Featured
ನೂರರ ಗಡಿ ದಾಟಿದ ಬಜ್ಜಿ ಮೆಣಸಿಕಾಯಿ- ಸೆಂಚುರಿಯತ್ತ ಕ್ಯಾಪ್ಸಿಕಂ- ಬೇಡಿಕೆಯಿಂದಾಗಿ ತರಕಾರಿಗಳ ಬೆಲೆ ಏರಿಕೆ..!
![](https://risingkannada.com/wp-content/uploads/2020/08/VEG-demand.jpg)
ರೈಸಿಂಗ್ ಕನ್ನಡ:
ಬೆಂಗಳೂರು:
ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಉತ್ತಮವಾಗಿದೆ. ಬರ ಪೀಡಿತ ಜಿಲ್ಲೆಗಳಲ್ಲೂ ವರುಣ ತನ್ನ ಸಿಂಚನ ಮಾಡಿದ್ದಾನೆ. ಹೀಗಾಗಿ ಬೆಳೆ ಉತ್ತಮವಾಗಿ ಆಗಬಹುದು ಅನ್ನುವ ನಿರೀಕ್ಷೆ ಇದೆ. ಆದರೆ ಅಚ್ಚರಿ ಎಂಬಂತೆ ತರಕಾರಿ ಬೆಲೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೊರೊನಾ ಸಮಯದಲ್ಲಿ ಮಾಂಸಹಾರಕ್ಕಿಂತ ಸಸ್ಯಾಹಾರವೇ ಉತ್ತಮ ಅನ್ನುವ ಕಾರಣಕ್ಕಾಗಿ ತರಕಾರಿಗಳಿಗೆ ಬೇಡಿಕೆ ಹೆಚ್ಚಿದೆ. ಇಳುವರಿ ಸಾಮಾನ್ಯವಾಗಿ ಇರುವಂತೆ ಇದ್ದರೂ, ಬೇಡಿಕೆಯಿಂದಾಗಿ ತರಕಾರಿಗಳ ಬೆಲೆಯಲ್ಲಿ ಏರುಪೇರಾಗಿದೆ.
2 ವಾರದ ಹಿಂದೆ ಟೊಮ್ಯಾಟೋ ಬೆಲೆ 42 ರೂಪಾಯಿ ದಾಟಿತ್ತು. ಆದ್ರೆ ಈಗ ಚಿಕ್ಕಬಳ್ಳಾಪುರ ಮತ್ತು ಕೋಲಾರಗಳಿಂದ ಟೊಮ್ಯಾಟೋ ಹೇರಳವಾಗಿ ಬರುತ್ತಿದೆ. ಹೀಗಾಗಿ ಟೊಮ್ಯಾಟೊ ಬೆಳೆಯಲ್ಲಿ ಇಳಿಕೆಯಾಗಿದೆ. ಕ್ಯಾರೆಟ್ ಮತ್ತು ಬೀನ್ಸ್ ಮಾರುಕಟ್ಟೆಗೆ ಹೆಚ್ಚಾಗಿ ಬರುತ್ತಿದೆ. ಆದ್ರೆ ಬೇಡಿಕೆ ಹೆಚ್ಚಿರುವುದರಿಂದ ಅದ್ರ ರೇಟ್ 35 ಮತ್ತು 40 ರೂಪಾಯಿ ಆಸುಪಾಸಿನಲ್ಲಿದೆ.
![Puranik Aston](https://risingkannada.com/wp-content/uploads/2020/07/aston.jpg)
ಕ್ಯಾಪ್ಸಿಕಂ ಬೆಲೆ 90 ರೂಪಾಯಿ ಆಸುಪಾಸಿನಲ್ಲಿದೆ. ಬಜ್ಜಿ ಮೆಣಸಿನಕಾಯಿ ಬೆಲೆ ನೂರು ರೂಪಾಯಿ ಗಡಿ ದಾಟಿದೆ. ಕೊತ್ತಂಬರಿ ಸೊಪ್ಪಿನ ಬೆಲೆ ಕೂಡ ನಿಧಾನವಾಗಿ ಏರಿಕೆ ಆಗ್ತಿದೆ. ಕ್ಯಾಪ್ಸಿಕಂ, ಬಜ್ಜಿ ಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪು ಬೆಳೆಯುವ ರಾಮನಗರ, ಆನೇಕಲ್ ಹಾಗೂ ತುಮಕೂರು ಭಾಗದಲ್ಲಿ ಮಳೆ ಸ್ವಲ್ಪ ಹೆಚ್ಚಾಗಿದ್ದರಿಂದ ಈ ಬೆಳೆಗಳು ಕಡಿಮೆ ಆಗಿದೆ.
ಇನ್ನು ಆಲೂಗೆಡ್ಡೆ ಬೆಲೆಯಲ್ಲು ಏರಿಕೆ ಕಂಡಿದೆ. ಬೀಟ್ ರೂಟ್ ಬೆಲೆ ಕಡಿಮೆ ಆಗುತ್ತಿದೆ. ಸೊಪ್ಪುಗಳ ಬೆಲೆಯಲ್ಲೂ ಏರಿಕೆ ಕಂಡು ಬಂದಿದೆ. ಮಳೆಯ ಜೊತೆ ಮೋಡದ ವಾತಾವರಣ ಬೆಳೆಗಳ ಮೇಲೆ ಪ್ರಭಾವ ಬೀರುತ್ತಿರುವುದರಿಂದ ತರಕಾರಿ ಬೆಲೆಗಳು ಹೆಚ್ಚು ಕಡಿಮೆ ಆಗುತ್ತಿದೆ.
You may like
ಈರುಳ್ಳಿ ಸಿಪ್ಪೆಯಿಂದ ಸುಲಭವಾಗಿ ಬೇಗ ಸಣ್ಣಗಾಗಬಹುದು!
ಪಿಯುಸಿ ಪರೀಕ್ಷಾ ಕೇಂದ್ರಗಳಿಗೆ ಸಚಿವ ಮಧು ಬಂಗಾರಪ್ಪ ಭೇಟಿ, ಪರಿಶೀಲನೆ
ದಿನಕ್ಕೊಂದು ಹಸಿ ಈರುಳ್ಳಿ ಕತ್ತರಿಸಿಕೊಂಡು ತಿನ್ನಿ; ಈ ಕಾಯಿಲೆಗಳು ನಿಮತ್ತ ಕೂಡ ಸುಳಿಯಲ್ಲ!
Karavali Utsava | ಬೆಂಗಳೂರಲ್ಲಿ ಕರಾವಳಿಗರ ಉತ್ಸವ
Bangalore Water Crisis | ಬೆಂಗಳೂರಿಗೆ ಬೇಕಿದೆ ಕುಡಿಯುವ ನೀರಿನ ಗ್ಯಾರೆಂಟಿ – ಅಶೋಕ್
ಬೆಂಗಳೂರಿನ ಬರಕ್ಕೆ ಅಸಲಿ ಕಾರಣವೇನು?