Connect with us

Featured

ವರಮಹಾಲಕ್ಷ್ಮಿ ಹಬ್ಬದಲ್ಲಿ ವಿಕ್ರಂ ರವಿಚಂದ್ರನ್ ‘ತ್ರಿವಿಕ್ರಮ’ನಿಗೆ ಸಿಕ್ತು ಚಿನ್ನದಂತಾ ಬೆಲೆ..!

ರೈಸಿಂಗ್​ ಕನ್ನಡ:

ವಿಕ್ರಂ ರವಿಚಂದ್ರನ್.. ಕನ್ನಡ ಬೆಳ್ಳಿತೆರೆ ಮೇಲೆ ಮಿನುಗಬೇಕು, ರಾರಾಜಿಸಬೇಕು ಅಂತ ಕನಸು ಹೊತ್ತು ಸಜ್ಜಾಗಿರೋ ಜ್ಯೂನಿಯರ್ ಕನಸುಗಾರ. ರವಿಚಂದ್ರನ್ ಮಗ ಅನ್ನೋ ಹಣೆ ಪಟ್ಟಿ ಇಲ್ಲದೇ ಸಿನಿಮಾದಲ್ಲಿ ತನ್ನ ಟ್ಯಾಲೆಂಟ್ ತೋರಿಸಿ ಸ್ಟಾರ್ ನಟನಾಗಬೇಕು ಅನ್ನೋ ಮಹದಾಸೆಯನ್ನಿಟ್ಟುಕೊಂಡಿರೋ ಹುಡುಗ. ಅಪ್ಪ ರವಿಚಂದ್ರನ್ ಸ್ಟಾರ್ ಆಗಿದ್ರೂ ಕೂಡ, ಅಪ್ಪನ ಸ್ಟಾರ್ ವ್ಯಾಲ್ಯೂವನ್ನ ಬಳಸಿಕೊಳ್ಳದೆ ಬೇರೆ ಸಿನಿಮಾಗಳಲ್ಲಿ ಒಬ್ಬ ಕಾರ್ಮಿಕನಂತೆ‌ ದುಡಿದು ಸಿನಿಮಾ ಎಕ್ಸ್ ಪೀರಿಯನ್ಸ್ ಪಡೆದುಕೊಂಡ ಹುಡುಗ ಕ್ರೇಜಿ ಸ್ಟಾರ್ ರವಿಚಂದ್ರನ್ ಎರಡನೇ‌ ಪುತ್ರ‌ ವಿಕ್ರಂ ರವಿಚಂದ್ರನ್. ವಿಕ್ಕಿ ಈಗ ‘ತ್ರಿವಿಕ್ರಮ’ ಸಿನಿಮಾ ಮಾಡುತ್ತಿದ್ದಾರೆ.. ವಿಕ್ರಂ ಹೆಸರಿಗೆ, ನಟನಾ ಟ್ಯಾಲೆಂಟ್ ಗೆ, ಲುಕ್, ಮ್ಯಾನರಿಸಂ ಗೆ ತಕ್ಕಂಥ ಕಥೆಯನ್ನ ನಿರ್ದೇಶಕ ಸಹನಾ ಮೂರ್ತಿ ಕೆತ್ತಿ ಸಿದ್ಧಪಡಿಸಿ ಶೂಟಿಂಗ್ ಕೂಡ ಮಾಡಿದ್ದಾರೆ. ಸಹನಾ ಮೂರ್ತಿ ರವಿಚಂದ್ರನ್ ಎರಡನೇ ಪುತ್ರನ ಮೊದಲ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ ಅಂದ ಮೇಲೆ ಆ ಸಿನಿಮಾದ ಮೇಲಿನ ನಿರೀಕ್ಷೆ ಒಂದು ಹಿಡಿ ಹೆಚ್ಚೇ ಇರುತ್ತೆ. ಅದನ್ನ ಸಹನಾ ಮೂರ್ತಿ ಫುಲ್ ಫಿಲ್ ಮಾಡಿದ್ದಾರೆ ಅನ್ನೋದು ಈಗಾಗ್ಲೆ ಬಂದಿರೋ ತ್ರಿವಿಕ್ರಮ ಸಿನಿಮಾ ಫಸ್ಟ್ ಲುಕ್ ಟೀಸರ್ ಗಳೇ ಸಾರಿ ಸಾರಿ ಹೇಳ್ತಿವೆ. ಇದೀಗ ವರಮಹಾ ಲಕ್ಷ್ಮಿ ಹಬ್ಬದಂದು ತ್ರಿವಿಕ್ರಮನ ಜೋಳಿಗೆಗೆ ಲಕ್ಷ್ಮಿ ಬಂದು ಸೇರಿದ್ದಾಳೆ.

