Connect with us

Featured

ಭಗವದ್ಗೀತೆಯಂತಹ ಧರ್ಮಗ್ರಂಥಗಳನ್ನು ಏಕೆ‌ ಓದಬೇಕು..?

ಅಜ್ಜ ಪ್ರತಿದಿನ ಮುಂಜಾನೆ ಎದ್ದು ಭಗವದ್ಗೀತೆ ಪಠಣ ಮಾಡುತ್ತಿದ್ದರು. ಅದೇ ಸಮಯಕ್ಕೆ ಅವರ ಮೊಮ್ಮಗನೂ ಎದ್ದು ಕುಳಿತು ತನ್ನ ಶಾಲಾ ಪುಸ್ತಕಗಳನ್ನು ಓದುತ್ತಿದ್ದ. ಒಂದು ದಿನ ಮೊಮ್ಮಗ ಅಜ್ಜನನ್ನು ಅನುಕರಿಸಿ ತಾನೂ ಭಗವದ್ಗೀತೆಯನ್ನು ಓದಲು ಪ್ರಯತ್ನಿಸಿದ. ಅರ್ಥವಾಗಲಿಲ್ಲ. ಕೆಲವು ದಿನಗಳ ನಂತರ ಮೊಮ್ಮಗ “ಅಜ್ಜ ಭಗವದ್ಗೀತೆ ಪುಸ್ತಕವನ್ನು ನಾನೂ ಓದಲು ಪ್ರಯತ್ನಿಸಿದೆ. ಆದರೆ ನನಗೆ ಏನೂ ಅರ್ಥವಾಗಲಿಲ್ಲ. ಅರ್ಥವಾದ ಅಲ್ಪಸ್ವಲ್ಪ ಕೂಡ ನೆನಪಿನಲಿ ಉಳಿಯುವುದಿಲ್ಲ” ಎಂದ. ಅಜ್ಜ “ಅರ್ಥವಾದರೂ, ಅರ್ಥವಾಗದಿದ್ದರೂ, ನೆನಪಿನಲ್ಲುಳಿದರೂ, ನೆನಪಿನಲ್ಲುಳಿಯದಿದ್ದರೂ ಓದಲೇಬೇಕಾದ ಗ್ರಂಥಗಳು ಇವು” ಎಂದರು. ಮೊಮ್ಮಗ “ಅರ್ಥವಾಗದ, ನೆನಪಿನಲ್ಲಿ ಉಳಿಯದ ಗ್ರಂಥವನ್ನು ಓದುವುದರಿಂದ ಏನು ಪ್ರಯೋಜನ? ” ಎಂದ. 

ಅಜ್ಜ ಸ್ವಲ್ಪ ಹೊತ್ತು ಯೋಚನೆ ಮಾಡಿ “ನಿನ್ನೆ ಪ್ರಶ್ನೆಗೆ ಉತ್ತರ ಕೊಡುತ್ತೇನೆ. ಅದಕ್ಕೆ ಮೊದಲು ನಿನಗೊಂದು ಕೆಲಸವಿದೆ. ಅಡುಗೆ ಮನೆಯಲ್ಲಿರುವ ಜೋಳಿಗೆಯಲ್ಲಿ ಇದ್ದಿಲು ತುಂಬಿದೆ. ಅದನ್ನು ಖಾಲಿ ಮಾಡಿಕೋ. ಹತ್ತಿರದಲ್ಲಿ ನದಿ ಹರಿಯುತ್ತಿದೆ. ನದಿಯಿಂದ ಜೋಳಿಗೆ ತುಂಬ ನೀರು ತುಂಬಿಸಿಕೊಂಡು ಬಾ” ಎಂದರು. ಮೊಮ್ಮಗ ಜೋಳಿಗೆಯನ್ನು ಖಾಲಿ ಮಾಡಿದ. ಇದ್ದಿಲು ಹಾಕಿಟ್ಟಿದ್ದುದರಿಂದ ಜೋಳಿಗೆ ಕಪ್ಪು ಕಪ್ಪಾಗಿತ್ತು. ಆತ ಅದನ್ನು ತೆಗೆದುಕೊಂಡು ನದಿಗೆ ಹೋದ. ಜೋಳಿಗೆಯನ್ನು ನೀರಿನಲ್ಲಿ ಅದ್ದಿ ನೀರು ತುಂಬಿಸಿಕೊಂಡು ಮನೆ ಕಡೆ ಧಾವಿಸಿದ. 

