ಬೆಂಗಳೂರು
ರಾಮೇಶ್ವರಂ ಕೆಫೆ ಟಾರ್ಗೆಟ್ ಆಗಿದ್ಯಾಕೆ? ಹೊಟೇಲ್ ಹಿಸ್ಟರಿ ಗೊತ್ತಾ?
![](https://risingkannada.com/wp-content/uploads/2024/03/cafe1.jpg)
ಬೆಂಗಳೂರಿನ ಕುಂದಲಹಳ್ಳಿ ಸಮೀಪವಿರುವ ರಾಮೇಶ್ವರಂ ಕೆಫೆಯಲ್ಲಿ ಬ್ಲಾಸ್ಟ್ ಆಗಿದೆ.. ಬ್ಲಾಸ್ಟ್ ಸಂಭವಿಸಿರುವ ಈ ಹೊಟೇಲ್ ಇತಿಹಾಸ ಗೊತ್ತಿದೆಯಾ..? ದಕ್ಷಿಣ ಭಾರತದ ತಿಂಡಿಗಳ ಮೂಲಕ ಜನಪ್ರಿಯವಾಗಿರುವ ರಾಮೇಶ್ವರಂ ಕೆಫೆ ತ್ವರಿತ ಸೇವೆಯನ್ನು ನೀಡುವ ರೆಸ್ಟೋರೆಂಟ್ ಆಗಿದೆ. ಈ ಕೆಫೆಯಲ್ಲಿ ನಾವು ಯಾವ ಸಮಯದಲ್ಲಿ ಹೋದರೂ ಜನಜಂಗುಳಿ ಕಾಣಬಹುದು. ಆದರೆ ಈ ಒಂದು ಕೆಫೆಯು ಮಾಸಿಕವಾಗಿ ಅಂದರೆ ಒಂದು ತಿಂಗಳಿನಲ್ಲಿಯೇ ಬರೋಬ್ಬರಿ 4.5 ಕೋಟಿ ರೂಪಾಯಿ ಗಳಿಕೆಯನ್ನು ಹೊಂದಿದೆ.
![](https://risingkannada.com/wp-content/uploads/2024/03/cafe-1024x1024.jpg)
ರಾಮೇಶ್ವರಂ ಕೆಫೆ ಹುಟ್ಟಿದ್ದು ಹೇಗೆ?
ರಾಮೇಶ್ವರಂ ಕೆಫೆಯನ್ನು ದಿವ್ಯಾ ರಾಘವೇಂದ್ರ ರಾವ್ ಮತ್ತು ರಾಘವೇಂದ್ರ ರಾವ್ ಸಂಸ್ಥಾಪನೆ ಮಾಡಿದ್ದಾರೆ. ಇಬ್ಬರೂ ಕೂಡಾ ತಮ್ಮ ಈ ವ್ಯಾಪಾರಕ್ಕೆ ಹೆಚ್ಚಿನ ಹೆಗ್ಗಳಿಕೆಯನ್ನು ಪಡೆದಿದ್ದಾರೆ. ಭಾರತದ ಮಾಜಿ ರಾಷ್ಟ್ರಪತಿ ಡಾ. ಎಪಿಜಿ ಅಬ್ದುಲ್ ಕಲಾಂ ಜನನ ಸ್ಥಳವನ್ನು ತಮ್ಮ ರೆಸ್ಟೋರೆಂಟ್‌ನ ಹೆಸರನ್ನಾಗಿ ಇಬ್ಬರು ಇರಿಸಿಕೊಂಡಿದ್ದಾರೆ. ಎಲ್ಲ ತಿಂಡಿಗಳನ್ನು ಹೊಟೇಲ್‌ನಲ್ಲಿ ತಯಾರಿಸಲಾಗುತ್ತದೆ.
ಟಾರ್ಗೆಟ್ ಆಯ್ತಾ ರಾಮೇಶ್ವರಂ ಕೆಫೆ?
ರಾಮೇಶ್ವರಂ ಕೆಫೆಯು ಎಲ್ಲಾ ರೀತಿಯ ಜನರಿಗೆ ಮುಂಜಾನೆ 5 ರಿಂದ ಮಧ್ಯರಾತ್ರಿ 1 ಗಂಟೆಯವರೆಗೆ ಸೇವೆ ಸಲ್ಲಿಸುವ ಬೆಂಗಳೂರಿನಲ್ಲಿರುವ ಏಕೈಕ ರೆಸ್ಟೋರೆಂಟ್ ಇದಾಗಿದೆ.ದಿವ್ಯಾ ಮತ್ತು ರಾಘವೇಂದ್ರ ರಾವ್ ಸ್ಥಾಪಿಸಿರುವ ರಾಮೇಶ್ವರಂ ಕೆಫೆ ಈಗ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಹರಡಿದೆ.ಎಲ್ಲಾ ಬ್ರ್ಯಾಂಚ್ಗಳಲ್ಲೂ ಉತ್ತಮ ಬ್ಯುಸಿನೆಸ್ ಕಾಣುತ್ತಿದೆ. ಹೀಗಾಗಿಯೇ ಹೊಟೇಲ್ ಉದ್ಯಮವನ್ನ ಹಾಳು ಮಾಡೋಕೆ ಅಂತ ಬ್ಲ್ಯಾಸ್ಟ್ ಪ್ಲ್ಯಾನ್ ಮಾಡಲಾಗಿದೆಯಾ..? ಗೊತ್ತಿಲ್ಲ. ಪೂರ್ಣ ತನಿಖೆ ಮುಗಿದ ನಂತ್ರವಷ್ಟೆ ಸತ್ಯ ಹೊರಬರಬೇಕಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?