Advertisement

ಆಡಿಯೋ ಹಕ್ಕಿನಲ್ಲಿ ‘ತ್ರಿವಿಕ್ರಮ’ನ ಪರಾಕ್ರಮ..!

ಜ್ಯೂನಿಯರ್ ಕನಸುಗಾರ ವಿಕ್ರಂ ರವಿಚಂದ್ರನ್‌ ಚಿತ್ರರಂಗಕ್ಕೆ ಡೆಬ್ಯೂ ಆಗ್ತಿರೋ‌ ಸಿನಿಮಾ ತ್ರಿವಿಕ್ರಮ.. ಸಹನಾ ಮೂರ್ತಿ ಸಿಕ್ಕಾಪಟ್ಟೆ ಮುತುವರ್ಜಿ ವಹಿಸಿ ವಿಕ್ಕಿಗಾಗೇ ಈ ಸಿನಿಮಾ ಸಿದ್ಧಪಡಿಸಿದ್ದಾರೆ. ನಿರ್ಮಾಪಕ ಸೋಮಣ್ಣ ಜ್ಯೂನಿಯರ್ ಕ್ರೇಜಿಸ್ಟಾರ್ ಅನ್ನ ಸಕ್ಕತ್ತಾಗಿ ತೋರಿಸಬೇಕು, ಅದೆಷ್ಟೇ ಖರ್ಚಾದ್ರು ಪರವಾಗಿಲ್ಲ ಅಂತ ‘ತ್ರಿವಿಕ್ರಮ’ನಿಗಾಗಿ ಕೋಟಿ ಕೋಟಿ ಬಂಡವಾಳ ಸುರಿದಿದ್ದಾರೆ.. ಇದಕ್ಕೆ ಬೆಸ್ಟ್ ಎಕ್ಸಾಂಪಲ್, ತ್ರಿವಿಕ್ರಮನ ಎರಡು ಹಾಡುಗಳ ಚಿತ್ರೀಕರಣವನ್ನ ಭಾರತ ಚೀನಾ, ಭಾರತ, ಪಾಕಿಸ್ತಾನ ಗಡಿಗಳಲ್ಲಿ ಚಿತ್ರೀಕರಿಸೋಕೆ ಪ್ಲಾನ್ ಮಾಡಿರೋದು.. ನಿರ್ಮಾಪಕ ಸೋಮಣ್ಣರ ಈ ಎಫರ್ಟ್ ಗೆ ಈಗ ಚಿನ್ನದಂತಾ ಬೆಲೆ ಬಂದಿದೆ. ಯಾಕಂದ್ರೆ ತ್ರಿವಿಕ್ರಮ ಸಿನಿಮಾದ ಹಾಡುಗಳು ಮಾರಾಟವಾಗಿದ್ದು ವಿಕ್ರಂ ಮೊದಲ ಸಿನಿಮಾದಲ್ಲೇ ದಾಖಲೆ ಬರೆದಿದ್ದಾರೆ.

