Featured
ಬೆಂಗಳೂರಲ್ಲಿ ಟೈಟ್ ಮಾಡಲು ಸರ್ಕಾರ ಪ್ಲಾನ್- ಭಾನುವಾರದ ಜೊತೆಗೆ ಶನಿವಾರವೂ ಲಾಕ್ಡೌನ್..?
![](https://risingkannada.com/wp-content/uploads/2020/07/social-distancing-4981236_640.jpg)
ರೈಸಿಂಗ್ ಕನ್ನಡ:
ಬೆಂಗಳೂರು:
ಕರ್ನಾಟಕದಲ್ಲಿ ಕೊರೊನಾ ರಣಕೇಕೆಗೆ ಜನರು ಬೆಚ್ಚಿಬಿದ್ದಿದ್ದಾರೆ. ದಿನದಿಂದ ದಿನಕ್ಕೆ ಕೋವಿಡ್19 ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಸರಕಾರ ಕೂಡ ಕೊರೊನಾ ತಡೆಯಲು ಇನ್ನಿಲ್ಲದ ಸರ್ಕಸ್ ಮಾಡ್ತಿದೆ. ಮಿತಿಮೀರಿದ ಕೊರೊನಾ ಹರಡುವಿಕೆಯನ್ನು ತಡೆಯಲು ಹಲವು ಕಡೆ ಸ್ವಯಂ ಪ್ರೇರಿತ ಲಾಕ್ ಡೌನ್ ಕೂಡ ಮಾಡಲಾಗುತ್ತಿದೆ. ಸರ್ಕಾರ ಪ್ರತೀ ಭಾನುವಾರ ಸಂಪೂರ್ಣ ಲಾಕ್ ಡೌನ್ ಮಾಡಲು ಆದೇಶಿಸಿದೆ. ಇಷ್ಟಾದ್ರೂ ಕೊರೊನಾ ಕಡಿಮೆ ಆಗುತ್ತಿಲ್ಲ. ಹೀಗಾಗಿ ಶನಿವಾರವೂ ಲಾಕ್ ಡೌನ್ ಮಾಡುವ ಯೋಚನೆಯನ್ನು ರಾಜ್ಯ ಸರ್ಕಾರ ಮಾಡ್ತಿದೆ.
ಸದ್ಯ ರಾಜ್ಯಸರ್ಕಾರ ಭಾನುವಾರ ಕಂಪ್ಲೀಟ್ ಲಾಕ್ ಡೌನ್ ಹೊರತು ಪಡಿಸಿ, ಪ್ರತಿದಿನ ರಾತ್ರಿ 8ರಿಂದ ಬೆಳಗ್ಗೆ 5ರ ತನಕ ಕರ್ಫ್ಯೂ ಜಾರಿ ಮಾಡಿದೆ. ಭಾನುವಾರದ ಲಾಕ್ಡೌನ್ಗೆ ಜನ ಬೆಂಬಲವೂ ಸಿಕ್ಕಿತ್ತು. ಹೀಗಾಗಿ ವೀಕೆಂಡ್ನಲ್ಲಿ 2 ದಿನ ಅಂದರೆ ಭಾನುವಾರದ ಜೊತೆಗೆ ಶನಿವಾರವೂ ಲಾಕ್ಡೌನ್ ಮಾಡುವ ಚರ್ಚೆ ನಡೆಯುತ್ತಿದೆ. ಬೆಂಗಳೂರಿನ ಕೆಲ ಶಾಸಕರು ಮತ್ತು ಸಚಿವರು ಈ ಬಗ್ಗೆ ಒಲವು ತೋರಿದ್ದಾರೆ ಎಂದು ಹೇಳಲಾಗುತ್ತಿದೆ.
ಸಿಎಂ ಜೊತೆ ನಡೆದ ಸಭೆಯಲ್ಲಿ ಪ್ರಮುಖವಾಘಿ ಡಿಸಿಎಂ ಅಶ್ವಥ್ ನಾರಾಯಣ್, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಭಾನುವಾರದ ಲಾಕ್ ಡೌನ್ ಸಾಕಗುವುದಿಲ್ಲ ಅನ್ನುವುದನ್ನು ಪ್ರತಿಪಾದಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಮುಂದಿನ 3 ವಾರಗಳ ಕಾಲ ಶನಿವಾರವೂ ಲಾಕ್ಡೌನ್ ಮಾಡಲು ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
You may like
ಕರ್ನಾಟಕದಲ್ಲಿ ಒಂದೇ ದಿನ 21,390 ಕೊರೋನಾ.! ಲಾಕ್ಡೌನ್ ಫಿಕ್ಸಾ.?
ಸಿಎಂ ಬೊಮ್ಮಾಯಿ ಸೇರಿ ಸಂಪುಟದ ಐವರಿಗೆ ಕೊರೋನಾ ಶಾಕ್..!
ದೆಹಲಿ ಮಾದರಿ ಲಾಕ್ ಆಗುತ್ತಾ ಬೆಂಗಳೂರು.? ಯಾಕೆ..? ಏನಾಗ್ತಿದೆ ಬೆಂಗಳೂರಲ್ಲಿ.?
ಸಿಎಂ ಬಸವರಾಜ್ ಬೊಮ್ಮಾಯಿಗೆ ಕೊರೋನಾ ಪಾಸಿಟಿವ್
3 ತಿಂಗಳ ಬಳಿಕ ರಾಜ್ಯದಲ್ಲಿ ಕೊರೋನಾ ಭಾರೀ ಏರಿಕೆ : ಇದೇನಾ 3ನೇ ಅಲೆ.?
ಕೋವಿಡ್-19 ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದ ಸಿ.ಎಂ. ಯಡಿಯೂರಪ್ಪ