Featured
ಬೋರ್‌ವೆಲ್ ಆಫ್ ಮಾಡಿದರೂ ಉಕ್ಕಿ ಬರುತ್ತಿರುವ ನೀರು: ವಿಜಯಪುರದ ಬಸವನಬಾಗೇವಾಡಿಯಲ್ಲಿ ಘಟನೆ
ರೈಸಿಂಗ್ ಕನ್ನಡ:
ವಿಜಯಪುರ:
ಬೋರ್‌ವೆಲ್ ನಿಂದ ತಂತಾನೆ ಉಕ್ಕಿ ಬರುತ್ತಿರುವ ವಿಚಿತ್ರ ಘಟನೆ ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ನರಸಲಗಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ವಿರುಪಾಕ್ಷಯ್ಯ ಮಠ ಎಂಬುವರ ಜಮೀನಿನ ಬೋರ್ವೆಲ್ನಿಂದ ತಂತಾನೆ ಅಂತರ್ಜಲ ಚಿಮ್ಮುತ್ತಿದೆ.
ವಿದ್ಯುತ್ ಮೋಟಾರ್ ಚಾಲ್ತಿ ಇಲ್ಲದೇ ಬೋರವೆಲ್ ಪೈಪ್ ನಿಂದ ಹೊರ ಚಿಮ್ಮುತ್ತಿರುವ ನೀರು. ಬೋರ್‌ವೆಲ್ ವಿರುಪಾಕ್ಷಯ್ಯ ಕೆಲವು ವರ್ಷಗಳ ಹಿಂದೆ 500 ಪೂಟ್ ನಷ್ಟು ಆಳಕ್ಕೆ ಕೊರೆಸಿದ್ದರು.
ಇದಿಗ ಕಳೆದ ಮೂರು ದಿನಗಳಿಂದ ತಂತಾನೆ ಅಂತರ್ಜಲ ಉಕ್ಕಿ ಬರುತ್ತಿದೆ. ಈ ಅಂತರ್ಜಲ ಕಂಡು ನರಸಲಗಿ ಗ್ರಾಮಸ್ಥರು ಅಚ್ಚರಿ ವ್ಯಕ್ತಪಡಿಸಿದ್ದು, ಸತತ ಮಳೆಯಿಂದ ಈ ರೀತಿ ಅಂತರ್ಜಲ ಉಕ್ಕಿ ಹೊರ ಬರುತ್ತಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಒಂದೆಡೆ ಅಚ್ಚರಿ ಮತ್ತೊಂದೆಡೆ ಬೆಳೆ ಹಾನಿಯಾಗುವ ಆತಂಕ ಎದುರಾಗಿದೆ.ಅಂತರ್ಜಲ ಹರಿದು ಮೆಕ್ಕೆಜೋಳ ಜಮೀನಿಗೆ ನುಗ್ಗುತ್ತಿರುವ ಬಗ್ಗೆ ಆತಂಕ ಎದುರಾಗಿದೆ. ನಿರಂತರವಾಗಿ ಅಂತರ್ಜಲ ನೀರು ಹರಿದು ಬರುತ್ತಿರುವುದರಿಂದ ಮೆಕ್ಕೆಜೋಳ ಬೆಳೆ ಕೊಚ್ಚಿ ಹೋಗುವ ಭೀತಿಯಲ್ಲಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?