Advertisement

50 ಲಕ್ಷಕ್ಕೆ ಸೇಲ್ ಆಯ್ತು ‘ತ್ರಿವಿಕ್ರಮ’ ಸಾಂಗ್ಸ್..!

ಜ್ಯೂನಿಯರ್ ಕನಸುಗಾರ ವಿಕ್ಕಿಯ ತ್ರಿವಿಕ್ರಮನಿಗೆ‌ ಭಾರಿ‌ ಡಿಮ್ಯಾಂಡ್ ಬಂದಿದೆ. ಇದರ ಮೊದಲ ಹೆಜ್ಜೆಯಂತೆ ತ್ರಿವಿಕ್ರಮ ಸಿನಿಮಾದ ಆಡಿಯೋ ಹಕ್ಕು 50 ಲಕ್ಷಕ್ಕೆ ಮಾರಾಟವಾಗಿದೆ. ಎ2 ಮ್ಯೂಸಿಕ್ ಆಡಿಯೋ ಸಂಸ್ಥೆ ತ್ರಿವಿಕ್ರಮನ ಹಾಡುಗಳನ್ನು ಕೇಳಿ ಖುಷಿ ಯಿಂದ ಡಿಮ್ಯಾಂಡ್ ಮಾಡಿ ಹಾಡುಗಳನ್ನ ಖರೀದಿಸಿದೆ. ಒಬ್ಬ ಸ್ಟಾರ್ ಹೀರೋನಾ ಸಿನಿಮಾದ ಹಾಡುಗಳೇ 50 ಲಕ್ಷಕ್ಕೆ ಬಿಕರಿಯಾಗೀದು ತೀರಾ ಅಪರೂಪ, ಅಂತದ್ರಲ್ಲಿ ವಿಕ್ರಂ ರವಿಚಂದ್ರನ್ ಮೊದಲ‌ ಸಿನಿಮಾದ ಹಾಡುಗಳು ಇಷ್ಟು ದೊಡ್ಡ ಮೊತ್ತಕ್ಕೆ ಸೇಲ್ ಆಗಿರೋದು, ತ್ರಿವಿಕ್ರಮ ಸಿನಿಮಾದ ಕ್ರೆಡಿಬಲಿಟಿಯನ್ನ ತೋರಿಸುತ್ತೆ. ತ್ರಿವಿಕ್ರಮ‌ ಸಿನಿಮಾದಲ್ಲಿ ಒಟ್ಟು 6 ಹಾಡುಗಳಿದ್ದು, ನಾಗೇಂದ್ರ ಪ್ರಸಾದ್, ಚೇತನ್ ಕುಮಾರ್, ಹಾಗೂ ಯೋಗರಾಜ್ ಭಟ್ ಹಾಡುಗಳನ್ನ ಬರೆದಿದ್ದಾರೆ. ಅರ್ಜುನ್ ಜನ್ಯ ಭರ್ಜರಿ‌ ಮ್ಯೂಸಿಕ್ ಟ್ಯೂನ್ ಕೊಟ್ಟಿದ್ದು, ವಿಜಯ್ ಪ್ರಕಾಶ್, ಹಾಗು ಸಂಚಿತ್ ಹೆಗಡೆ‌ ಹಾಡುಗಳಿಗೆ ಧ್ವನಿಯಾಗಿದ್ದಾರೆ. ತ್ರಿವಿಕ್ರಮ‌ ಸಿನಿಮಾದ ಹಾಗಳ ಸೌಂಡು ಮಾರುಕಟ್ಟೆಯಲ್ಲಿ ಜೋರಾಗಿದ್ದು, ಸಿನಿಮಾದ ಮೇಲಿರೋ ನಿರೀಕ್ಷೆಯನ್ನ ಚಿತ್ರತಂಡ ಉಳಿಸಿಕೊಳ್ಳುತ್ತೆ ಅನ್ನೋದಕ್ಕೆ‌ ಇದೇ ಸಾಕ್ಷಿ.

Advertisement

ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