Connect with us

Featured

ಹಳೆಯ ಟ್ಯಾಂಕ್ ಕೆಡವಲು, ಹೊಸ ಟ್ಯಾಂಕ್ ಮಂಜೂರು ಮಾಡಿಸಬೇಕೆಂಬ ಸಬೂಬು- ಏನಾದರು ಅನಾಹುತ ಸಂಭವಿಸಿದರೆ ಹೊಣೆ ಯಾರು..?

ರೈಸಿಂಗ್​ ಕನ್ನಡ:

ಕುಮಾರ್​, ಕೋಲಾರ

ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಮರಗಲ್ ಗ್ರಾಮದಲ್ಲಿ ಒಂದು  ತಿಂಗಳ ಹಿಂದೆ ಹಳೆಯದಾಗಿದ್ದ ಓವರ್ ಹೆಡ್ ಟ್ಯಾಂಕ್ ಕುಸಿದು ಓರ್ವ ವೃದ್ದ ಸಾವನ್ನಪ್ಪಿದ್ದ. ಆದರೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕಿದ್ದ ಕೋಲಾರ ಜಿಲ್ಲಾಡಳಿತ ಮತ್ತದೆ ನಿರ್ಲಕ್ಷ್ಯದ ದಾರಿ ಹಿಡಿದಿರುವಂತಿದೆ.  ಜಿಲ್ಲೆಯ ಹಲವೆಡೆ ಅದೆಷ್ಟೊ ಓವರ್ ಹೆಡ್ ಟ್ಯಾಂಕ್ ಗಳು ಕುಸಿಯುವ ಹಂತದಲ್ಲಿದ್ದರು, ತೆರವು ಮಾಡುವ ಗೋಜಿಗೆ ಜಿಲ್ಲಾಡಳಿತ ಕೈಹಾಕಿಲ್ಲ. ಇಂತಹದ್ದೆ ಟ್ಯಾಂಕ್ ಗಳು ಗ್ರಾಮೀಣ ಭಾಗದಲ್ಲಿದ್ದು ಕುಸಿಯುವ ಭೀತಿ ಸಾರ್ವಜನಿಕರಿಗೆ ಶುರುವಾಗಿದೆ.

