Featured
ಮಶ್ರೂಮ್ ಬಿರಿಯಾನ್, ಡಿಫ್ರೆಂಟ್ ದೋಸೆ – ಯಾರ ಮನೆಯಲ್ಲಿ ಯಾರು ತಿಂದ್ರು..? ಇದು ವಿರಾಟ್-ಶ್ರೇಯಸ್ ಹಂಚಿಕೊಂಡ ಹೊಸ ವಿಷ್ಯ..!

ರೈಸಿಂಗ್ ಕನ್ನಡ :
ವೆಬ್ ಡೆಸ್ಕ್ :

ಕೊರೊನಾ ಎಲ್ಲರನ್ನ ಸೈಲೆಂಟ್ ಆಗಿಸಿದೆ. ಸದಾ ಒಂದಿಲ್ಲೊಂದು ಮ್ಯಾಚ್‌ಗಳ ಮೂಲಕ ಸುದ್ದಿಯಲ್ಲಿರುತ್ತಿದ್ದ ಕ್ರಿಕೆಟಿಗರು ಕೂಡ ಸೈಲೆಂಟ್ ಆಗಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಐಪಿಎಲ್ ಆರಂಭಾಗದೆ ಇರೋದು ಕ್ರಿಕೆಟಿಗರನ್ನ ಮತ್ತಷ್ಟು ಮಂಕಾಗಿಸಿದೆ. ಹಾಗಂತ ಕ್ರಿಕೆಟಿಗರ್ಯಾರು ಸುಮ್ಮನೆ ಕುಳಿತಿಲ್ಲ. ತಮ್ಮ ತಮ್ಮ ಮನೆಗಳಲ್ಲೇ ಒಂದಿಲ್ಲೊಂದು ಕೆಲಸಗಳಲ್ಲಿ ನಿರತರಾಗಿದ್ದಾರೆ.

ದೆಹಲಿಯಲ್ಲೇ ಇರೋ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಸಹ ಆಟಗಾರ ಶ್ರೇಯಸ್ ಅಯ್ಯರ್ ಮನೆಗೆ ಭೇಟಿ ನೀಡಿದ್ದಾರೆ. ಶ್ರೇಯಸ್ ಅಯ್ಯರ್ ಅಮ್ಮ ಮಾಡಿಕೊಟ್ಟ ವಿವಿಧ ಬಗೆಯ ದೋಸೆಗಳನ್ನ ಸವಿದ್ದಿದ್ದಾರೆ. ಅಲ್ಲದೇ ಆ ವಿಷ್ಯವನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರೋ ವಿರಾಟ್, ತುಂಬಾನೆ ಖುಷಿಯಾಯ್ತು. ಅಮ್ಮನಿಗೆ ಸ್ಪೆಷಲ್ ಥ್ಯಾಂಕ್ಸ್. ಇಂತಹ ದೋಸೆಗಳನ್ನ ತಿಂದಿರಲಿಲ್ಲ ಅಂತ ಬರೆದುಕೊಂಡಿದ್ದಾರೆ.
ವಿಶೇಷ ಅಂದ್ರೆ, ವಿರಾಟ್ ಮತ್ತು ಶ್ರೇಯಸ್ ಅಯ್ಯರ್ ಇಬ್ಬರೂ ಕೂಡ ಮಾಸ್ಕ್ ಧರಿಸಿನಿಂತು ಫೋಟೋಗೆ ಪೋಸ್ ನೀಡಿದ್ದಾರೆ. ಈ ಮೂಲಕ ಕೊರೊನಾ ಜಾಗೃತಿಯನ್ನ ಕೂಡ ಮಾಡಿದ್ದಾರೆ. ಇನ್ನೂ ಸ್ಪೆಷಲ್ ನ್ಯೂಸ್ ಅಂದ್ರೆ, ಶ್ರೇಯಸ್ ಅಯ್ಯರ್ ಮನೆಯಲ್ಲಿ ದೋಸೆ ತಿಂದು ಬಂದಿರೋ ವಿರಾಟ್ ಕೊಹ್ಲಿ, ತಮ್ಮ ಮನೆಯಲ್ಲಿ ಮಶ್ರೂಮ್ ಬಿರಿಯಾನಿಯನ್ನ ಕಳುಹಿಸಿಕೊಟ್ಟಿದ್ದಾರೆ. ಈ ವಿಷ್ಯವನ್ನ ಶ್ರೇಯಸ್ ಹಂಚಿಕೊಂಡಿದ್ದಾರೆ. ಥ್ಯಾಂಕ್ಸ್ ಫಾರ್ ದಿ ಮಶ್ರೂಮ್ ಬಿರಿಯಾನಿ ಅಂತ ತಮ್ಮ ಇನ್ಸ್‌ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ದೆಹಲಿಯಲ್ಲಿ ವಿರಾಟ್ ಮತ್ತು ಶ್ರೇಯಸ್ ಮನೆಗಳು ಕೇವಲ 500 ಮೀಟರ್ ಅಂತರದಲ್ಲಿ ಇವೆಯಂತೆ.

ಏನೇ ಆಗಲಿ, ಈ ಇಬ್ಬರ ಸ್ನೇಹಕ್ಕೆ ಸೆಲ್ಯೂಟ್ ಅನ್ನೋಣ. ಅದ್ರ ಜೊತೆಯಲ್ಲೇ ಕೊರೊನಾ ವಿರುದ್ಧ ಕೈಗೊಳ್ಳಬೇಕಾದ ಜಾಗೃತಿಯನ್ನ ಕೂಡ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿರೋ ಇವರ ಕಾಳಜಿಗೆ ಅಭಿನಂದಿಸೋಣ.
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















