Featured
‘ಕಬ್ಜ’ ಸಿನಿಮಾ ಶೂಟಿಂಗ್ ಮತ್ತೆ ಶುರು : ಉಪ್ಪಿ-ಕಿಚ್ಚಿ ಚಿತ್ರಕ್ಕೆ ಬರೋಬ್ಬರಿ 40 ಸೆಟ್
ರೈಸಿಂಗ್ ಕನ್ನಡ :
ಸೆಟ್ಟೇರಿದ ದಿನದಿಂದಲೂ ದೊಡ್ಡಮಟ್ಟದಲ್ಲಿ ಸದ್ದು ಮಾಡ್ತಿರೋ ಸಿನಿಮಾ ಕಬ್ಜ. ಆರ್. ಚಂದ್ರು ನಿರ್ದೇಶನದ ಈ ಹೈವೋಲ್ಟೇಜ್ ಆ್ಯಕ್ಷನ್ ಸಿನಿಮಾದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಮಾಫಿಯಾ ಡಾನ್ ಅವತಾರದಲ್ಲಿ ಬಣ್ಣ ಹಚ್ಚಿದ್ದಾರೆ. ಅಲ್ಲದೆ, ಕಿಚ್ಚ ಸುದೀಪ್ ಎಂಟ್ರಿಯಿಂದ ಕಬ್ಜ ಖದರ್ ಡಬಲ್ ಆಗಿದೆ.
ಕೆಜಿಎಫ್ ಮಾದರಿಯಲ್ಲಿ ಎರಡು ಭಾಗಗಳಾಗಿ ಬಹಳ ಅದ್ಧೂರಿಯಾಗಿ ಕಬ್ಜ ಸಿನಿಮಾ ನಿರ್ಮಾಣವಾಗ್ತಿದೆ. ಒಂದಲ್ಲ ಎರಡಲ್ಲ ಬರೋಬ್ಬರಿ ಏಳು ಭಾಷೆಗಳಲ್ಲಿ ಸಿನಿಮಾ ಮೂಡಿ ಬರ್ತಿದ್ದು, ಅದಕ್ಕೆ ತಕ್ಕಂತೆ ಶೂಟಿಂಗ್ ನಡೀತಿದೆ. ಕಳೆದ ವರ್ಷ ಮಿನರ್ವ ಮಿಲ್ನಲ್ಲಿ ಕಬ್ಜ ಶೂಟಿಂಗ್ ಆಗಿತ್ತು. ಆದ್ರೆ, ಕೊರೋನಾದಿಂದ ಚಿತ್ರೀಕರಣಕ್ಕೆ ಬ್ರೇಕ್ ಬಿದ್ದಿತ್ತು. ಇದೀಗ ಕೊನೆಗೂ ಆರ್. ಚಂದ್ರು ಮತ್ತೆ ಕಬ್ಜ ಸಿನಿಮಾ ಕೆಲಸಗಳಿಗೆ ಚಾಲನೆ ಕೊಟ್ಟಿದ್ದಾರೆ.
ಕೊರೋನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನ ಕೈಗೊಂಡು ಕಬ್ಜ ಶೂಟಿಂಗ್ ಬುಧವಾರದಿಂದ ಶುರು ಮಾಡ್ತಿದೆ ಚಿತ್ರತಂಡ. ಕಬ್ಜ ಚಿತ್ರಕ್ಕಾಗಿ ಬರೋಬ್ಬರಿ 40 ಸೆಟ್ಗಳನ್ನ ನಿರ್ಮಾಣ ಮಾಡಲಾಗಿದೆ. ಕೆಜಿಎಫ್ ಖ್ಯಾತಿಯ ಆರ್ಟ್ ಡೈರೆಕ್ಟರ್ ಶಿವಕುಮಾರ್ ಸಾರಥ್ಯದಲ್ಲಿ ಬಗೆ ಬಗೆಯ ಸೆಟ್ಗಳು ಎದ್ದು ನಿಂತಿದೆ. ಇದೇ ಸೆಟ್ಗಳಲ್ಲಿ 2 ತಿಂಗಳ ಕಾಲ ಚಿತ್ರೀಕರಣಕ್ಕೆ ಪ್ಲಾನ್ ಮಾಡಲಾಗ್ತಿದೆ. ತೆಲುಗಿನ ಗನಿ ಸಿನಿಮಾ ಶೂಟಿಂಗ್ ಹೋಗಿದ್ದ ಉಪೇಂದ್ರ ಶೀಘ್ರದಲ್ಲೇ ಕಬ್ಜ ಸೆಟ್ ಸೇರಿಕೊಳ್ಳಲಿದ್ದಾರೆ.
ಕಬ್ಜ ಚಿತ್ರದಲ್ಲಿ ಕಿಚ್ಚ ಸುದೀಪ್ ಭಾರ್ಗವ ಭಕ್ಷಿ ಅನ್ನೋ ಖಡಕ್ ರೋಲ್ ಮಾಡ್ತಿದ್ದಾರೆ. ಅಕ್ಕಪಕ್ಕದ ಇಂಡಸ್ಟ್ರಿಯ ಘಟಾನುಘಟಿ ಕಲಾವಿದರು ಕಬ್ಜ ಚಿತ್ರದಲ್ಲಿ ನಟಿಸ್ತಿದ್ದಾರೆ. ಸಹಜವಾಗಿಯೇ ಸಿನಿಮಾ ಮೇಲೆ ಕುತೂಹಲ ಮೂಡಿದೆ. ಬಹುಕೋಟಿ ವೆಚ್ಚದಲ್ಲಿ ಆರ್. ಚಂದ್ರು ಕಬ್ಜ ಚಿತ್ರವನ್ನ ಕಟ್ಟಿಕೊಡ್ತಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?