Featured
ಆಂಗ್ಲರ ವಿರುದ್ಧ ವಿಂಡೀಸ್ಗೆ ಭರ್ಜರಿ ಗೆಲುವು: ಅರ್ಧಶತಕ ಸಿಡಿಸಿ ಮಿಂಚಿದ ಜರ್ಮೈನ್ ಬ್ಲ್ಯಾಕ್ವುಡ್

ರೈಸಿಂಗ್ ಕನ್ನಡ:
ನ್ಯೂಸ್ ಡೆಸ್ಕ್:
ಜರ್ಮೈನ್ ಬ್ಲ್ಯಾಕ್ವುಡ್ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ವೆಸ್ಟ್ಇಂಡೀಸ್ ತಂಡ ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ನಾಲ್ಕು ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ.
ರೋಸ್ ಬೌಲ್ ಅಂಗಳದಲ್ಲಿ ನಡೆದ ಐದನೆ ಮತ್ತು ಅಂತಿಮ ದಿನದಾಟದ ಪಂದ್ಯದಲ್ಲಿ 200 ರನ್ಗಳ ಟಾರ್ಗೆಟ್ ಪಡೆದ ವೆಸ್ಟ್ ಇಂಡೀಸ್ ತಂಡ ಜೆರ್ಮೈನ್ ಬ್ಲ್ಯಾಕ್ವುಡ್ ಅವರ 95 ರನ್ಗಳ ನೆರವಿನಿಂದ ಗೆಲುವಿನ ನಗೆ ಬೀರಿತು.

200 ರನ್ಗಳ ಸುಲಭ ಟಾರ್ಗೆಟ್ ಪಡೆದ ವಿಂಡೀಸ್ಗೆ ಗೆಲುವು ಅಷ್ಟು ಸುಲಭವಾಗಿರಲಿಲ್ಲ. ಆರಂಭಿಕರಾದ ಕ್ರೇಗ್ ಬ್ರಾಥ್ವೈಟ್ 4,ಜಾನ್ಕ್ಯಾಂಪ್ಬೆಲ್ ಅಜೇಯ 8, ಶಾಯ್ ಹೋಪ್ 9, ಶಾಮ್ರಾ ಬ್ರೂಕ್ಸ್ 0, ಮಧ್ಯಮ ಕ್ರಮಾಂಕದಲ್ಲಿ ರೋಸ್ಟನ್ ಚೆಸ್ 37, ಬ್ಲ್ಯಾಕ್ವುಡ್ 95,ಡೌರಿಚ್ 20,ಜಾಸನ್ ಹೋಲ್ಡರ್ 14 ರನ್ಗಳಿಸಿ ಗೆಲುವಿನ ದಡ ಸೇರಿಸಿದರು.
ವಿಂಡೀಸ್ 64.2 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 200 ರನ್ಗಳಿಸಿ ಸರಣಿಯಲ್ಲಿ 1-0 ಮುನ್ನಡೆ ಪಡೆಯಿತು. ಎರಡು ಇನ್ನಿಂಗ್ಸ್ಗಳಿಂದ 9 ವಿಕೆಟ್ ಪಡೆದ ಶಾನನ್ ಗಾಬ್ರಿಲ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಕೊರೊನಾ ನಂತರ ಜಾಸನ್ ಹೋಲ್ಡರ್ ಪಡೆಗೆ ಇದು ಮೊದಲ ಗೆಲುವಾಗಿದೆ.
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್
204 ಆಲೌಟ್
ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್
318 ಆಲೌಟ್
ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್
313 ಆಲೌಟ್
ವೆಸ್ಟ್ಇಂಡೀಸ್ ಎರಡನೇ ಇನ್ನಿಂಗ್ಸ್
200/6

You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?