ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ 2017ರಲ್ಲಿ ವಿವಾಹವಾಗಿದ್ದರು. ದೂರದ ಇಟಲಿಗೆ ತೆರಳಿ ಮದುವೆಯಾಗಿದ್ದರು. ಮದುವೆಯಾಗಿ ಮೂರು ವರ್ಷಗಳ ನಂತರದಲ್ಲಿ ಈ ದಂಪತಿ ಸಿಹಿ ಸುದ್ದಿ ನೀಡಿದ್ದಾರೆ. ಅರ್ಥಾತ್ ವಿರಾಟ್ ಹಾಗೂ ಅನುಷ್ಕಾ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಮದುವೆಯಾದ ನಂತರ ಅನುಷ್ಕಾ ಶರ್ಮಾ ನಟನೆಯಿಂದ ಕೊಂಚ ಅಂತರ ಕಾಯ್ದುಕೊಂಡಿದ್ದರು. ಇತ್ತೀಚೆಗೆ ನಟನೆಗಿಂತ ಸಿನಿಮಾ ನಿರ್ಮಾಣ ಕಾರ್ಯದಲ್ಲೇ ಹೆಚ್ಚು ತೊಡಗಿದ್ದರು. ಅವರ ಹೊಟ್ಟೆ ಕೊಂಚ ಉಬ್ಬಿದ್ದರಿಂದ ಅನುಷ್ಕಾ ಗರ್ಭಿಣಿ ಎಂದೇ ಹೇಳಲಾಗುತ್ತಿತ್ತು, ಈಗ ಖುದ್ದು ಅನುಷ್ಕಾ ಶರ್ಮಾ ಈ ವಿಚಾರವನ್ನು ಖಚಿತ ಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋ ಹಾಕಿರುವ ಅನುಷ್ಕಾ, ನಾವು ಈಗ ಇಬ್ಬರಲ್ಲ ಮೂವರು ಎಂದು ಹೇಳಿದ್ದಾರೆ. ಈ ಮೂಲಕ ಅನುಷ್ಕಾ ಗರ್ಭಿಣಿ ಎಂಬುದನ್ನು ಅಧಿಕೃತಗೊಳಿಸಿದ್ದಾರೆ.‘ ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಕದ್ದು-ಮುಚ್ಚಿ ಡೇಟಿಂಗ್ ಕೂಡ ನಡೆಸಿದ್ದರು. ಆದರೆ, ಈ ಬಗ್ಗೆ ಎಲ್ಲಿಯೂ ಹೇಳಿಕೊಂಡಿರಲಿಲ್ಲ.
ನಂತರ ಇಟಲಿಗೆ ತೆರಳಿ ಮದುವೆ ಆಗಿದ್ದರು. 2018ರಲ್ಲಿ ತೆರೆಕಂಡ ಸೂಯಿ ಧಾಗ: ಮೇಡ್ ಇನ್ ಇಂಡಿಯಾ, ಜೀರೋ ಚಿತ್ರಗಳೇ ಕೊನೆ. ಅದಾದ ನಂತರದಲ್ಲಿ ಯಾವುದೇ ಚಿತ್ರಗಳಲ್ಲೂ ಅವರು ನಟಿಸಿಲ್ಲ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?