Connect with us

ರಾಜ್ಯ

ಮಹಿಳಾ ದಿನದ ವಿಶೇಷ – “ಗಡಿಜಿಲ್ಲೆಯ ಯುವ ಸಾಧಕಿ”

ಚಾಮರಾಜನಗರ: ರಾಷ್ಟ್ರದಲ್ಲಿ ಅದೆಷ್ಟೋ ಅನುಭವಿ ಸಾಹಿತಿಗಳು, ಕವಿಗಳು ಅವಿರತ ಶ್ರಮ ಹಾಕಿದರೂ ಇನ್ನೂ ಅವರು ಬೆಳಕಿಗೆ ಬಂದಿಲ್ಲ, ಆದ್ರೆ ಇಲ್ಲೊಬ್ಬ ಯುವತಿ ತನ್ನ ಹರೆಯದ ವಯಸ್ಸಿನಲ್ಲೇ ತಾನು ಬರೆದ ಕಿರು ಹೊತ್ತಗೆ ಪ್ರಕಟಗೊಳ್ಳುತ್ತಿದ್ದಂತೆಯೇ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪದಕಕ್ಕೆ ಭಾಜನಾಗಿದ್ದಾರೆ.. ಅಷ್ಟಕ್ಕೂ ಯಾರು ಆ ಯುವತಿ? ಆಕೆ ಬರೆದ ಆ ಪುಸ್ತಕವಾದ್ರೂ ಯಾವುದು ಅಂತೀರಾ? ಈ ಸ್ಟೋರಿ ನೋಡಿ.

ಸದಾ ತನ್ನಷ್ಟಕ್ಕೆ ತಾನೇ ಓದುವುದು, ಬರೆಯುವುದರಲ್ಲಿ ಮಗ್ನವಾಗಿರುವ ಈ ಯುವತಿಯ ಹೆಸರು ಅಮೃತಾ.. ಗಡಿ ಜಿಲ್ಲೆ ಚಾಮರಾಜನಗರದ ದೊಡ್ಡಮೋಳೆ ಎಂಬ ಕುಗ್ರಾಮದ ಮಂಜುಳಾ-ಗಣೇಶ್ ದಂಪತಿಗಳ ಪುತ್ರಿಯಾದ ಅಮೃತಾ ಹಿಂದುಳಿದ ವರ್ಗದ ಬಡ ಕುಟುಂಬದಲ್ಲಿ ಜನಿಸಿದ ಯುವ ಪ್ರತಿಭೆ. ಈಕೆ ರಾಷ್ಟ್ರಕ್ಕೆ ಕೊರೊನಾ ಮಹಾಮಾರಿ ಆವರಿಸಿದಾಗ ಉಂಟಾದ ಲಾಕ್ ಡೌನ್ ಸಂದರ್ಭದಲ್ಲಿ ಮನೆಯಲ್ಲಿ ಕುಳಿತಿದ್ದಾಗ, ಈಕೆ ತನ್ನ ನೆಚ್ಚಿನ ಪ್ರಾಥಮಿಕ ಶಾಲೆ ಶಿಕ್ಷಕಿ ಸುಷ್ಮಾಅವರು ನೀಡಿದ ಪ್ರೀತಿ, ಸಲುಗೆ, ಪ್ರೋತ್ಸಾಹ, ಮಾರ್ಗದರ್ಶನದ ಬಗ್ಗೆ ಸ್ಮರಣೆ ಮಾಡುತ್ತಾ ಬರೆದ ಅಕ್ಷರಗಳು ಕವನಗಳಾಗಿ ರೂಪುಗೊಂಡಿತ್ತು, “ನನ್ನ ಗುರುವೆಂಬ ಸುಗಮ” ಎಂಬ ಶೀರ್ಷಿಕೆಯಡಿ ಈಕೆ ಬರೆದ ಗುರುವಿನ ಸನಿಹ ನನ್ನ ಧ್ಯಾನ ಎಂಬ ಅಡಿ ಬರಹದಲ್ಲಿ ಮೂಡಿ ಬಂದಿರುವ 67 ಮುಟಗಳ ಕೃತಿಯಲ್ಲಿ 16 ಕವಿತೆಗಳನ್ನು ಒಳಗೊಂಡಿದ್ದು, ರಾಜಸ್ಥಾನದ ಸಂವನ್ ಪಬ್ಲಿಕೇಷನ್ ಪುಸ್ತಕವನ್ನು ಪ್ರಕಟಿಸಿ ಹೊರ ತಂದಿದೆ. ಅಮೃತಾ ಬರೆದ ಈ ಪುಸ್ತಕ ಈಗಾಗಲೇ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೆ ಸೇರುವ ಮೂಲಕ ಗಡಿಜಿಲ್ಲೆಯ ಯುವತಿ ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಭಾಜನರಾಗಿದ್ದು, ತನ್ನ ಈ ಸಾಧನೆಗೆ ಪ್ರೇರಕರಾದ ತನ್ನ ನೆಚ್ಚಿನ ಶಿಕ್ಷಕಿ ಸುಷ್ಮಾ ಅವರನ್ನು ಪ್ರೀತಿಯಿಂದ ಸ್ಮರಿಸಿಕೊಂಡಿದ್ದಾರೆ.