Advertisement

ಹೀಗೆ ಪಾಳು ಬಿದ್ದಿರುವ  ಓವರ್ ಹೆಡ್ ಟ್ಯಾಂಕ್ ತೆರವು ಮಾಡದೆ  ಸ್ಥಳೀಯರ ಜೀವಗಳ ಜೊತೆಗೆ ಅಧಿಕಾರಿಗಳು ಚೆಲ್ಲಾಟ ಆಡ್ತಿದ್ದಾರೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಲಕ್ಷ್ಮಿಪುರ ಗ್ರಾಮದಲ್ಲಿ ಸುಮಾರು 40 ವರ್ಷ ಹಳೆಯಾದಾದ ಓವರ್ ಹೆಡ್ ಟ್ಯಾಂಕ್  ಕುಸಿಯುವ ಹಂತದಲ್ಲಿದ್ದು ಅಧಿಕಾರಿಗಳಿಗೆ ಗ್ರಾಮಸ್ಥರು ಇದರ ಬಗ್ಗೆ ಹಲವು ಬಾರಿ ತೆರವುಗೊಳಿಸಲು ಮನವಿ ಮಾಡಿದರೂ, ಯಾರು ಕೇಳೊರಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಟ್ಯಾಂಕ್ ಪಕ್ಕದಲ್ಲಿಯೆ ಖಾಸಗಿ ಶಾಲೆ ಹಾಗೂ  ವಾಸಿಸುವ ಮನೆಗಳಿದ್ದು ಇವತ್ತೋ ನಾಳೆ ಬೀಳುವ ಹಂತದಲ್ಲಿರೊ ಟ್ಯಾಂಕ್ ಕೆಳಗೆ ರೈತರು ತಮ್ಮ ತೋಟಗಳಿಗೆ ಭಯಭೀತಿಯಿಂದಲೇ ಹೋಗಬೇಕಿದೆ.  ಕೋಲಾರ ತಾಲೂಕಿನ ಮುದುವತ್ತಿ ಗ್ರಾಮ ಪಂಚಾಯಿತಿ ಮುಂದೆಯೇ ಹಳೆಯದಾದ ಓವರ್ ಹೆಡ್ ಟ್ಯಾಂಕ್ ಕುಸಿಯುವ ಹಂತದಲ್ಲಿದ್ದು, ಇದನ್ನು ತೆರವು ಮಾಡದೆ ಸ್ತಳೀಯ ಪಂಚಾಯಿತಿ ಅಧಿಕಾರಿಗಳು ನೋಡಿಯೂ ನೋಡದಂತಿದ್ದಾರೆ. ಇತ್ತೀಚೆಗೆ ಮುದುವತ್ತಿ ಗ್ರಾಮ ಪಂಚಾಯಿತಿ ನೂತನ ಕಟ್ಟಡ ಲೋಕಾರ್ಪಣೆ ವೇಳೆ ಉಸ್ತುವಾರಿ ಸಚಿವ ಎಚ್ ನಾಗೇಶ್ ಅವರಿಗೂ, ಮುದುವತ್ತಿ ಗ್ರಾಮಸ್ತರು ದೂರು ನೀಡಿದ್ದರು.  ಸಚಿವರು ತೆರವು ಮಾಡಿಸುವ ಭರವಸೆ ನೀಡಿದ್ದು ಅದಿನ್ನೂ ಮಾತಾಗಿಯೆ ಉಳಿದಿದೆ. ಈ ಕುರಿತು ಮಾತಾನಾಡಿರುವ ಸ್ಥಳೀಯ ವಾಟರ್ ಮೆನ್ ನಾರಾಯಣಸ್ವಾಮಿ ಎನ್ನುವವರು, ಅಧಿಕಾರಿಗಳು, ಹಾಗು ರಾಜಕೀಯ ನಾಯಕರಿಗೆ ಹಿಡಿಶಾಪಾ ಹಾಕಿದ್ದು, ಕೂಡಲೇ ವಾಟರ್ ಟ್ಯಾಂಕ್ ತೆರವು ಮಾಡದೇ ಹೋದಲ್ಲಿ ಮುಂದಾಗೊ ಅನಾಹುತಕ್ಕೆ ಅಧಿಕಾರಿಗಳೆ ನೇರ ಹೊಣೆ ಎಂದು ಎಚ್ಚರಿಕೆ ನೀಡಿದ್ದಾರೆ.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಉಪವಿಭಾಗ, ಗ್ರಾಮೀಣ ಪ್ರದೇಶಗಳಲ್ಲಿ  ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಮಾಡಿ, ಜನರಿಗೆ ನೀರು ಸರಬರಾಜು ಮಾಡುವ ಜವಾಬ್ದಾರಿಯನ್ನು ಹೊಂದಿದೆ. ಆದರೆ ಹಳೆಯದಾದ ಟ್ಯಾಂಕ್​​ಗಳನ್ನ ಡೆಮಾಲಿಷನ್ ಮಾಡಲು ಇಲಾಖೆಯ ಅನುಮತಿ ಬೇಕಿದೆ. ಈ ಕುರಿತು ಸ್ಥಳೀಯ ಪಂಚಾಯಿತಿ ಅಧಿಕಾರಿಗಳು ಮಾಹಿತಿ ನೀಡಿದರೂ, ನೀಡದೆ ಇದ್ದರೂ ಮುತುವರ್ಜಿ ವಹಿಸಿ ಕಾರ್ಯನಿರ್ವಹಿಸುವ ಜವಾಬ್ದಾರಿ ಇಲಾಖೆಯ ಮೇಲಿದೆ. ಆದರೆ ಕೇವಲ ಹೊಸ ಟ್ಯಾಂಕ್ ಕಟ್ಟಿಸಲು ಯೋಜನೆ ಮಂಜೂರಾಗಿಲ್ಲ ಎನ್ನುವ ಸಬೂಬನ್ನ ಗ್ರಾಮೀಣ ಕುಡಿಯುವ ನೀರು ಇಲಾಖೆ ನೀಡಿ ಜನರ ಜೀವಗಳ ಚೆಲ್ಲಾಟ ಆಡಲು ಮುಂದಾಗಿದೆ ಎಂಬುದು ಸ್ಥಳೀಯರ ಆರೋಪ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಮುದುವತ್ತಿ ಗ್ರಾಮ ಪಂಚಾಯಿತಿ ಪಿಡಿಒ ಮಹೇಶ್  ಟ್ಯಾಂಕ್ ತೆರವು ಮಾಡುವ ಜವಾಬ್ದಾರಿ ಗ್ರಾಮೀಣ ಕುಡಿಯುವ ನೀರು, ನೈರ್ಮಲ್ಯ ಇಲಾಖೆಗೆ ಸೇರುತ್ತದೆ. ಹೊಸ ಟ್ಯಾಂಕ್ ನೀಡಬೇಕೆಂದರು ಇಲಾಖೆಯೆ ಮಂಜೂರು ಮಾಡಬೇಕು. ಹಾಗಾಗಿ  ಕೂಡಲೇ ಇಲಾಖೆಗೆ ಪತ್ರ ಬರೆದು ಓವರ್ ಹೆಡ್ ಟ್ಯಾಂಕ್ ತೆರವು ಮಾಡುವ ವಿಚಾರವನ್ನ ಗಮನಕ್ಕೆ ತರುವುದಾಗಿ  ಭರವಸೆ ನೀಡಿದ್ದಾರೆ.

ಬೆಂಗಳೂರು4 months ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು4 months ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು4 months ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು4 months ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು4 months ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು4 months ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು4 months ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು4 months ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured3 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured5 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured3 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured1 year ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ5 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured4 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured5 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured5 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured7 months ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured1 year ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