Featured
ವರಮಹಾಲಕ್ಷ್ಮಿ ಹಬ್ಬಕ್ಕೆ ರಿಲೆಯನ್ಸ್ ಟ್ರೆಂಡ್ಸ್ ಸಂಸ್ಥೆಯ ಭರ್ಜರಿ ಆಫರ್ – ಅಲಂಕೃತ ವರಮಹಾಲಕ್ಷ್ಮೀಯ ಸೆಲ್ಫಿ ಕಳುಹಿಸಿ ಕಾಂಜಿವರಂ ಸೀರೆ ಗೆಲ್ಲಿ

ರೈಸಿಂಗ್ ಕನ್ನಡ :
ತುಮಕೂರು :
ದೇಶದ ಅತ್ಯಂತ ದೊಡ್ಡ ರಿಲಯನ್ಸ್ ರಿಟೇಲ್‌ನ ಉಡುಪು ಮತ್ತು ಪರಿಕರ ಮಳಿಗೆಗಳ ವಿಶೇಷ ಸರಪಳಿಯಾದ ಟ್ರೆಂಡ್ಸ್ ಸಂಸ್ಥೆಯು ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಭರ್ಜರಿ ಸ್ಪರ್ಧೆಯನ್ನು ಆಯೋಜಿಸಿದೆ. ಅಲಂಕೃತ ಮಹಾಲಕ್ಷ್ಮೀ ಮಾತೆಯನ್ನು ಪೂಜಿಸುವ ಸೆಲ್ಫಿಯನ್ನು ಟ್ರೆಂಡ್ಸ್‌ನ ವಾಟ್ಸಪ್‌ನ ಸಂಖ್ಯೆಗೆ ಕಳುಹಿಸಿದರೆ ಆಕರ್ಷಕ ಬಹುಮಾನ ನೀಡುವ ಭರವಸೆಯನ್ನ ಟ್ರೆಂಡ್ಸ್ ಸಂಸ್ಥೆ ನೀಡಿದೆ.
ಆರ್ಟ್ ಕಾಂಜಿವರಂ ಸೀರೆಯನ್ನ ಮೊದಲ ಬಹುಮಾನವನ್ನ ನೀಡಲು ಟ್ರೆಂಡ್ಸ್ ಸಂಸ್ಥೆ ಘೋಷಿಸಿದೆ. ಪ್ರತಿಯೊಂದು ಟ್ರೆಂಡ್ಸ್ ಸಂಸ್ಥೆಯಲ್ಲೂ ಮೊದಲ ಬಹುಮಾನಕ್ಕೆ ಒಬ್ಬ ಸಂಭಾವ್ಯ ವಿಜೇತರು ಇರಲಿದ್ದಾರೆ.

ಟ್ರೆಂಡ್ಸ್ ಮಳಿಗೆಯ ವ್ಯಾಪ್ತಿಯ ಪಟ್ಟಣದ ಅಥವಾ ನಗರದ ಹೆಸರಾಂತ ಶಿಕ್ಷಕರು ಹಾಗೂ ಆ ಪ್ರದೇಶದ ವ್ಯಾಪ್ತಿಯ ಪ್ರಮುಖ ದೇವಾಲಯದ ಪ್ರಮುಖ ಅರ್ಚಕರು ತೀರ್ಪುಗಾರರಾಗಿ ಇರಲಿದ್ದಾರೆ.
ಮಹಾಲಕ್ಷ್ಮಿಯ ಸೆಲ್ಫಿ ಪೋಟೊ ಕಳುಹಿಸಿದ ಗ್ರಾಹಕರಿಗೆ ಭಾಗವಹಿಸುವಿಕೆಗಾಗಿ ಧನ್ಯವಾದಗಳು ಅಂತ ಸಂಸ್ಥೆ ಕಳುಹಿಸಲಿದೆ. ಜೊತೆಗೆ ವಿಜೇತರರ ಹೆಸರನ್ನೂ ಕೂಡ ವಾಟ್ಸ್ ಅಪ್ ಮೂಲಕ ಸ್ಪರ್ಧಿಗಳಿಗೆ ಸಂಸ್ಥೆ ಕಳುಹಿಸಲಿದೆ.
ಮೊದಲ ಬಹುಮಾನದ ವಿಜೇತರರಿಗೆ ಆರ್ಟ್ ಕಾಂಜಿವರಂ ಸೀರೆಯನ್ನ ಆಯಾ ಪಟ್ಟಣದ ಮಹಿಳಾ ವೈದ್ಯರು ಅಥವಾ ಹಿರಿಯ ಮಹಿಳಾ ಅಧಿಕಾರಿ ನೀಡಲಿದ್ದಾರೆ. ಜೊತೆಗೆ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೂ ಟ್ರೆಂಡ್ಸ್ ಮೆಚ್ಚುಗೆಯ ಪ್ರಮಾಣ ಪತ್ರವನ್ನ ಕೂಡ ನೀಡಲಿದೆ.
ಅಲಂಕೃತ ವರಮಹಾಲಕ್ಷ್ಮೀ ಮಾತೆಯನ್ನು ಪೂಜಿಸುವ ಸೆಲ್ಫಿಯನ್ನು 9901318627 ಗೆ ಕಳುಹಿಸಬಹುದು. ಮಹಾಲಕ್ಷ್ಮೀಯ ಪೋಟೋ ಕಳುಹಿಸಲು ಆಗಸ್ಟ್ 2 ರಂದು ಭಾನುವಾರ ಕಡೆಯ ದಿನವಾಗಿದೆ. ಹೆಚ್ಚಿನ ವಿವರಗಳಿಗೆ ಸಮೀಪದ ಟ್ರೆಂಡ್ಸ್ ಮಳಿಗೆಯನ್ನು ಸಂಪರ್ಕಿಸಬಹುದು
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?