Featured
ಡಿಕೆಶಿ ಪದ ಗ್ರಹಣಕ್ಕೆ ಕಾರ್ಯಕರ್ತರ ಹುರುಪು- ಡಿ.ಕೆ.ಬಾಸ್ಗಾಗಿ ಯುವ ನಾಯಕ ದಾವುದ್ ಪಟ್ಟಣ ಶ್ರಮ
ದುರ್ಗೇಶ್ ಮಂಗಿಹಾಳ, ಯಾದಗಿರಿ:
ಕಾಂಗ್ರೆಸ್ ಮತ್ತೊಮ್ಮೆ ಪುಟಿದೇಳುವ ಕಾಲ ಕೂಡಿ ಬಂದಿದೆ. ಡಿ.ಕೆ ಶಿವಕುಮಾರ ಕೆಪಿಸಿಸಿ ನೂತನ ಸಾರಥಿಯಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸುತ್ತಿರುವ ಹಿನ್ನೆಲೆ, ರಾಜ್ಯಾದ್ಯಂತ ಕಾರ್ಯಕರ್ತರು ಪಕ್ಷದ ಮುಖಂಡರು, ಅಭಿಮಾನಿಗಳು, ಜನರು ಕೂತಹಲದಿಂದ ಕಾಯುತ್ತಿದ್ದಾರೆ. ಡಿಕೆಶಿ ಪದ ಗ್ರಹಣ ಹಿನ್ನೆಲೆಯಲ್ಲಿ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ವಿವಿಧೆಡೆ ಕಾರ್ಯಕರ್ತರಿಗೆ, ಜನರಿಗೆ ಮಾಹಿತಿ ನೀಡಿ ಲಾಕ್ ಡೌನ್ ಹಿನ್ನೆಲೆ ಆಯಾ ಪಂಚಾಯತ್, ದೇವಸ್ಥಾನ ಇತರ ಜಾಗದಲ್ಲಿ ಟಿವಿ ಪರದೆ ಮೇಲೆ “ಪ್ರತಿಜ್ಞಾ” ಕಾರ್ಯಕ್ರಮ ವಿಕ್ಷೀಸಲು ಅನುವು ಮಾಡಿಕೊಡುತ್ತಿದ್ದಾರೆ. ಅದ್ರಲ್ಲಿ ಸುರಪುರದ ಯುವ ನಾಯಕ ದಾವುದ್ ಪಟ್ಟಾಣ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಜನ ಮೆಚ್ಚುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ವಹಿಸುವ ಕೆಲಸವನ್ನು ಚಾಚು ತಪ್ಪದೆ ಮಾಡಿ ರಾಜ್ಯಮಟ್ಟದ ನಾಯಕರಿಂದ ಉತ್ತಮ ಕಾರ್ಯಕರ್ತ ಎನ್ನಿಸಿಕೊಂಡಿದ್ದಾರೆ. ಇನ್ನೂ ಕಾರ್ಯಕ್ರಮದಲ್ಲಿ ಮಾಜಿ ಉಪಾ ಸಭಾಪತಿ ಡೇವಿಡ್ ಸಿಮೋನ್, ಭೀಮಣ್ಣ, ರಮೇಶ್ ದೋರಿ, ಗಂಗಾಧರ ನಾಯಕ ಹಾಗ ಇತರ ಕಾರ್ಯಕರ್ತರು ಇದ್ದರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?