ಟಾಪ್ ನ್ಯೂಸ್
ಐಕ್ಯತಾ ಸಮಾವೇಶ: ಐಎಎಸ್ ಅಧಿಕಾರಿಗಳಿಗೆ ಹೊಣೆ: ಯಾರಿಗೆ ಏನೇನು ಜವಾಬ್ದಾರಿ?
![](https://risingkannada.com/wp-content/uploads/2024/02/s-v-prasadh.jpg)
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಸಂವಿಧಾನದ ಐಕ್ಯತಾ ಸಮಾವೇಶ ಅಚ್ಚುಕಟ್ಟಾಗಿ ಮೂಡಿ ಬರಲು ಐಎಎಸ್ ಅಧಿಕಾರಿಗಳಿಗೆ ಒಂದೊಂದು ಜವಾಬ್ದಾರಿಯನ್ನ ವಹಿಸಲಾಗಿದೆ.
ಈ ಕೆಳಕಂಡಂತೆ ಜವಾಬ್ದಾರಿಗಳನ್ನ ಅಧಿಕಾರಿಗಳಿಗೆ ನೀಡಲಾಗಿದೆ .ಬಿಬಿಎಂಪಿ ವಿಶೇಷ ಆಯುಕ್ತ ಮೌನೇಶ್ ಮೌದ್ಗಿಲ್ ರವರಿಗೆ ಅತಿಥಿಗಳ ವಾಸ್ತವ್ಯ ಮತ್ತು ಭದ್ರತೆ ಜವಾಬ್ದಾರಿ ವಹಿಸಲಾಗಿದೆ
ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್. ವಿ ಪ್ರಸಾದ್ ರಿಗೆ ಬರುವ ಅತಿಥಿಗಳಿಗೆ ಸಾರಿಗೆ ಸೌಲ್ಯಭ್ಯ ಜವಾಬ್ದಾರಿ ನೀಡಲಾಗಿದೆ.
ಜಗದೀಶ್. ಜಿ ಅವರಿಗೆ ಊಟೋಪಚಾರದ ವ್ಯವಸ್ಥೆ ಕಲ್ಪಿಸುವ ಹೊಣೆ ಹೊರಿಸಲಾಗಿದೆ
ಕೆಎಸ್ ಆರ್ ಟಿಸಿ ಎಂ.ಡಿ ಅನೂಪ್ ಕುಮಾರ್ ರವರಿಗೆ ಅರಮನೆ ಮೈದಾನದ ಕೃಷ್ಣ ವಿಹಾರ ಸ್ಥಳ ನಿರ್ವಹಣೆ ಜವಾಬ್ದಾರಿಯನ್ನ ವಹಿಸಲಾಗಿದೆ. ಐಎಎಸ್ ಅಧಿಕಾರಿ ಎನ್. ಮಂಜುಳ ಅವರಿಗೆ ಸಾಂಸ್ಕೃತಿಕ ಕಾರ್ಯಕ್ರಮದ ಜೊತೆಗೆ ಆಹ್ವಾನಿತರಿಗೆ ವಿಶೇಷ ಊಟೋಪಚಾರದ ಹೊಣೆ ನೀಡಲಾಗಿದೆ
ಐಪಿಎಸ್ ಅಧಿಕಾರಿ ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್ ರವರಿಗೆ ಭದ್ರತೆ ಜವಾಬ್ದಾರಿ ನೀಡಲಾಗಿದೆ.
ಐಪಿಎಸ್ ಅಧಿಕಾರಿ ಎಂ.ಎನ್ ಅನುಚೇತ್ ಜಂಟಿ ಪೊಲೀಸ್ ಆಯುಕ್ತ, ಸಂಚಾರ ಇವರಿಗೆ ಸುಗಮ ಸಂಚಾರ ವ್ಯವಸ್ಥೆ ಜವಾಬ್ದಾರಿ ವಹಿಸಲಾಗಿದೆ. ಶಿಕ್ಷಣ ಇಲಾಖೆ ಆಯುಕ್ತೆ ಬಿ.ಬಿ ಕಾವೇರಿ ಅವರಿಗೆ ಪ್ರಶಸ್ತಿ ಪತ್ರಗಳನ್ನ ವಿತರಣೆ ಮಾಡುವ ಜವಾಬ್ದಾರಿ ನೀಡಲಾಗಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?