Featured
ಕಬ್ಬಿನ ಗದ್ದೆಯಲ್ಲಿ ಅಕ್ರಮ ಗಾಂಜಾ ಬೆಳೆ; ಕುಡಚಿಯಲ್ಲಿ ಇಬ್ಬರ ಬಂಧನ
![](https://risingkannada.com/wp-content/uploads/2020/09/chikkodi.jpg)
ರೈಸಿಂಗ್ ಕನ್ನಡ:
ಚಿಕ್ಕೋಡಿ:
ಅಕ್ರಮವಾಗಿ ಗಾಂಜಾವನ್ನು ಕಬ್ಬಿನ ಬೆಳೆಯಲ್ಲಿ ಬೆಳೆದ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನಲೆಯಲ್ಲಿ ಕುಡಚಿ ಪೋಲಿಸ ಠಾಣೆಯ ಸಿಬ್ಬಂದಿಗಳು ದಾಳಿ ಮಾಡಿ 1.20 ಲಕ್ಷ ಮೌಲ್ಯದ ಗಾಂಜಾವನ್ನು ವಂಶಪಡಿಸಿಕೊಂಡು ಇಬ್ಬರನ್ನು ವಶಕ್ಕೆ ಪಡೆದ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಸುಟ್ಟಟ್ಟಿ ಗ್ರಾಮದ ಲಕ್ಕಪ್ಪ ಸತ್ಯಪ್ಪ ಖೋತ (60) ಲಕ್ಷ್ಮಣ ಲಕ್ಕಪ್ಪ ಖೋತ (35) ಇವರುಗಳನ್ನ ಬಂಧಿಸಲಾಗಿದೆ.
ಜಾಹೀರಾತು
ಅಕ್ರಮವಾಗಿ ತಮ್ಮ ಸ್ವತ ಲಾಭಕ್ಕಾಗಿ ಇವರ ಕಬ್ಬಿನ ಬೆಳೆಯಲ್ಲಿ ಗಾಂಜಾ ಬೆಳೆದ ಬಗ್ಗೆ ಖಚಿತ ಮಾಹಿತಿಯನ್ನು ಪಡೆದುಕೊಂಡು ಕುಡಚಿ ಪೋಲಿಸ ಠಾಣೆಯ ಪಿ ಎಸ್ ಐ ಹಾಗೂ ಪೋಲಿಸ್ ಸಿಬ್ಬಂದಿಗಳು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂದಿಸಿದ್ದು ಆರೋಪಿತ ಜಮೀನದಲ್ಲಿಂದ ಸುಮಾರು 1.20000 ರೂಪಾಯಿಗಳ ಬೆಲೆಯ 120 ಕೆ.ಜಿ ಗಾಂಜಾ ವಂಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಕುಡಚಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿ ಎಸ್ ಪಿ, ಚಿಕ್ಕೋಡಿಯ ಡಿ ವೈ ಎಸ್ ಪಿ ಹಾಗೂ ಸಿಪಿಐ ರಾಯಬಾಗ ಅವರುಗಳ ಮಾರ್ಗದರ್ಶದಲ್ಲಿ ಕುಡಚಿ ಪೋಲಿಸ ಠಾಣೆಯ ಪಿ ಎಸ್ ಐ ಶಿವರಾಜ ಧರಿಗೋಣ ಠಾಣೆಯ ಸಿಬ್ಬಂದಿಗಳಾದ ಪಿ ಎಲ್ ಖವಟಕೊಪ್ಪ, ಕೆ. ಆರ್ ಸಾಳುಂಕೆ, ಆನಂದ ತೇರದಾಳ, ಎಚ್ ಎಸ್ ಗುಡ್ಡದ, ಆನಂದ ಪೂಜೇರಿ, ಎ ಎ ಮುದ್ನಾಳ, ಎಮ್ ಕೆ ಯಲ್ಲಟ್ಟಿ ಕಾರ್ಯಾಚರಣೆ ನಡೆಸುವಲ್ಲಿ ಯಶ್ವಸಿಯಾಗಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?