Featured
ರೌಡಿ ಲವರ್ ಬಾಯ್ ಲುಕ್ನಲ್ಲಿ ಮತ್ತೆ ಧೂಳೆಬ್ಬಿಸಿದ ವಿಜಯ್ ದೇವರಕೊಂಡ
![](https://risingkannada.com/wp-content/uploads/2019/09/vijay-devarakond.jpeg)
ರೈಸಿಂಗ್ ಕನ್ನಡ : ಡಿಯರ್ ಕಾಮ್ರೇಡ್ ಸಿನಿಮಾ ಮೂಲಕ ಕನ್ನಡಕ್ಕೂ ಪರಿಚಯವಾದ ವಿಜಯ್ ದೇವರಕೊಂಡ ಈಗ ಮತ್ತೆ ತನ್ನ ಹಳೇ ಲುಕ್ಗೆ ಬಂದಿದ್ದಾರೆ. ಡಿಯರ್ ಕಾಮ್ರೇಡ್ ಸಿನಿಮಾ ಬಳಿಕ ವಿಜಯ್ ದೇವರಕೊಂಡ ಕೂಡ ಎಲ್ಲರಂತೆ ಲವರ್ ಬಾಯ್ ಆಗೋದ್ರು. ಇನ್ಮುಂದೆ ಮಾಮೂಲಿ ಸಿನಿಮಾ ಮಾಡ್ತಾರೆ ಅನ್ಕೊಂಡಿದ್ರು. ಆದ್ರೆ, ಎಲ್ಲರ ನಿರೀಕ್ಷೆ ಸುಳ್ಳು ಮಾಡಿರೋ ವಿಜಯ್ ದೇವರಕೊಂಡ ತನ್ನ ಹೊಸ ಸಿನಿಮಾದಲ್ಲಿ ಮತ್ತೆ ಹಳೇ ಖದರ್ನಲ್ಲಿ ಬಂದಿದ್ದಾರೆ.
ಈ ಸಿನಿಮಾದ ಹೆಸರು ವರ್ಲ್ಡ್ ಫೇಮಸ್ ಲವರ್. ಕ್ರಿಯೇಟಿವ್ ಕಮರ್ಷಿಯಲ್ ಬ್ಯಾನರ್ನಲ್ಲಿ ನಿರ್ಮಾಣವಾಗಿರೋ ಈ ಸಿನಿಮಾಗೆ ಕ್ರಾಂತಿ ಮಾಧವ್ ಡೈರೆಕ್ಟರ್. ಈ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ವಿಜಯ್ ದೇವರಕೊಂಡ ಹಳೇ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ. ಉದ್ದುದ್ದ ಕೂದಲು.. ರಕ್ತ.. ಕೈಯಲ್ಲಿ ಸಿಗರೇಟ್, ಬಾಯಲ್ಲಿ ಹೊಗೆ.. ಮುಖದಲ್ಲಿ ಕೋಪ.. ಎಲ್ಲವೂ ವಿಜಯ್ ದೇವರಕೊಂಡ ಉಗ್ರತ್ವಕ್ಕೆ ಸಾಕ್ಷಿಯಾದಂತಿದೆ.
![](https://risingkannada.com/wp-content/uploads/2019/09/vijay-devarakond-1-939x1024.jpeg)
ಅರ್ಜುನ್ ರೆಡ್ಡಿ ಮೂಲಕ ತೆಲುಗು ಚಿತ್ರರಂಗದಲ್ಲಿ ಹೊಸ ಟ್ರೆಂಡ್ ಸೃಷ್ಟಿ ಮಾಡಿದ್ದವರು ವಿಜಯ್ ದೇವರಕೊಂಡ. ಆದಾದ ಬಳಿಕ ಗೀತಾ ಗೋವಿಂದಂ, ನೋಟಾ, ಡಿಯರ್ ಕಾಮ್ರೇಡ್, ಟ್ಯಾಕ್ಸಿವಾಲ ಸೇರಿದಂತೆ ಹಲವು ಸಿನಿಮಾ ಮಾಡಿದ್ರು. ಇದೀಗ, ರೌಡಿ ಲುಕ್ನಲ್ಲಿ ತಮ್ಮ ಹಳೆಯ ಖದರ್ ತೋರಿಸೋಕೆ ವಿಜಯ್ ರೆಡಿಯಾಗಿದ್ದಾರೆ. ವಿಶೇಷ ಅಂದ್ರೆ, ಈ ಸಿನಿಮಾದಲ್ಲಿ ರಾಶಿ ಖನ್ನಾ, ಇಸಾಬೆಲ್ಲಾ, ಐಶ್ವರ್ಯಾ ರಾಜೇಶ್ ಹಾಗೂ ಕ್ಯಾಥರೀನ್ ನಾಯಕರಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?