Featured
ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಶಾಕಿಂಗ್ ವಿಚಾರಣೆ- ಲಂಕಾ ಓಪನರ್ಗೆ ಫುಲ್ ಡ್ರಿಲ್
![](https://risingkannada.com/wp-content/uploads/2020/07/upul-fixing-1.jpg)
ಚೇತನ್ ಕಡೂರು, ರೈಸಿಂಗ್ ಕನ್ನಡ:
2011ರ ವಿಶ್ವಕಪ್ ಫೈನಲ್ ಫಿಕ್ಸಿಂಗ್ ಆರೋಪಕ್ಕೆ ಸಂಬಂಧಿಸಿದಂತೆ ಓಪನರ್ ಉಪುಲ್ ತರಂಗಾ ಅವರನ್ನ ತನಿಖಾ ತಂಡ ತನಿಖೆ ನಡೆಸಿದೆ. ಇದರೊಂದಿಗೆ ವಿಚಾರಣೆಗೆ ಒಳಪಟ್ಟ ಮೊದಲ ಲಂಕಾ ಆಟಗಾರ ಆಗಿದ್ದಾರೆ.
9 ವರ್ಷಗಳ ಹಿಂದೆ ಮುಂಬೈನ ವಾಂಖೆಡೆಯಲ್ಲಿ ನಡೆದ ಏಕದಿನ ವಿಶ್ವಕಪ್ ಫೈನಲ್ ಪಂದ್ಯ ಫಿಕ್ಸ್ ಆಗಿತ್ತು ಎಂದು ಲಂಕಾ ತಂಡದ ಮಾಜಿ ಕ್ರೀಡಾ ಸಚಿವ ಮಹಿದಾನಂದ ಅಲತುಗಮಗೆ ಗಂಭೀರ ಆರೋಪ ಮಾಡಿದ್ದರು. ಈ ಆರೋಪಕ್ಕೆ ಸಂಬಂಧಿಸಿದಂತೆ ಲಂಕಾದ ಕ್ರೀಡಾ ಸಚಿವಾಲಯ ದೊಡ್ಡ ಮಟ್ಟದ ತನಿಖೆಗೆ ಸೂಚಿಸಿತು.
![](https://risingkannada.com/wp-content/uploads/2020/07/upul-new.jpg)
ಲಂಕಾ ಓಪನರ್ ಉಪುಲ್ ತರಂಗಾ ಅವರನ್ನ ವಿಚಾರಣೆಗೆ ಒಳಪಡಿಸಿದ ತನಿಖಾ ಅಧಿಕಾರಿಗಳ ತಂಡ ಸತತ ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಿತು. ವಿಚಾರಣೆ ನಂತರ ಹೊರ ಬಂದ ಉಪುಲ್ ತರಂಗಾ ತನಿಖೆಗೆ ಸಂಬಂಧಿಸಿದಂತೆ ಕೆಲವು ಪ್ರಶ್ನೆಗಳನ್ನ ಕೇಳಿದರು. ನಾನು ನನ್ನ ಹೇಳಿಕೆಯನ್ನ ಹೇಳಿದ್ದೇನೆ ಎಂದಿದ್ದಾರೆ.
ಉಪುಲ್ ತರಂಗಾ ಅವರನ್ನ ವಿಚಾರಣಗೆ ಒಳಪಡಿಸುವ ಮುನ್ನ ಲಂಕಾ ಪೊಲೀಸರು ಮಾಜಿ ನಾಯಕ ಅರವಿಂದ ಡಿ’ಸಿಲ್ವಾ ಮತ್ತು ಮಾಜಿ ಕ್ರೀಡಾ ಸಚಿವ ಮಹಿದಾನಂದ ಅಲತುಗಮಗೆ ಅವರನ್ನ ವಿಚಾರಣೆಗೆ ಒಳಪಡಿಸಿತ್ತು.
You may like
ಬಿಜೆಪಿ ರಾಜ್ಯಾಧ್ಯಕ್ಷರಿಗೆ ಶಾಸಕ ದೊಡ್ಡನಗೌಡ ಪಾಟೀಲ್ ಪತ್ರ: ಕೊಪ್ಪಳ ಕ್ಷೇತ್ರಕ್ಕೆ ಪ್ರಭಾಕರ್ ಚಿಣಿಗೆ ಟಿಕೆಟ್ ನೀಡುವಂತೆ ಮನವಿ
ಹಣ್ಣುಗಳನ್ನು ತಿನ್ನುವಾಗ ಈ ಟಿಪ್ಸ್ ಫಾಲೋ ಮಾಡೋದನ್ನ ಮರೆಯಬೇಡಿ!
ಬೇಸಿಗೆಯಲ್ಲಿ ಕಾವೇರಿ ನೀರಿಲ್ಲ! ಬೆಂಗಳೂರಿಗೆ ಜಲ ಕ್ಷಾಮ ಫಿಕ್ಸ್
ಫೆ.7 ರಂದು ಮಂಡ್ಯ ನಗರ ಬಂದ್ಗೆ ಕರೆ ಕೊಟ್ಟ ಸಮಾನ ಮನಸ್ಕರ ವೇದಿಕೆ
ಬೆಳಗಾವಿ ರಾಜಕಾರಣಿಗಳು ಬದುಕಿದ್ದಾರಾ.? ಜಾರಕಿಹೊಳಿ, ಕತ್ತಿ, ಹುಕ್ಕೇರಿ, ಹೆಬ್ಬಾಳ್ಕರ್ ಏನಾಗಿದ್ದಾರೆ.?
ಪ್ರಭಾಸ್ ಫ್ಯಾನ್ಸ್ ದಿಲ್ ಖುಷ್ : ಈ ವರ್ಷ ರಾಧೆ ಶ್ಯಾಮ್.. ಮುಂದಿನ ವರ್ಷ ಸಲಾರ್ ರಿಲೀಸ್ಗೆ ಮುಹೂರ್ತ ಫಿಕ್ಸ್