Featured
ಪ್ರತಿದಿನ ಸ್ನಾನ ಮಾಡುವುದರಿಂದ ಏನೆಲ್ಲಾ ಪ್ರಯೋಜನೆಗಳು..?
![](https://risingkannada.com/wp-content/uploads/2019/10/bathing.jpg)
ರೈಸಿಂಗ್ ಕನ್ನಡ :- ಪ್ರತಿದಿನ ಸ್ನಾನ ಮಾಡುವುದು ಸ್ವಚ್ಛತೆಗೆ ಸಂಬಂಧಿಸಿದೆ. ಆದರೆ ಸಂಕ್ರಾಮಿಕ ಮತ್ತು ವರ್ಕ್ ಫ್ರಂ ಹೋಂ ನಿಂದಾಗಿ, ಪ್ರತಿದಿನ ಸ್ನಾನ ಮಾಡುವುದರ ಪ್ರಾಮುಖ್ಯತೆಯನ್ನು ಚರ್ಚಿಸಲಾಗುತ್ತಿದೆ. ಕೆಲವು ವ್ಯಕ್ತಿಗಳು ಕಡಿಮೆ ಸ್ನಾನ ಮಾಡುವುದರ ಪ್ರಾಮುಖ್ಯತೆಯನ್ನು ವಿವರಿಸಿದ್ದಾರೆ. ಆದರೆ ನಿಯಮಿತವಾಗಿ ಸ್ನಾನ ಮಾಡುವುದನ್ನು ತಪ್ಪಿಸುವುದು ನಿಜಕ್ಕೂ ಒಳ್ಳೆಯದೇ ?
ಸ್ನಾನ ಮಾಡೋದ್ರಿಂದ ರಕ್ತ ಪರಿಚಲನೆಗೆ ಉತ್ತಮ
ಕಡಿಮೆ ಸ್ನಾನ ಮಾಡುವುದು ವ್ಯಕ್ತಿಯ ಆಯ್ಕೆಯಾಗಿದ್ದು , ಇದನ್ನು ನಿಜಕ್ಕೂ ಶಿಫಾರಸು ಮಾಡಲಾಗುವುದಿಲ್ಲ. ಸ್ನಾನದ ಪ್ರಯೋಜನಗಳನ್ನು ವಿವರಿಸುವ ಅಗತ್ಯವಿಲ್ಲ , ಇದು ಎಲ್ಲರಿಗೂ ಅಗತ್ಯ. ಕೊಳೆ ಮತ್ತು ಮೃತ ಚರ್ಮಕೋಶ ತೆಗೆಯುವುದರ ಹೊರತಾಗಿ , ಇದು ಚರ್ಮಕ್ಕೆ ಪುನಶ್ಚೇತನ ನೀಡುತ್ತದೆ. ರಕ್ತ ಪರಿಚಲನೆಗೆ ನೆರವಾಗುತ್ತದೆ.
ಒತ್ತಡದ ವಿರುದ್ಧ ಹೋರಾಡುತ್ತದೆ, ಸ್ನಾಯುವಿನ ಒತ್ತಡ ನಿವಾರಿಸುತ್ತದೆ. ಒಟ್ಟಾರೆಯಾಗಿ ನಿರ್ದಿಷ್ಟ ರೋಗಗಳಿಂದ ವೇಗವಾಗಿ ಚೇತರಿಸಿಕೊಳ್ಳಲು ನೆರವಾಗುತ್ತದೆ.
ಪ್ರತಿದಿನ ಸ್ನಾನ ಮಾಡುವುದು ಮುಖ್ಯ
ಮನೆಯಿಂದಲೇ ಕೆಲಸ ಮಾಡುವಾಗ, ಪ್ರತಿದಿನ ಸ್ನಾನ ಮಾಡುವುದು ಅಷ್ಟೇನೂ ಅಗತ್ಯವಿಲ್ಲ ಎನಿಸಬಹುದು, ಆದರೆ ಮನೆಯಲ್ಲಿರುವಾಗಲೂ , ಚರ್ಮದ ಮೇಲೆ ಬ್ಯಾಕ್ಟೀರಿಯಾದ ಆಕ್ರಮಣದಿಂದ ಮುಕ್ತವಾಗಿರುವುದಿಲ್ಲ ಎನ್ನುತ್ತಾರೆ. ಪ್ರತಿದಿನ ಸ್ನಾನ ಮಾಡುವುದು ಮುಖ್ಯ. ಇದು ಒಳ್ಳೆಯ ಬ್ಯಾಕ್ಟೀರಿಯಾ ಮತ್ತು ಇತರ ಸೂಕ್ಮಾಣುಗಳ ಸಮತೋಲನವನ್ನು ನಿರ್ವಹಿಸಲು ಅಗತ್ಯ. ಹಾಸಿಗೆಯಲ್ಲಿ ರೋಗಿಗಳು ಮತ್ತು ನಿರ್ದಿಷ್ಟ ರೋಗ ಹೊಂದಿರುವ ವ್ಯಕ್ತಿಗಳಿಗೆ ಪ್ರತಿದಿನ ಸ್ನಾನ ಮಾಡುವುದನ್ನು ಶಿಫಾರಸು ಮಾಡುವುದಿಲ್ಲ, ಆದರೆ ಅವರು ತಮ್ಮನ್ನು ಮತ್ತು ತಮ್ಮ ಸುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಡುವಂತೆ ಸಲಹೆ ನೀಡಾಲಾಗುತ್ತದೆ.
