Featured
ಆಟವಾಡಲು ಹೋಗಿ ನೀರಿನ ಹೊಂಡದಲ್ಲಿ ಬಿದ್ದು ಅವಳಿ ಮಕ್ಕಳು ಸಾವು : ಅಯ್ಯೋ ವಿಧಿಯೇ..
ಬೀದರ್ : ಆಟವಾಡಲು ಹೋಗಿದ್ದ ಅವಳಿ ಮಕ್ಕಳು ಶವವಾಗಿ ಪತ್ತೆಯಾಗಿರೋ ದಾರುಣ ಘಟನೆ ಬೀದರ್ನಲ್ಲಿ ನಡೆದಿದೆ. ಶನಿವಾರ ಬೆಳಿಗ್ಗೆಯಿಂದ ಅವಳಿ ಮಕ್ಕಳು ನಾಪತ್ತೆಯಾಗಿದ್ದರು. ಬೀದರ್ ಜಿಲ್ಲೆಯ ಬಸವಕಲ್ಯಾಣದ ಶಿವಾಜಿ ಚೌಕ್ ಬಳಿ ಇರುವ ನೀರಿನ ಹೊಂಡದಲ್ಲಿ ಇಬ್ಬರು ಮಕ್ಕಳ ಮೃತದೇಹ ಸಿಕ್ಕಿದೆ.
ನಿತೀನ್ ಸೂರ್ಯವಂಶಿ ಎಂಬುವವರ ಮಕ್ಕಳಾದ ಐದು ವರ್ಷದ ಆರ್ಯನ್ ಹಾಗೂ ದರ್ಶನ್ ಮೃತ ದುರ್ದೈವಿಗಳು. ಮಳೆಯಾಗಿದ್ದರಿಂದ ಹೊಂಡದಲ್ಲಿ ಸುಮಾರು ಎಂಟು ಅಡಿಯಷ್ಟು ನೀರು ತುಂಬಿಕೊಂಡಿತ್ತು. ಶನಿವಾರ ಆಟವಾಡಲು ಹೋಗಿದ್ದ ಇಬ್ಬರೂ ಕೂಡ ಹೊಂಡದಲ್ಲಿ ಬಿದ್ದಿದ್ದಾರೆ. ಸಂಜೆಯಾದ್ರು ಮನೆಗೆ ಬಾರದ ಮಕ್ಕಳ ಹುಡುಕಾಟ ನಡೆಸಿದ್ರು. ಬಳಿಕ ಪೊಲೀಸರಿಗೂ ದೂರು ನೀಡಿದ್ರು.
ರಾತ್ರಿ ಹುಡುಕಾಟ ನಡೆಸುವಾಗ, ಅವಳಿ ಮಕ್ಕಳ ಮೃತದೇಹ ಸಿಕ್ಕಿದೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಬಸವಕಲ್ಯಾಣ ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಮಕ್ಕಳನ್ನ ಆಟಕ್ಕೆ ಬಿಡುವಾಗ ಎಚ್ಚರ ವಹಿಸಬೇಕು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?