Featured
ಪೆಟ್ರೋಲ್ ಪಂಪ್ನಲ್ಲಿ ಬಂತು ನೀರು- ವಾಹನ ಮಾಲೀಕರು ಕಂಗಾಲು..!
ರೈಸಿಂಗ್ ಕನ್ನಡ:
ದುರ್ಗೇಶ್ ಮಂಗಿಹಾಳ, ಯಾದಗಿರಿ:
ಕರ್ನಾಟಕದಲ್ಲಿ ಅತ್ತ ಕೊರೊನಾ, ಇತ್ತ ಮಹಾಮಳೆ. ಇದೆಲ್ಲದರ ಜೊತೆಗೆ ಲಾಕ್ಡೌನ್ ಬೇರೆ. ಹೀಗಾಗಿ ಮನೆಯಲ್ಲೇ ಲಾಕ್ ಆಗುವ ಸ್ಥಿತಿ ಬಂದಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲೂ ಮಳೆ ಜೋರಾಗಿ ಸುರಿಯುತ್ತಿದೆ. ಯಾದಗಿರಿ, ಕಲಬುರ್ಗಿ ಮತ್ತು ಬೀದರ್ನಲ್ಲಿ ಸುರಿಯುತ್ತಿರುವ ಮಳೆಗೆ ಜಲಾಶಯಗಳು ಭರ್ತಿಯಾಗಿವೆ.
ಮಳೆ ನೀರಿಗೆ ಡ್ಯಾಂಗಳು ಭರ್ತಿಯಾಗುವುದು ಸಹಜ. ನದಿ, ಹಳ್ಳಗಳು ಉಕ್ಕಿಹರಿಯುವುದು ಕೂಡ ನೋಡಿದ್ದೇವೆ. ಆದರೆ ಯಾದಗಿರಿಯಲ್ಲಿ ಸುರಿದ ಮಳೆಗೆ ಪೆಟ್ರೋಲ್ ಪಂಪ್ ತುಂಬಿ ಹೋಗಿದೆ. ಇದೇನಪ್ಪಾ ಅಂತೀರಾ..? ನಿಜ…ಜೋರು ಮಳೆಯಿಂದಾಗಿ ಯಾದಗಿರಿ ನಗರದ ಪೆಟ್ರೋಲ್ ಬಂಕ್ ಒಂದರಲ್ಲಿ ಯಡವಟ್ಟಾಗಿದೆ. ಮಳೆ ನೀರು ನೆಲದ ಕೆಳಗೆ ಪೆಟ್ರೋಲ್ ಸಂಗ್ರಹಿಸಿದ್ದ ಟ್ಯಾಂಕ್ ಒಳಕ್ಕೆ ನುಗ್ಗಿದೆ.
ಪೆಟ್ರೋಲ್ ಜೊತೆಗೆ ನೀರು ಮಿಕ್ಸ್ ಆಗಿದ್ದನ್ನು ಯಾರೂ ಗಮನಿಸಿಲ್ಲ. ಲಾಕ್ಡೌನ್ ನಡುವೆ ತಮ್ಮ ವಾಹನಗಳಿಗೆ ಪೆಟ್ರೋಲ್ ತುಂಬಿಸಿಕೊಳ್ಳೋಣ ಅಂತ ಜನರು ಮುಗಿಬಿದ್ರು. 50ಕ್ಕೂ ಹೆಚ್ಚು ಬೈಕ್ಗಳಿಗೆ ಪೆಟ್ರೋಲ್ ಜೊತೆಗೆ ಮಿಕ್ಸ್ ಆಗಿದ್ದ ನೀರು ಕೂಡ ಹೋಯಿತು. ಪೆಟ್ರೋಲ್ ಭರ್ತಿ ಮಾಡಿಕೊಂಡು ಹೋಗೋಣ ಅನ್ನುವಷ್ಟರಲ್ಲಿ ಬೈಕ್ ಸ್ಟಾರ್ಟ್ ಆಗಲಿಲ್ಲ. ಎಲ್ಲಾ ಬಿಚ್ಚಿ ನೋಡಿದಾಗ ಪೆಟ್ರೋಲ್ ಜೊತೆ ನೀರು ಮಿಕ್ಸ್ ಆಗಿರೋದು ಗೊತ್ತಾಗಿದೆ. ಈಗ ಪೆಟ್ರೋಲ್ ಬಂಕ್ ಮುಂದೆ ಗಲಾಟೆ ಮಾಡ್ತಿದ್ದಾರೆ. ಬೈಕ್ ರಿಪೇರಿ ಮಾಡ್ಕೊಡಿ ಅಂತ ಪಟ್ಟು ಹಿಡಿದಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?