Connect with us

ಬೆಂಗಳೂರು

ತಾಯಿಯನ್ನೇ ಕೊಂದ ಮಗನ ಕೇಸಿಗೆ ಟ್ವಿಸ್ಟ್..!
ಎಫ್ ಎಸ್ ಎಲ್ ವರದಿ ಬಿಚ್ಚಿಟ್ಟ ಸತ್ಯವೇನು ?

ಬೆಂಗಳೂರು : ತಂದೆಗೆ ಮಗನ ಮೇಲೆ ಪ್ರೀತಿ…ಮಗನಿಗೆ ಅಪ್ಪನ ಮೇಲೆ ಕಾಳಜಿ.. ಅಪ್ಪ ಮಗ ಇಬ್ಬರು ಸೇರಿ ಮಾಡಿದ ಮಾಸ್ಪರ್ ಪ್ಲ್ಯಾನ್ ಉಲ್ಟಾ ಹೊಡೆದಿದೆ.. ಇದೀಗ ಇಬ್ಬರು ಆರೋಪಿಗಳು ಜೈಲು ಸೇರಿದ್ದಾರೆ.. ಹೌದು ಇತ್ತೀಚೆಗೆ ಕೆಆರ್​​ಪುರಂ ಠಾಣಾ ವ್ಯಾಪ್ತಿಯಲ್ಲಿ ತಿಂಡಿ ಮಾಡಿಲ್ಲ ಅಂತಾ ತಾಯಿಯನ್ನ ಮಗನೇ ಹತ್ಯೆಗೈದ ಪ್ರಕರಣ ಬೆಳಕಿಗೆ ಬಂದಿತ್ತು. ಅಂದ್ರೆ ಇದೀಗ ಕೊಲೆ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್​ ಸಿಕ್ಕಿದೆ. ಹೌದು, ನೇತ್ರಾ ಎಂಬಾಕೆಯನ್ನು ಮಗ ಪವನ್​ ಕೊಲೆ ಮಾಡಿದ್ದನು. ರಾಡ್​ನಿಂದ ಹೊಡೆದು ಸಾಯಿಸಿದ್ದನು. ಹೀಗಾಗಿ ಅಪ್ರಾಪ್ತನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆದರೆ ಮಗನ ವಿಚಾರಣೆ ವೇಳೆ ಸತ್ಯ ಹೊರಬಿದ್ದಿದೆ.

ಅಪ್ಪ ಮಗ ಸೇರಿ ಮಾಡಿದ್ರು ಮರ್ಡರ್!
ಐಷಾರಾಮಿ ಹುಚ್ಚಿಗೆ ಬಿದ್ದಿದ್ದ ನೇತ್ರಾ?


ನೇತ್ರಾ ಪಾರ್ಟಿಗೀರ್ಟಿ, ಐಷಾರಾಮಿ ಹುಚ್ಚಿಗೆ ಬಿದ್ದು ಗಂಡ, ಮಗನಿಂದಲೇ ಕೊಲೆಯಾಗಿದ್ದಾಳೆ. ಕೊಲೆ ನಡೆದ ಕೂಡಲೇ ಮಗ ಪವನ್ ಪೊಲೀಸರಿಗೆ ಕರೆ ಮಾಡಿ ಶರಣಾಗಿದ್ದನು. ಆದ್ರೆ ತನಿಖೆ ವೇಳೆ ನೇತ್ರಾಳನ್ನು ಗಂಡ, ಮಗ ಸೇರಿಕೊಂಡು ಕೊಲೆ ಮಾಡಿದ್ದಾರೆ ಎಂಬುದು ಬೆಳಕಿಗೆ ಬಂದಿದೆ. ರಾಡ್ ನಿಂದ ಹೊಡೆದು ನೇತ್ರಾಳನ್ನು ಕೊಲೆ ಮಾಡಲಾಗಿತ್ತು. ಹಾಗಾಗಿ ಎಫ್ ಎಸ್ ಎಲ್ ಪರಿಶೀಲನೆ ವೇಳೆ ಮಹಿಳೆ ಪತಿಯ ಕೈವಾಡವೂ ಬೆಳಕಿಗೆ ಬಂದಿದೆ. ವೆಪನ್ ವಶಪಡೆದು ಎಫ್ ಎಸ್ ಎಲ್ ಗೆ ಕಳಿಸಿದ್ದಾಗ ರಾಡ್ ನ ಮೇಲೆ ಇಬ್ಬರ ಫಿಂಗರ್ ಪ್ರಿಂಟ್ ಪತ್ತೆಯಾಗಿದೆ. ಪತಿ ಚಂದ್ರಪ್ಪ ಕೂಡ ಕೊಲೆಯಲ್ಲಿ‌ ಭಾಗಿ ಅನ್ನೋದು ಗೊತ್ತಾಗಿದೆ.

