Featured
ಚೀನಾ ಸಮುದ್ರದಲ್ಲಿ ಅಮೆರಿಕನ್ನರ ತಾಲೀಮು- ಡ್ರ್ಯಾಗನ್ ದೇಶಕ್ಕೆ ನೇರಾ ನೇರ ಟಕ್ಕರ್- ಭಾರತಕ್ಕೆ ಆನೆ ಬಲ
ರೈಸಿಂಗ್ ಕನ್ನಡ ನ್ಯೂಸ್ ಡೆಸ್ಕ್:
ಶತ್ರುವಿನ ಶತ್ರು ಮಿತ್ರ ಅನ್ನುವ ಮಾತಿದೆ. ಈಗ ಅದು ವಿಶ್ವಮಟ್ಟದಲ್ಲೂ ಸುದ್ದಿಯಾಗ್ತಿದೆ. ಅಮೆರಿಕಾಕ್ಕೆ ಚೀನಾ ಶತ್ರು. ಭಾರತಕ್ಕೂ ಚೀನಾ ಶತ್ರು. ಅಮೆರಿಕಾ ಮತ್ತು ಚೀನಾ ನಡುವೆ ಮಾತಿನಲ್ಲೇ ಫೈಟ್ ನಡೆಯುತ್ತಿದೆ. ಭಾರತದ ಜೊತೆ ಚೀನಾ ಕಾಲು ಕೆರದು ಗಡಿ ವಿವಾದವನ್ನು ಹುಟ್ಟುಹಾಕಿದೆ. ಭಾರತ ಗಲ್ವಾನ್ ಹಾಗೂ ಲಡಾಕ್ ಗಡಿಭಾಗದಲ್ಲಿ ಡ್ರ್ಯಾಗನ್ ಸೈನಿಕರಿಗೆ ತಕ್ಕ ಪಾಠ ಕಲಿಸಿದೆ. ಇತ್ತ ಕಡೆ ವಿಶ್ವದ ದೊಡ್ಡಣ್ಣ ಅಮೆರಿಕಾ ಕೂಡ ಚೀನಾವನ್ನು ಕಟ್ಟಿಹಾಕುವ ಪ್ರಯತ್ನ ಮಾಡ್ತಿದೆ. ಇಲ್ಲಿತನಕ ಮಾತಿನ ಮೂಲಕ ಚೀನಾ ವಿರುದ್ಧ ಭಾರತಕ್ಕೆ ಬೆಂಬಲ ನೀಡ್ತಿದ್ದ ಅಮೆರಿಕಾ ಈಗ ಕೆಂಪು ಬಾವುಟದ ರಾಷ್ಟ್ರಕ್ಕೆ ನೇರಾನೇರಾ ಟಕ್ಕರ್ ನೀಡಿದೆ.
ಕೆಲದಿನಗಳ ಹಿಂದೆ ಯೂರೋಪ್ನಲ್ಲಿದ್ದ ಅಮೆರಿಕಾ ಸೇನೆ ಪಡೆಗಳು ದಕ್ಷಿಣ ಚೀನಾದ ಸಮುದ್ರದ ಕಡೆಗೆ ರವಾನೆಯಾಗಿದ್ದವು. ಈಗಾಗಲೇ ಚೀನಾ ವಿಯೆಟ್ನಾಂ, ಪಿಲಿಪೈನ್ಸ್, ಮಲೇಷಿಯಾ, ತೈವಾನ್ ಮತ್ತು ಬ್ರೂನೈ ದೇಶಗಳಲ್ಲಿ ತನ್ನ ಅಧಿಪತ್ಯ ಸ್ಥಾಪಿಸುವ ಪ್ರಯತ್ನ ಮಾಡುತ್ತಿದೆ. ಚೀನಾ ವಿರುದ್ಧ ಈ ದೇಶಗಳು ಸಿಡಿದು ನಿಂತಿವೆ. ಈಗ ಅಮೆರಿಕಾದ ನೌಕಾ ಚಟುವಟಿಕೆ ಭಾರತ ಮಾತ್ರವಲ್ಲ ಚೀನಾದ ಬೆದರಿಕೆ ಇರುವ ಎಲ್ಲಾ ದೇಶಗಳಿಗೆ ನೈತಿಕ ಬಲ ತುಂಬಿದೆ.
ದಕ್ಷಿಣ ಚೀನಾದ ಸಮುದ್ರದಲ್ಲಿ ಅಮೆರಿಕಾದ ನೌಕಾಸೇನೆಗಳು ತಾಲೀಮು ನಡೆಸಿವೆ. ಇತ್ತ ಭಾರತ ಚೀನಾಕ್ಕೆ ಹೊಂದಿಕೊಂಡಿರುವ ಗಡಿಗಳನ್ನು ಟೈಟ್ ಮಾಡ್ತಿದೆ. ಅಮೆರಿಕಾದ ನೌಕಾ ತಾಲೀಮು ಚೀನಾ ದೇಶದೊಂದಿಗೆ ನೇರ ಫೈಟ್ಗೆ ಇಳಿಯುವ ಸೂಚನೆಯೂ ಆಗಿದೆ. ಇಂಡೋ-ಫೆಸಿಫಿಕ್ ಏರಿಯಾದ ದೇಶಗಳನ್ನು ಬೆಂಬಲಿಸುವ ಯೋಚನೆಯಲ್ಲಿ ನೌಕಾ ತಾಲೀಮು ನಡೆಸುತ್ತಿದ್ದೇವೆ ಎಂದು ಅಮೆರಿಕಾ ಹೇಳಿಕೊಳ್ಳುತ್ತಿದೆ.
ಶುಕ್ರವಾರ CVN 68 ಮತ್ತು CVN 76 ನೌಕೆಗಳು ಚೀನಾ ಸಮುದ್ರದಲ್ಲಿ ಕಾರ್ಯಾಚರಣೆ ನಡೆಸಿ ನೇರವಾಗಿ ಚೀನಾಕ್ಕೆ ಟಾಂಗ್ ಕೊಟ್ಟಿದೆ. ಭಾರತ ಮತ್ತು ಚೀನಾ ನಡುವಿನ ಗಲ್ವಾನ್ ಗಲಾಟೆ ಹಾಗೂ ಗಡಿ ತಂಟೆ ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದು ಕೆಲ ದಿನಗಳ ಹಿಂದೆ ಅಮೆರಿಕಾ ಹೇಳಿತ್ತು. ಈಗ ಅಮೆರಿಕನ್ ನೇವಿಯ ಈ ತಾಲೀಮು ಭಾರತಕ್ಕೆ ಮತ್ತಷ್ಟು ಬಲ ತಂದಿದೆ. ಇತ್ತೀಚೆಗೆ ಅಮೆರಿಕಾ ಚೀನಾ ಸಮುದ್ರ ವ್ಯಾಪ್ತಿಗೆ ಬರುವ ದೇಶಗಳಿಗೆ ಕಮ್ಯೂನಿಸ್ಟ್ ಸರಕಾರದ ಬೆದರಿಕೆ ಇರುವುದರಿಂದ, ಆ ದೇಶದ ಪರವಾಗಿ ನಿಲ್ಲುವುದಾಗಿ ಘಂಟಾಘೋಷವಾಗಿ ಹೇಳಿದ್ದನ್ನು ನೆನಪಿಸಿಕೊಳ್ಳಬಹುದು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?