು ಸಾಲದು. ಕರ್ನಾಟಕ ಮಹಾರಾಷ್ಟ್ರ ಗಡಿ ಭಾಗದಲ್ಲಿ ಖಾಲಿ ಗಾಡಿ ಓಡಿಸುವ ಸ್ಪರ್ಧೆ ನಿರಂತರವಾಗಿರುತ್ತೆ, ದೇಸಿಯ ಕ್ರೀಡೆಗಳ ಜೀವಂತಕ್ಕೆ ಕರ್ನಾಟಕ ಮಹಾರಾಷ್ಟ್ರವೇ ನಿದರ್ಶನ .ಈ ಆಟ ಕಂಡುಬಂದಿದ್ದು ಬೆಳಗಾವಿಯ ಬಿರೇಶ್ವರ ದೇವರ ಜಾತ್ರೆಯಲ್ಲಿ ಯಪ್ಪಾ ಹೇಗಿತ್ತು ಗೊತ್ತ ಆ ಕುದುರೆ ಮತ್ತು ಎತ್ತಿನಾಟ ಈ ಸ್ಟೋರಿ ನೋಡಿ.
ಖಾಲಿ ಎತ್ತಿನ ಬಂಡಿಗೆ ಹೆಗಲು ಕೊಟ್ಟು ಜಿದ್ದಿಗೆ ಬಿದ್ದಿರುವ ಕುದುರೆಗಳು. ನಾವೇನೂ ಕಮ್ಮಿ ಅಂತಾ ಎತ್ತುಗಳು ಕೂಡ ಓಟಕ್ಕಿಳಿದಿದ್ದವು. ಎತ್ತುಗಳಿಗೆ ಮದುವಣಗಿತ್ತಿಯಂತೆ ಸಿಂಗಾರಗೊಳಿಸಿ ಅಖಾಡಕ್ಕಿಳಿಸಲಾಗಿತ್ತು, ಕುದುರೆ ಮತ್ತು ಎತ್ತುಗಳು ಧೂಳೆಬ್ಬಿಸಿ ಓಟಕ್ಕಿಳಿಯುವುದನ್ನ ನೋಡಿದ ಪ್ರೇಕ್ಷಕರು ಶಿಳ್ಳೆ , ಚಪ್ಪಾಳೆ ಮೂಲಕ ಕುಣಿದು ಕುಪ್ಪಳಿಸುತ್ತಾ ಪ್ರೋತ್ಸಾಹ ನೀಡಿ ಎತ್ತು ಕುದುರುಗಳ ಓಟಕ್ಕೆ ವೇಗ ಹೆಚ್ಚಿಸಿದರು.
ಈ ಎಲ್ಲ ದೃಶ್ಯ ಕಂಡು ಬಂದಿದ್ದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ. ಯಸ್ ಹೌದು ಪ್ರತಿ ವರ್ಷದಂತೆ ಈ ಬಾರಿಯೂ ಗ್ರಾಮದಲ್ಲಿ ಅದ್ದೂರಿಯಾಗಿ ಬಿರೇಶ್ವರ ದೇವರ ಜಾತ್ರೆಯನ್ನ ಆಚರಣೆ ಮಾಡಲಾಗುತ್ತಿದೆ. ಇನ್ನೂ ಜಾತ್ರೆಯ ಕೊನೆಯ ದಿನದಂದು ಎತ್ತುಗಳು ಮತ್ತು ಕುದುರೆಗಳ ಖಾಲಿ ಗಾಡಿ ಓಡಿಸುವ ಸ್ಪರ್ಧೆಯನ್ನ ಆಯೋಜನೆ ಮಾಡಲಾಗಿದೆ ,. ಗೆದ್ದ ಎತ್ತುಗಳಿಗೆ ಹನ್ನೊಂದು ಲಕ್ಷ ರೂಪಾಯಿ ಬಹುಮಾನ ನೀಡಿದ್ರೇ ಇತ್ತ ಗೆದ್ದ ಕುದುರೆಗೂ ಹತ್ತು ಲಕ್ಷ ಬಹುಮಾನ ನೀಡುತ್ತಾರೆ. ಬೆಳಗ್ಗೆ ಹನ್ನೊಂದು ಗಂಟೆಗೆ ಮೊದಲು ಎತ್ತುಗಳು ಓಟ ಶುರು ಮಾಡುತ್ತೆ .
ಸುಮಾರು ಇಪ್ಪತ್ತೈದು ಜೋಡಿಗಳು ಏಕಕಾಲಕ್ಕೆ ಓಟ ಆರಂಭಿಸುತ್ತವೆ. ಯಕ್ಸಂಬಾ ಗ್ರಾಮದ ಹೊರ ವಲಯದ ಮಲ್ಲಿಕವಾಡ ರಸ್ತೆ ಮಾರ್ಗವಾಗಿ ನನದಿ ಕ್ರಾಸ್ ವರೆಗೂ ನಾಲ್ಕು ಕಿಮೀ ಓಟ ಆಯೋಜನೆ ಮಾಡಲಾಗಿತ್ತು. ಈ ಓಟದ ಸ್ಪರ್ಧೆಯಲ್ಲಿ ಮಹಾರಾಷ್ಟ್ರದ ಕೊಲ್ಲಾಪುರ, ಸಾಂಗಲಿ, ಮಿರಜ್ ಸೇರಿದಂತೆ ರಾಜ್ಯದ ನಾನಾ ಕಡೆಗಳಿಂದ ಎತ್ತುಗಳ ಸಮೇತ ಆಗಮಿಸಿ ಸ್ಪರ್ಧೆಯಲ್ಲಿ ಭಾಗವಹಿಸಿದರು. ಎತ್ತಿನ ಸ್ಪರ್ಧೆಯಲ್ಲಿ ಮಹಾರಾಷ್ಟ್ರ ಮೂಲದ ಛಬ್ಬಿ ಎಂಬುವವರು ಮೊದಲ ಸ್ಥಾನ ಪಡೆದು ಹನ್ನೊಂದು ಲಕ್ಷ ಬಹುಮಾನ ಗೆದ್ದು ಸಂಭ್ರಮಿಸಿದರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?