ಅವಳ ಅಕ್ರಮ ಸಂಬಂಧದ ಬಗ್ಗೆ ಅನುಮಾನ!
ಅಪ್ಪನನ್ನ ಪಾರು ಮಾಡೋಕೆ ಮಗ ಸರೆಂಡರ್


ಪಾರ್ಟಿಗೀರ್ಟಿ, ಐಷಾರಾಮಿ ಹುಚ್ಚಿಗೆ ಬಿದ್ದಿದ್ದ ನೇತ್ರಾ, ಮನೆ ಬಿಟ್ಟು ಹೊರಗಡೆಯೇ ಹೆಚ್ಚು ಓಡಾಟ ನಡೆಸುತ್ತಿದ್ದಳು. ಅಲ್ಲದೇ ಪತಿ ಚಂದ್ರಪ್ಪಗೆ ಆಕೆಯ ಮೇಲೆ ಅಕ್ರಮ ಸಂಬಂಧದ ಬಗ್ಗೆಯೂ ಅನುಮಾನವಿತ್ತು. ಈ ವಿಚಾರವಾಗಿ ಆಗಾಗ ಜಗಳ ಆಗುತ್ತಿತ್ತು. ಮಾತ್ರವಲ್ಲದೆ, ನೇತ್ರಾ ಗಂಡ ಮಗನಿಗೆ ಅಡುಗೆ ಮಾಡಿ ಹಾಕದೆ ಹೊರಗಡೆಯೇ ಸುತ್ತಾಡುತ್ತಿದ್ದಳು. ಈ ಎಲ್ಲಾ ವಿಚಾರವಾಗಿ ಮನೇಲಿ ಆಗಾಗ ಜಗಳ ಆಗ್ತಿತ್ತು.

ಒಂದು ಬಾರಿ ಮಗನ ಮುಂದೆಯೇ ಬೇರೊಬ್ಬನ ಜೊತೆ ನೇತ್ರಾ ಸಿಕ್ಕಿಬಿದ್ದಿದ್ದಳು. ಈ ವಿಚಾರ ಮಗನ ತಲೆ ಕೆಡಿಸಿತ್ತು. 2ನೇ ತಾರೀಖು ಅಡುಗೆ ಮಾಡೋ ವಿಚಾರಕ್ಕೆ ಮತ್ತೆ ಜಗಳ ನಡೆದಿದೆ. ಈ ವೇಳೆ ಜಗಳ ಜೋರಾಗಿ ಚಂದ್ರಪ್ಪ ರಾಡ್ ನಿಂದ ಪತ್ನಿಯ ತಲೆಗೆ ಹೊಡೆದಿದ್ದಾನೆ. ಗಂಡನ ಹೊಡೆತಕ್ಕೆ ನೇತ್ರಾ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

ಅತ್ತ ಮಗನಿಗೆ ಅಪ್ಪನ ಚಿಂತೆ, ಅಮ್ಮನ ಮೇಲಿನ ಕೋಪ, ಅಪ್ಪ ಜೈಲಿಗೆ ಹೋಗೋದು ಬೇಡ ಅಂತ ಅಪ್ರಾಪ್ತ ತಾನೇ ಕೊಲೆ ಕೇಸ್ ಮೈಮೇಲೆ ಹಾಕೊಂಡಿದ್ದಾನೆ. ಅದಕ್ಕೆ ತಾಯಿ ಸತ್ತಮೇಲೆ ಅದೇ ರಾಡ್ ನಿಂದ ತಾನೂ ಎರಡು ಮೂರು ಏಟು ಹೊಡೆದಿದ್ದಾನೆ. ನಂತರ ತಂದೆಯನ್ನ ಹೊರ ಕಳಿಸಿ ತಾನೇ ಕೊಲೆ ಮಾಡಿದ್ದಾಗಿ ಪೊಲೀಸರ ಮುಂದೆ ಶರಣಾಗಿದ್ದಾನೆ.

ಒಳಗಡೆ ಹೋದ್ರೆ ಜೈಲಿನಲ್ಲಿ ಓದೋಕೆ ಅವಕಾಶ ಸಿಗುತ್ತೆ. ಇತ್ತ ತಂದೆಯೂ ಹೊರಗಡೆ ದುಡಿದು ಹಣ ಮಾಡ್ಬೋದು. ನಂತರ ಬಿಡುಗಡೆಯಾಗಿ ತಂದೆ ಜೊತೆ ಜೀವನ ಮಾಡಬಹುದು ಎಂದುಕೊಂಡಿದ್ದನು. ಆದ್ರೆ ಎಫ್ಎಸ್ ಎಲ್ ಪರಿಶೀಲನೆ ವೇಳೆ ಇಬ್ಬರು ಕೊಲೆ ಮಾಡಿರೋದು ಬೆಳಕಿಗೆ ಬಂದಿದೆ. ಸದ್ಯ ತಂದೆ ಮಗನನ್ನ ಪೊಲೀಸರು ವಶಕ್ಕೆ ಪಡೆದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರು8 months ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು8 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್8 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು8 months ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು8 months ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು8 months ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು8 months ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು8 months ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು8 months ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು8 months ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured3 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured5 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured4 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured2 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ6 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured5 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured5 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured5 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured11 months ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured2 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