ಒಣಚರ್ಮ ಅಥವಾ ಸೂಕ್ಷ್ಮ ಚರ್ಮವಿರುವ ವ್ಯಕ್ತಿಗಳು ಪಾಲಿಸಬೇಕಾದ ನಿಯಮಗಳು :-
ಒಣಚರ್ಮ ಅಥವಾ ಸೂಕ್ಷ್ಮ ಚರ್ಮವನ್ನು ಸ್ವಚ್ಛಗೊಳಿಸುತ್ತಿದ್ದರೆ, ಅದು ಅಪಾಯವಾಗಬಹುದು. ಇಂತಹ ಸಂದರ್ಭದಲ್ಲಿ ಏನು ಮಾಡಬಹುದು ? ಸ್ನಾನದ ನಂತರ ಸೂಕ್ತವಾದ ಮಾಯಿಶ್ಚರೈಸರ್ ಬಳಸುವುದು ಉತ್ತಮ , ಕೆಲವೊಮ್ಮೆ ನೀರು ಮತ್ತು ಸೋಪಿನ ಬಳಕೆಯೂ ಇದಕ್ಕೆ ಕಾರಣವಾಗಬಹುದು. ಆದ್ದರಿಂದ, ಆಗಾಗ್ಗೆ ಸ್ನಾನ ಮಾಡುವ ಯೋಚನೆ ಇದ್ದರೆ, ವೈದ್ಯರ ಸಲಹೆ ಪಡೆಯುವುದು ಉತ್ತಮ. ಜೊತೆಗೆ ಚಳಿಗಾಲದಲ್ಲಿ, ವ್ಯಕ್ತಿ ಸ್ನಾನ ಮಾಡಲು ಆಲಸ್ಯದಿಂದ ಮಾಡುವುದಿಲ್ಲ, ಆದರೆ ಸ್ನಾನ ಮಾಡುವುದರಿಂದ ಬ್ಯಾಕ್ಟೀರಿಯಾ ಮತ್ತು ದುರ್ವಾಸನೆಗಳು ದೂರವಾಗುತ್ತವೆ.
ಸ್ನಾನ ಯಾವಾಗ ಮಾಡಬೇಕು …?
ಸ್ನಾನ ಎಂದರೆ ಕೇವಲ ನಿಮ್ಮ ಚರ್ಮವನ್ನು ತೊಳೆಯುವುದಷ್ಟೇ ಅಲ್ಲ, ನಿಮ್ಮ ಚರ್ಮದ ಮೇಲೆ ಕೊಳೆ ಮತ್ತು ಮೃತಚರ್ಮವನ್ನು ತೆಗೆಯಲು ಮೆಲುವಾಗಿ ಉಜ್ಜಬೇಕು. ನೀವು ಸೂಕ್ತವಾದ ಕ್ಲೀನಿಂಗ್ ಏಜೆಂಟ್ ಬಗ್ಗೆ ತಿಳಿಯಲು ವೈಧ್ಯರನ್ನು ಸಂಪರ್ಕಿಸಬಹುದು. ಸ್ನಾನ ಮಾಡಿದ ಕೂಡಲೇ ಉತ್ತಮ ಗುಣಮಟ್ಟದ ಬಾಡಿ ಆಯಿಲ್ ಅಥವಾ ಮಾಯಿಶ್ಚರೈಸರ್ ಬಳಸುವುದು ಉತ್ತಮ.
- ಸ್ನಾನ ಮಾಡಿದ ನಂತರ ಕೆಲಸ ಮಾಡುವ ಬದಲಾಗಿ, ಕನಿಷ್ಟ 30 ನಿಮಿಷ ಸಕ್ರಿಯವಾಗಿರುವುದು ಉತ್ತಮ.
- ಮೂರು ದಿನಗಳಿಗೊಮ್ಮೆ ತಲೆಗೆ ಸ್ನಾನ ಮಾಡಿ. ಅತಿಯಾಗಿ ಬಿಸಿ ನೀರಿನಿಂದ ಸ್ನಾನ ಮಾಡಬೇಡಿ. ಅದು ನಿಮ್ಮ ಚರ್ಮವನ್ನು ಶಿಷ್ಠವಾಗಿರುತ್ತದೆ.
- ಹೆಚ್ಚು ಸಮಯ ಸ್ನಾನ ಮಾಡುವ ಬದಲಾಗಿ ಮತ್ತು ಚರ್ಮವನ್ನು ಹೆಚ್ಚು ತೇವಗೊಳಿಸುವ ಬದಲಾಗಿ, ಸೂಕ್ಷ್ಮ ಚರ್ಮವಿರುವವರು ಬೇಗ ಸ್ನಾನ ಮಾಡಬೇಕು.
- ಶಿಲೀಂದ್ರ ಸೋಂಕುಗಳಿಗೆ ಒಳಗಾಗುವ ವ್ಯಕ್ತಿಗಳು ಸ್ವಲ್ಪ ಸಮಯ ಸ್ನಾನ ಮಾಡಿ ನಂತರ ಒಳ್ಳೆಯ ಗುಣಮಟ್ಟದ ಮಾಯಿಶ್ಚರೈಸರ್ ಹಚ್ಚಬೇಕು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?