ಸದ್ಯ ಚಾಮರಾಜನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಕಾಂ ಪದವಿ ವ್ಯಾಸಂಗ ಮಾಡುತ್ತಿರುವ ಅಮೃತಾ, ಈಗ ಕಾಲೇಜಿನ ಅಚ್ಚುಮೆಚ್ಚಿನ ವಿದ್ಯಾರ್ಥಿನಿ ಎನಿಸಿಕೊಂಡಿದ್ದಾರೆ, ಕಾಲೇಜಿನಲ್ಲಿ ಸಹಪಾಟಿಗಳು ಈಕೆಯ ಪುಸ್ತಕವನ್ನು ಓದಿ ಮೆಚ್ಚಿಕೊಂಡಿದ್ದು, ಅಮೃತಾಗೆ ಒಲಿದು ಬಂದಿರುವ ಇಂಡಿಯಾ ಬುಕ್ ಆಫ್ ರೆಕಾರ್ಡ್ ನೀಡಿರುವ ಪದಕವನ್ನು ಕಂಡು ಅಭಿನಂದನೆ ಸಲ್ಲಿಸಿದ್ದಾರೆ..
ಒಟ್ಟಾರೆ ಸಾಧನೆ ಎಂಬುದು ಯಾರ ಮನೆಯ ಸ್ವತ್ತೂ ಅಲ್ಲ, ಸಾಧನೆಗೆ ಜಾತಿ, ಧರ್ಮ, ಮೇಲು, ಕೀಳು, ಬಡವ ಬಲ್ಲಿದನೆಂಬ ಬೇಧ ಭಾವ ಅಡ್ಡ ಬರುವುದಿಲ್ಲ, ವಿದ್ಯೆಯ ಕಡೆಗೆ ಗಮನವಿಟ್ಟರೆ ಯಾರು ಬೇಕಾದರೂ ಎಂತಹ ಸಾಧನೆಯನ್ನು ಬೆರಕಾದರೂ ಮಾಡಬಹುದು ಎಂಬುದಕ್ಕೆ ಗಡಿಜಿಲ್ಲೆಯ ಕುಗ್ರಾಮ ಜಿ.ಅಮೃತಾ ಸ್ಪಷ್ಟ ನಿದರ್ಶನವಾಗಿದ್ದು, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಫ್ರೀಡಂ ಟಿವಿ ಬಳಗದಿಂದ ಪ್ರೀತಿಯ ಅಭಿಮಾನಗಳನ್ನು ಸಲ್ಲಿಸುತ್ತಿದ್ದೇವೆ‌.

ಬೆಂಗಳೂರು5 months ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು6 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್6 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು6 months ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು6 months ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು6 months ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು6 months ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು6 months ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು6 months ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು6 months ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured3 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured5 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured3 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured1 year ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ5 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured4 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured5 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured5 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured9 months ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured1 year ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