Advertisement

ಜೋಳಿಗೆ ಬಟ್ಟೆಯದಾದ್ದರಿಂದ ಮನೆಗೆ ಬರುವಷ್ಟರಲ್ಲಿ ನೀರೆಲ್ಲ ಸೋರಿಹೋಗಿತ್ತು. ಮೊಮ್ಮಗ ಅಜ್ಜನಿಗೆ “ಜೋಳಿಗೆಯಲ್ಲಿ ನೀರು ತರುವುದು ಕಷ್ಟ. ಇಲಿಗೆ ಬರುವಷ್ಟರಲ್ಲಿ ಎಲ್ಲ ಸೋರಿಹೋಗುತ್ತದೆ. ಬಿಂದಿಗೆಯಲ್ಲಿ ನೀರು ತರಲೇ?” ಎಂದು ಕೇಳಿದ. ಅಜ್ಜ “ನನಗೆ ಬಿಂದಿಗೆಯ ನೀರು ಬೇಡ. ಜೋಳಿಗೆಯ ನೀರೇ ಬೇಕು” ಎಂದರು. ಮೊಮ್ಮಗ ಮತ್ತೊಮ್ಮೆ ನದಿಗೆ ಧಾವಿಸಿ, ಜೋಳಿಗೆಯಲ್ಲಿ ನೀರು ತುಂಬಿಸಿಕೊಂಡು ಮನೆಗೆ  ಬರುವಷ್ಟರಲ್ಲಿ ಮತ್ತೆ ನೀರೆಲ್ಲ ಸೋರಿಹೋಗಿತ್ತು. ಅಜ್ಜ “ಮತ್ತೆ ಹೋಗು. ಜೋಳಿಗೆಯಲ್ಲೇ ನೀರು ತೆಗೆದುಕೊಂಡು ಬಾ” ಎಂದರು. ಮೊಮ್ಮಗ ಮತ್ತೆ ನದಿಗೆ ಓಡಿದ. ಅಪರೂಪದ ಮೊಮ್ಮಗ, ಅಜ್ಜನ ಮಾತನ್ನು ಚಾಚೂ ತಪ್ಪದೆ, ಪ್ರತಿಭಟಿಸದೇ ಪಾಲಿಸುತ್ತಿದ್ದ. ಹೀಗೆ ಹತ್ತು ಸಾರಿ ನಡೆಯಿತು. ಆದರೆ ಜೋಳಿಗೆಯಲ್ಲಿ ನೀರು ತರಲಾಗಲಿಲ್ಲ. 

ಮೊಮ್ಮಗ “ಅಜ್ಜಾ ! ನಾನು ಹತ್ತಲ್ಲ ನೂರು ಸಾರಿ ಪ್ರಯತ್ನಿಸಿದರೂ ಜೋಳಿಗೆಯಲ್ಲಿ ನೀರು ತರಲಾಗುವುದಿಲ್ಲ. ಮನೆಗೆ ಬರುವಷ್ಟರಲ್ಲಿ ಎಲ್ಲವೂ ಸೋರಿ ಹೋಗುತ್ತದೆ” ಎಂದ. “ಮಗೂ, ನೀರು ಸೋರಿ ಹೋಗುತ್ತದೆಂಬುದು ನಿಜ. ಚಿಂತೆಯಿಲ್ಲ. ಆದರೆ ಜೋಳಿಗೆ ಈಗ ಹೇಗಾಗಿದೆ ನೋಡು!” ಎಂದರು. ಮೊದಲನೆಯ ಸಾರಿ ನದಿಗೆ ಹೋದಾಗ ಜೋಳಿಗೆ ಇದ್ದಿಲಿನ ಕಪ್ಪು ಬಣ್ಣದಲ್ಲಿತ್ತು. ಈಗ ಹತ್ತು ಸಾರಿ ನದಿಗೆ ಹೋಗಿ ನೀರು ತುಂಬಿಸಿಕೊಂಡು ಬರುವಷ್ಟರಲ್ಲಿ ಕಪ್ಪು ಜೋಳಿಗೆ ಬಿಳಿಯ ಜೋಳಿಗೆಯಾಗಿತ್ತು ! ಅಂದರೆ ಕೊಳೆಯನ್ನೆಲ್ಲ ಕಳೆದುಕೊಂಡು ಶುಭ್ರವಾಗಿತ್ತು! ಆಗ ಅಜ್ಜ “ಭಗವದ್ಗೀತೆಯನ್ನು ಓದಿದಾಗ ಅರ್ಥವಾಗದಿರಬಹುದು, ಓದಿದ್ದು ನೆನಪಿನಲ್ಲಿ ಉಳಿಯದಿರಬಹುದು, ಆದರೆ ಓದುವಾತನ ಬುದ್ಧಿ ಶುದ್ದಿಯಾಗುತ್ತದೆ. ಅದಕ್ಕಾಗಿ ಭಗವದ್ಗೀತೆಯನ್ನು ಓದಬೇಕು” ಎಂದರಂತೆ.

ತಾತ್ಪರ್ಯ: ಎಲ್ಲಾ ಧರ್ಮಗ್ರಂಥಗಳೂ ಜೀವನನ್ನು ದೇವನನ್ನಾಗಿ ಮಾಡುವ ಸೂತ್ರಗಳು. ಸದ್ಯಕ್ಕೆ ಅವು ಅರ್ಥವಾಗದಿದ್ದರೂ ಸರಿಯಾದ ಸಮಯದಲ್ಲಿ ಅವು ನಮ್ಮನ್ನು ನಮ್ಮ ಗಂತವ್ಯಕ್ಕೆ ಕರೆದೊಯ್ಯುತ್ತವೆ.

ಶುಭಂಭವತು

ಬೆಂಗಳೂರು4 months ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು4 months ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು4 months ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು4 months ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು4 months ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು4 months ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು4 months ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು4 months ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured3 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured5 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured3 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured1 year ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ5 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured4 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured5 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured5 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured7 months ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured1 year ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